ಲಘು ವಿಮಾನ ಪತನ: 5 ಸಾವು

7

ಲಘು ವಿಮಾನ ಪತನ: 5 ಸಾವು

Published:
Updated:

ನೈರೋಬಿ (ಎಎಫ್‌ಪಿ): ಕೀನ್ಯಾದ ಮಾಸೈಮಾರ ವನ್ಯಜೀವಿ ಮೀಸಲುಪ್ರದೇಶದ ಬಳಿ ಲಘು ವಿಮಾನ ಅಪಘಾತಕ್ಕೆ ಒಳ
ಗಾಗಿ ಐವರು ಮೃತಪಟ್ಟಿದ್ದಾರೆ ಎಂದು ಪೊಲೀಸರು ಬುಧವಾರ ತಿಳಿಸಿದ್ದಾರೆ.

‘ಮಸಾಯ್‌ಮಾರಾದಿಂದ ಲೋಡ್‌ ವಾರ್‌ಗೆ ತೆರಳುತ್ತಿದ್ದ ಲಘು ವಿಮಾನ ತುರ್ಕನಾ ಸರೋವರದ ಬಳಿಯಿಂದ ಹತ್ತು ಕಿಲೋಮೀಟರ್ ಹಾರಾಟ ನಡೆಸಿ ಕುಸಿದು ಬಿದ್ದಿದೆ’ ಎಂದು ಪೊಲೀಸರು ತಿಳಿಸಿದ್ದಾರೆ.

 ರಾಷ್ಟ್ರೀಯ ಏರ್‌ಲೈನ್ ಕೀನ್ಯಾ ವಿಮಾನಯಾನ ಸಂಸ್ಥೆ ಕಡಿಮೆ ವೆಚ್ಚದಲ್ಲಿ ಗುಣಮಟ್ಟವಿಲ್ಲದೆ ಕಾರ್ಯನಿರ್ವಹಿಸುತ್ತಿದೆ. ಕಳೆದ ಜೂನ್‌ನಲ್ಲಿ ಅಬೆರ್ಡರೆಸ್ ಪರ್ವತ ಶ್ರೇಣಿಯಲ್ಲಿ ವಿಮಾನ ಪತನಗೊಂಡು 10 ಜನರು ಮೃತಪಟ್ಟಿದ್ದರು. 2017ರ ಅಕ್ಟೋಬರ್‌ನಲ್ಲಿ ನಕ್ಸೂರಿನ ಸರೋವರದ ಬಳಿ ಹೆಲಿಕಾಪ್ಟರ್ ಅಪಘಾತಕ್ಕೊಳಗಾಗಿ ಐವರು ಮೃತಪಟ್ಟಿದ್ದರು. 2012ರಲ್ಲಿ ಭದ್ರತಾ ಸಚಿವ ಜಾರ್ಜ್ ಸೈಟೋತಿ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ಅಪಘಾತಕ್ಕೀಡಾಗಿ ಆರು ಮಂದಿ ಮೃತಪಟ್ಟಿದ್ದರು.

2007ರಲ್ಲಿ ಅಬಿಡಾಜಾನ್‌ನಿಂದ ನ್ಯುಬಬಿಯಕ್ಕೆ ಪ್ರಯಾಣಿಸುತ್ತಿದ್ದ ಕೀನ್ಯಾ ಏರ್‌ವೇಸ್ ವಿಮಾನ ಪತನಗೊಂಡು 114 ಪ್ರಯಾಣಿಕರನ್ನು ಬಲಿಪಡೆದಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 1

  Sad
 • 0

  Frustrated
 • 0

  Angry

Comments:

0 comments

Write the first review for this !