ದಟ್ಟ ಮಂಜು; 76 ವಿಮಾನಗಳ ಹಾರಾಟ ವ್ಯತ್ಯಯ

7

ದಟ್ಟ ಮಂಜು; 76 ವಿಮಾನಗಳ ಹಾರಾಟ ವ್ಯತ್ಯಯ

Published:
Updated:

ಬೆಂಗಳೂರು: ನಗರದಲ್ಲಿ ಮಂಗಳವಾರ ನಸುಕಿನಲ್ಲಿ ದಟ್ಟ ಮಂಜು ಆವರಿಸಿದ್ದರಿಂದ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (ಕೆಐಎ) 76 ವಿಮಾನಗಳ ಹಾರಾಟದಲ್ಲಿ ವ್ಯತ್ಯಯ ಉಂಟಾಯಿತು.

ನಿಲ್ದಾಣ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ನಸುಕಿನ 2.51 ಗಂಟೆಯಿಂದ ಬೆಳಿಗ್ಗೆ 10.35ರವರೆಗೆ ಮಂಜು ಕವಿದ ವಾತಾವರಣವಿತ್ತು. ಬೆಳಿಗ್ಗೆ 5.05 ಗಂಟೆಯಿಂದ 6.15ರವರೆಗೆ ರನ್‌ವೇ ಸಹ ಬಂದ್‌ ಮಾಡಲಾಗಿತ್ತು.

ನಿಲ್ದಾಣದಿಂದ ಹೊರಡಬೇಕಿದ್ದ 67 ವಿಮಾನಗಳು ತಡವಾಗಿ ಹಾರಾಟ ನಡೆಸಿದವು. ನಿಲ್ದಾಣದಲ್ಲಿ ಇಳಿಯಬೇಕಿದ್ದ 9 ವಿಮಾನಗಳು ತಡವಾಗಿ ಭೂಸ್ಪರ್ಶ ಮಾಡಿದವು. ಕೆಐಎನಲ್ಲಿ ಇಳಿಯಬೇಕಿದ್ದ ಐದು ವಿಮಾನಗಳನ್ನು ಮಾರ್ಗ ಬದಲಾವಣೆ ಮಾಡಿ ಹೈದರಾಬಾದ್‌, ಚೆನ್ನೈಗೆ ಕಳುಹಿಸಲಾಯಿತು.

ವಿಮಾನಗಳ ಹಾರಾಟ ತಡವಾಗಿದ್ದರಿಂದ ನಿಲ್ದಾಣದಲ್ಲಿ ಪ್ರಯಾಣಿಕರು ಗಂಟೆಗಟ್ಟಲೇ ಕಾಯಬೇಕಾಯಿತು. ವಿಮಾನಯಾನ ಕಂಪನಿಗಳ ವಿರುದ್ಧ ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿದರು.

ಪ್ರಯಾಣಿಕ ರವಿರಾಜ್, ‘ಬೆಳಿಗ್ಗೆ 11.20ಕ್ಕೆ ಹೊರಡಬೇಕಿದ್ದ ಇಂಡಿಗೊ ವಿಮಾನ 12.45 ಗಂಟೆಯಾದರೂ ಹೊರಟಿಲ್ಲ. ನಾವು ಯಾವಾಗ ಊರಿಗೆ ಹೋಗುವುದು. ವಿಮಾನ ಹೊರಡುವ ಅವಧಿಯನ್ನೂ ಯಾರೊಬ್ಬರು ಹೇಳುತ್ತಿಲ್ಲ’ ಎಂದು ಟ್ವೀಟ್ ಮಾಡಿದ್ದರು.

ಬರಹ ಇಷ್ಟವಾಯಿತೆ?

  • 1

    Happy
  • 1

    Amused
  • 0

    Sad
  • 0

    Frustrated
  • 0

    Angry

Comments:

0 comments

Write the first review for this !