ಮೀನುಗಾರರ ನಾಪತ್ತೆ ಮಾಹಿತಿಯೇ ಇಲ್ಲ: ಅನಂತಕುಮಾರ ವಿರುದ್ಧ ನಾಡಗೌಡ ವಾಗ್ದಾಳಿ

ಮಂಗಳವಾರ, ಏಪ್ರಿಲ್ 23, 2019
25 °C

ಮೀನುಗಾರರ ನಾಪತ್ತೆ ಮಾಹಿತಿಯೇ ಇಲ್ಲ: ಅನಂತಕುಮಾರ ವಿರುದ್ಧ ನಾಡಗೌಡ ವಾಗ್ದಾಳಿ

Published:
Updated:

ವಿಜಯಪುರ: ‘ಏಳು ಮೀನುಗಾರರು ನಾಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದಿನವರೆಗೂ ಯಾವೊಂದು ಖಚಿತ ಮಾಹಿತಿ ಲಭ್ಯವಾಗದಾಗಿದೆ’ ಎಂದು ಸಚಿವ ವೆಂಕಟರಾವ ನಾಡಗೌಡ ತಿಳಿಸಿದರು.

‘ಮೀನುಗಾರರು ತೆರಳಿದ್ದ ದೋಣಿ ಮಹಾರಾಷ್ಟ್ರ ವ್ಯಾಪ್ತಿಯಲ್ಲಿ ನಾಪತ್ತೆಯಾಗಿದೆ ಎಂಬುದಷ್ಟೇ ಗೊತ್ತಾಗಿದೆ. ಅದು ಮುಳುಗಿದೆಯೋ ? ಮೀನುಗಾರರನ್ನು ಸೆರೆ ಹಿಡಿದು ಬಂಧನದಲ್ಲಿಟ್ಟಿದ್ದಾರೋ ? ಅಥವಾ ಮೃತಪಟ್ಟಿದ್ದಾರೋ ? ಯಾವೊಂದು ಮಾಹಿತಿಯೂ ಸಿಗದಾಗಿದೆ’ ಎಂದು ಶುಕ್ರವಾರ ಇಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

‘ನಾಪತ್ತೆಯಾದ ಏಳು ಮೀನುಗಾರರ ಪತ್ತೆಗಾಗಿ ಹಲವು ಕ್ರಮ ಕೈಗೊಳ್ಳಲಾಗಿದೆ. ನೆರೆಯ ಮಹಾರಾಷ್ಟ್ರ ಸರ್ಕಾರಕ್ಕೂ ಪತ್ರ ಬರೆಯಲಾಗಿದೆ. ಕೇಂದ್ರ ಸರ್ಕಾರಕ್ಕೂ ಮನವಿ ಮಾಡಿಕೊಂಡಿದ್ದರೂ; ಸ್ಪಂದನೆ ಮಾತ್ರ ಸಿಗದಾಗಿದೆ’ ಎಂದು ನಾಡಗೌಡ ದೂರಿದರು.

‘ನಾಪತ್ತೆಯಾಗಿರುವ ಮೀನುಗಾರರಲ್ಲಿ ಐದು ಮಂದಿ ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಪ್ರತಿನಿಧಿಸುವ ಲೋಕಸಭಾ ಕ್ಷೇತ್ರದವರು ಇದ್ದಾರೆ. ಸೌಜನ್ಯಕ್ಕೂ ಒಮ್ಮೆಯೂ ಹೆಗಡೆ ಈ ಕುಟುಂಬಗಳ ಆತಂಕ ನಿವಾರಿಸುವ ಕೆಲಸ ಮಾಡಿಲ್ಲ. ಕಷ್ಟಕ್ಕೆ ನೆರವಾಗಿಲ್ಲ’ ಎಂದು ಸಚಿವರು ವಾಗ್ದಾಳಿ ನಡೆಸಿದರು.

ಉಪಕರಣ ಅಳವಡಿಕೆ: ‘ಮೀನುಗಾರರ ನಾಪತ್ತೆ ಪ್ರಕರಣ ಮರುಕಳಿಸದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಿದ್ದೇವೆ. ಇಸ್ರೋ ನೆರವಿನೊಂದಿಗೆ ದೂರ ಹೋಗುವ ದೋಣಿಗಳಿಗೆ, ವಿಶೇಷ ಸಾಧನ ಅಳವಡಿಸಲಾಗುವುದು. ಇದಕ್ಕಾಗಿ ₹ 100 ಕೋಟಿ ಮೀಸಲಿಡಲಾಗುವುದು. ಶೇ 50ರ ಸಬ್ಸಿಡಿ ದರದಲ್ಲಿ ಬೋಟ್‌ಗಳಿಗೆ ಅಳವಡಿಸುವ ಯೋಜನೆಯೊಂದನ್ನು ರೂಪಿಸಲಾಗುತ್ತಿದೆ’ ಎಂದು ಅವರು ಹೇಳಿದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !