ಮಂಜಿನ ನಡುವೆ ಜೋಗ...

7

ಮಂಜಿನ ನಡುವೆ ಜೋಗ...

Published:
Updated:
Deccan Herald

'ಮಾನವನಾಗಿ ಹುಟ್ಟಿದ ಮೇಲೆ ಏನೇನ್ ಕಂಡಿ ?

ಸಾಯೋ ತನಕ ಸಂಸಾರ್ದೊಳಗೆ ಗಂಡಾಗುಂಡಿ

ಹೇರಿಕೊಂಡು ಹೋಗೋದಿಲ್ಲ ಸತ್ತಾಗ್ ಬಂಡಿ

ಇರೋದ್ರೊಳಗೆ ನೋಡು ಒಮ್ಮೆ ಜೋಗದ ಗುಂಡಿ...’ 

ನೀರು ಧುಮ್ಮಿಕ್ಕುವ ಜೋಗ ಜಲಪಾತವನ್ನು ಹಲವಾರು ಬಾರಿ ನೋಡಿರುತ್ತೀರಿ. ಆದರೆ, ಮಂಜಿನ ನಡುವೆ ಜಲಪಾತ ಸಿಗುವುದು ಅಪರೂಪ. ಈ ಭಾರಿ ಧಾರಾಕಾರವಾಗಿ ಮಳೆಯಾಗುತ್ತಿರುವುದರಿಂದ ಮಂಜಿನ ನಡುವೆ ಜಲಪಾತದ ಸವಿಯನ್ನು ಸವಿಯಬಹುದಾಗಿದೆ.

ರಾಜ, ರಾಣಿ, ರೋರರ್‌, ರಾಕೆಟ್‌ಗಳಲ್ಲಿ ಹಾಲಿನ ನೊರೆಯಂತೆ ನೀರು ಬೀಳುವುದನ್ನು ಕಾಣಬಹುದು. ಆದರೆ, ಏಕಾಏಕಿ ಬರುವ ಮಂಜಿನಿಂದಾಗಿ ಜಲಪಾತ ಮರೆಯಾಗಿ ಬಿಡುತ್ತದೆ. ಕಣ್ಣಳತೆಯ ದೂರದಲ್ಲಿಯೇ ಕಾಣುವ ದಟ್ಟಿನ ಮಂಜು ಕಂಡು ರೋಮಾಂಚನವಾಗುತ್ತದೆ.
ಆಗಾಗ ಮಳೆ ಸುರಿಯತ್ತಲೇ ಇರುತ್ತದೆ. ಆ ನಡುವೆ ಕುಳಿರ್ಗಾಳಿ ಬೀಸುತ್ತಿರುತ್ತದೆ. ಮಂಜಿನ ದಟ್ಟದ ನಡುವೆಯೇ ಜಲಧಾರೆಯ ಸೊಬಗು ಕಾಣಬಹುದಾಗಿದೆ.

ಹುಬ್ಬಳ್ಳಿಯಿಂದ ಜೋಗ ಜಲಪಾತವು 171 ಕಿ.ಮೀ. ದೂರದಲ್ಲಿದೆ. ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯು ಭಾನುವಾರ ಹಾಗೂ ಸರ್ಕಾರಿ ರಜೆಗಳಂದು ಜೋಗಕ್ಕೆ ವಿಶೇಷ ಬಸ್‌ ಓಡಿಸುತ್ತಿದೆ. ಖಾಸಗಿ ಬಸ್‌ಗಳೂ ಇವೆ.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !