ಬಿಜೆಪಿ ಕಚೇರಿ ಮುಂದಿನ ಧ್ವಜ ತೆರವು ಪ್ರಶ್ನಿಸಿದ್ದ ಅರ್ಜಿ: ಮೇಲ್ಮನವಿ ಸಲ್ಲಿಕೆ

ಮಂಗಳವಾರ, ಮಾರ್ಚ್ 19, 2019
20 °C

ಬಿಜೆಪಿ ಕಚೇರಿ ಮುಂದಿನ ಧ್ವಜ ತೆರವು ಪ್ರಶ್ನಿಸಿದ್ದ ಅರ್ಜಿ: ಮೇಲ್ಮನವಿ ಸಲ್ಲಿಕೆ

Published:
Updated:
Prajavani

ಬೆಂಗಳೂರು: ‘ನಗರದ ಬಿಜೆಪಿ ಕಚೇರಿಯ ಮುಂದಿನ ಪಕ್ಷದ ಧ್ವಜ ಹಾಗೂ ಚಿಹ್ನೆ ತೆರವುಗೊಳಿಸಿ’ ಎಂದು ಬಿಬಿಎಂಪಿಗೆ 2015ರಲ್ಲಿ ನಡೆದ ಚುನಾವಣೆ ವೇಳೆ ರಾಜ್ಯ ಚುನಾವಣಾ ಆಯೋಗ ನೀಡಿದ್ದ ನೋಟಿಸ್‌ ಪ್ರಶ್ನಿಸಿದ ತಕರಾರು ಈಗ ಹೈಕೋರ್ಟ್‌ನಲ್ಲಿ ಮರುಜೀವ ಪಡೆದುಕೊಂಡಿದೆ.

ಈ ಕುರಿತಂತೆ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಲ್ಲಿಸಿರುವ ಮೇಲ್ಮನವಿಯನ್ನು ನ್ಯಾಯಮೂರ್ತಿ ರವಿ ಮಳಿಮಠ ಹಾಗೂ ನ್ಯಾಯಮೂರ್ತಿ ಎಸ್‌.ಜಿ.ಪಂಡಿತ್‌ ಅವರಿದ್ದ ವಿಭಾಗೀಯ ಪೀಠ ಮಂಗಳವಾರ ವಿಚಾರಣೆ ನಡೆಸಿತು.

ಪ್ರತಿವಾದಿಗಳಾದ ರಾಜ್ಯ ಚುನಾವಣಾ ಆಯೋಗದ ಆಯುಕ್ತರು ಮತ್ತು ಮಲ್ಲೇಶ್ವರ ವಿಧಾನಸಭಾ ಕ್ಷೇತ್ರದ ವಾರ್ಡ್‌ ಸಂಖ್ಯೆ 64 ಎಫ್‌, 65, 66 ಮತ್ತು 76ರ ಚುನಾವಣಾ ಅಧಿಕಾರಿಗೆ ನೋಟಿಸ್‌ ಜಾರಿಗೊಳಿಸಲು ಆದೇಶಿಸಿದ ನ್ಯಾಯಪೀಠ ವಿಚಾರಣೆ ಮುಂದೂಡಿದೆ.

ಪ್ರಕರಣವೇನು?: ಮಲ್ಲೇಶ್ವರ 11ನೇ ಅಡ್ಡರಸ್ತೆಯಲ್ಲಿರುವ ಬಿಜೆಪಿ ಕೇಂದ್ರ ಕಚೇರಿಯ ಎದುರಿನ ಕೋದಂಡ
ರಾಮಪುರ ಸರ್ಕಾರಿ ಶಾಲೆಯನ್ನು 2015ರಲ್ಲಿ ಬಿಬಿಎಂಪಿ ಚುನಾವಣೆ ವೇಳೆ ಮತಗಟ್ಟೆಯನ್ನಾಗಿ ಗುರುತಿಸಲಾಗಿತ್ತು.

ಶಾಲೆಯು ಪಕ್ಷದ ಕಚೇರಿಯ 100 ಮೀ. ವ್ಯಾಪ್ತಿಯಲ್ಲಿದ್ದು, ಮತಗಟ್ಟೆಸ್ಥಳಾಂತರಿಸುವಂತೆ ಕೋರಿ ಪಕ್ಷದ ಕಾರ್ಯ
ದರ್ಶಿ ಚುನಾವಣಾಧಿಕಾರಿಗೆ ಮನವಿ ಸಲ್ಲಿಸಿದ್ದರು. ಆದರೆ, ಈ ಮನವಿಯನ್ನು ಪರಿಗಣಿಸದ ಆಯೋಗ, 2015ರ ಆ.16ರಂದು ಕಚೇರಿ ಮುಂದಿರುವ ಪಕ್ಷದ ಚಿಹ್ನೆ ಹಾಗೂ ಬಾವುಟ ತೆರವಿಗೆ ನೋಟಿಸ್‌ ಜಾರಿ ನೀಡಿತ್ತು.ಇದನ್ನು ಪ್ರಶ್ನಿಸಿ ಬಿಜೆಪಿ ಹೈಕೋರ್ಟ್ ಮೆಟ್ಟಿಲೇರಿತ್ತು. ವಿಚಾರಣೆ ನಡೆಸಿದ್ದ ಏಕಸದಸ್ಯ ನ್ಯಾಯಪೀಠ 2015ರ ಆ.20ರಂದು ಈ ಅರ್ಜಿ ವಜಾಗೊಳಿಸಿತ್ತು. ಇದೀಗ ಏಕಸದಸ್ಯ ನ್ಯಾಯಪೀಠದ ಆದೇಶ ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಲಾಗಿದೆ. ಅರ್ಜಿದಾರರ ಪರ ಹಿರಿಯ ವಕೀಲ ವಿವೇಕ್‌ ರೆಡ್ಡಿ ಹಾಜರಾಗಿದ್ದರು. 

ಕೋರಿಕೆ ಏನು?: ‘ಶಾಲೆಯ ಬೂತ್‌ ಅನ್ನು ವರ್ಗಾವಣೆ ಮಾಡಬೇಕು’ ಎಂಬುದು ಬಿಜೆಪಿಯ ಕೋರಿಕೆ.

‘ರಾಜ್ಯದ ಕಚೇರಿಯಲ್ಲಿ ಪಕ್ಷದ ಧ್ವಜ ಮತದಾನದ ದಿನ ಮೇಲಿರಬೇಕು. ಅದು ಬಿಟ್ಟು ಅದನ್ನು ಇಳಿಸಿ ಎಂದರೆ ಹೇಗೆ. ಚುನಾವಣಾ ಆಯೋಗ ಪ್ರಚಾರ ನಿಷೇಧಿಸಿದೆ ನಿಜ. ಪಕ್ಷದ ಕಚೇರಿಯಲ್ಲಿ ಧ್ವಜ ತನ್ನ ಪಾಡಿಗೆ ತಾನಿರುತ್ತದೆ. ಹೀಗಿದ್ದರೆ ಅದು ಹೇಗೆ ಪ್ರಚಾರ ಎನ್ನಿಸಿಕೊಳ್ಳುತ್ತದೆ’ ಎಂದು ಪ್ರಶ್ನಿಸಿದೆ.

‘ರಾಜ್ಯ ಚುನಾವಣಾ ಆಯೋಗ ನಮಗೆ ನೀಡಿರುವ ನೋಟಿಸ್‌ ಅವಾಸ್ತವಿಕ ಅಂಶಗಳಿಂದ ಕೂಡಿದೆ. ಇದು ತಾರ್ತಿಕವಾಗಿಯೂ ಪುಷ್ಟಿದಾಯಕವಾಗಿಲ್ಲ’ ಎಂಬುದು ಆಕ್ಷೇಪಿಸಿದೆ.

‘ಆಯೋಗ ಕಾನೂನನ್ನು ಕಣ್ಣುಮುಚ್ಚಿಕೊಂಡು ಜಾರಿಗೆ ತರಲು ಹೊರಟಿದೆ. ಇದು ನಮ್ಮ ರಾಜಕೀಯ ಎದುರಾಳಿಗಳು ಮಾಡಿರುವ ಹುನ್ನಾರ’ ಎಂಬುದು ಬಿಜೆಪಿ ಆರೋಪ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !