ಮನ ಗಮನಗಳ ವ್ಯಾಯಾಮ ಪಿಲಾಟೆಸ್‌

7

ಮನ ಗಮನಗಳ ವ್ಯಾಯಾಮ ಪಿಲಾಟೆಸ್‌

Published:
Updated:

ಇಲ್ಲಿ ವ್ಯಾಯಾಮವಿದೆ. ಧ್ಯಾನವಿದೆ. ಕ್ರಿಯೆ ಇದೆ. ಪ್ರಕ್ರಿಯೆ ಇದೆ. ಇವೆರಡನ್ನೂ ಒಗ್ಗೂಡಿಸುವಂಥ ಯೋಗವಿದೆ. ಅದೇ ಪಿಲಾಟೆಸ್‌. ಜರ್ಮನಿಯ ತಂತ್ರಜ್ಞಾನವಿರುವ ಫಿಟ್‌ನೆಸ್‌ನ ಒಂದು ಬಗೆಯ ಕಸರತ್ತಿದು. ಕಸರತ್ತೂ ಹೌದು. ಕೌಶಲವೂ ಹೌದು.

ನಿಮ್ಮೆಲ್ಲ ಕ್ರಿಯೆಗಳೂ ಇಲ್ಲಿ ಗುರು ಅಥವಾ ಸಲಹೆಗಾರನ ಸೂಚನೆಗಳನ್ನು ಅನುಸರಿಸುತ್ತಿರುತ್ತವೆ. ಆಗ ಒಳಮನಸು, ಜಾಗೃತವಾಗಿ, ಜಾಗೃತಾವಸ್ಥೆಯೂ ಮನಸಿನೊಂದಿಗೆ ಸಂಯೋಗ ಸಾಧಿಸಿ, ಮನ, ಗಮನಗಳೆರಡೂ ಒಂದಾಗುವಂತೆ ಮಾಡುವುದೇ ಪಿಲಾಟೆಸ್‌

ಇಲ್ಲಿ ನಿಮ್ಮ ಮಾರ್ಗದರ್ಶಕ ಸೂಚನೆಗಳನ್ನು ನೀಡುತ್ತಿರುತ್ತಾನೆ. ಉಸಿರಾಡಿ, ಉಸಿರುಬಿಡಿ, ಕೈ ಎತ್ತಿ, ಕಾಲೆತ್ತಿ, ಕೈ ಕೆಳಗಿಳಿಸಿ, ಹೀಗೆ ನಿರಂತರವಾಗಿ ಸೂಚನೆಗಳು ಬರುತ್ತಲೇ ಇರುತ್ತವೆ. ಅವನ್ನು ಅನುಸರಿಸುತ್ತಲಿರುವುದೇ ನಮ್ಮ ಕೆಲಸವಾಗಬೇಕು. ಮೊದಮೊದಲು ಕಿರಿಕಿರಿಯೆನಿಸಿದರೂ ಆಮೇಲಾಮೇಲೆ ಅದು ಅಭ್ಯಾಸವಾಗುತ್ತ ಹೋಗುತ್ತದೆ. ಮನಸು ಕೇವಲ ಗುರುವಿನ ಅಣತಿಯತ್ತಲೇ ಗಮನ ಹರಿಸುತ್ತದೆ. ಹೀಗಾದಾಗ ನಿಮ್ಮ ಉಚ್ವಾಸದೊಂದಿಗೆ ಆಮ್ಲಜನಕ ಇಡೀ ದೇಹವನ್ನು ಆವರಿಸುತ್ತದೆ.‌

ದೇಹದ ಪ್ರತಿಯೊಂದು ಅಂಗವೂ ನಿಮಗೇ ಪರಿಚಿತವಾಗುತ್ತ ಹೋಗುತ್ತದೆ. ಹೀಗೆ ಪರಿಚಯಿಸುವುದು ಕ್ರಿಯೆ. ಪರಿಚಯಿಸಿಕೊಳ್ಳುತ್ತ ಹೋಗುವುದು ಪ್ರಕ್ರಿಯೆ. ಈ ಕ್ರಿಯೆ ಹಾಗೂ ಪ್ರಕ್ರಿಯೆಗಳ ನಡುವೆ ಒಂದು ಬಾಂಧವ್ಯ ಏರ್ಪಡುತ್ತದೆ. ಅದು ನಮ್ಮನ್ನು ನಾವೇ ಪ್ರೀತಿಸುವಂತೆ ಮಾಡುತ್ತದೆ. ಮನಸು ಮತ್ತೇನನ್ನೂ ಯೋಚಿಸದ ಸ್ಥಿತಿಗೆ ತಂದೊಡ್ಡುತ್ತದೆ. ಇಡೀ ವಿಶ್ವದಲ್ಲಿ ನಾವು, ನಮ್ಮ ಮನಸು, ದೇಹ, ಕ್ರಿಯೆಗಳೇ ಹೆಚ್ಚು ಮಹತ್ವ ಪಡೆಯುತ್ತವೆ. ಇದು ಆತ್ಮವಿಶ್ವಾಸ ನೀಡುತ್ತದೆ. ಆತ್ಮಸ್ಥೈರ್ಯವೂ ಹೆಚ್ಚುತ್ತದೆ. ಜೀವನ ಪ್ರೀತಿಯೂ ಮೂಡುತ್ತದೆ.

ಜರ್ಮನ್‌ನ ಜೋಸೆಫ್‌ ಪಿಲಾಟೆ ಈ ಬಗೆಯ ವ್ಯಾಯಾಮವನ್ನು  ಪರಿಚಯಿಸಿದರು. ತೀರ ಹೊಸತೆನಿಸುವ ಈ ತಂತ್ರವನ್ನು 1967ರಲ್ಲಿ  ಜೋಸೆಫ್ ಮರಣದ ನಂತರ ಶಿಷ್ಯರು ಇದನ್ನು ಜನಪ್ರಿಯಗೊಳಿಸಿದರು.

ಪಿಲಾಟೆಸ್‌ ಯಾರೆಲ್ಲ ಮಾಡಬಹುದು?

ಮಾಡಬೇಕು ಎಂದು ಬಯಸಿದವರೆಲ್ಲರೂ ಮಾಡಬಹುದು. ಬಾಣಂತಿ, ಗರ್ಭಿಣಿ, ಹಿರಿಯ ವಯಸ್ಕರು, ಕಿರಿಯರು ಹೀಗೆ ಯಾರಿದ್ದರೂ ಸರಿ, ನಿರ್ದೇಶನಗಳನ್ನು ಪಾಲಿಸುವ ಮನಸು ಮಾಡಿದರೆ ಸಾಕು. ಯಾರು ಬೇಕಾದರೂ ಆರಂಭಿಸಬಹುದು.

ಯಾರೆಲ್ಲ ಪಿಲಾಟೆಸ್‌ ಮೊರೆ ಹೋಗಿದ್ದಾರೆ?

ದೀಪಿಕಾ ಪಡಕೋಣೆ, ಶಿಲ್ಪಾಶೆಟ್ಟಿಯಂಥ ನಟಿಯರಿಂದ ಆರಂಭಿಸಿ, ಬಾಲಿವುಡ್‌ನಲ್ಲಿ ಎಲ್ಲರೂ ಪಿಲಾಟೆಸ್‌ ಮೊರೆ ಹೋಗಿದ್ದಾರೆ. ಮನಸಿಗೆ ಶಾಂತಿ ಸಿಗುತ್ತದೆ ಎಂಬುದು ಅವರ ಅಭಿಪ್ರಾಯವಾಗಿದೆ.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !