ಬಸಳೆಸೊಪ್ಪಿನ ಪೋಡಿ, ಕುಟ್ಟವಲಕ್ಕಿ, ಕಾಳುಮೆಣಸಿನ ಹಾಲುಸಾರು, ಜಜ್ಜು ಮೂಲಂಗಿ ಗೊಜ್ಜು, ಭೂತ ಕೊದ್ದಿಲು, ಬೋಳು ಹುಳಿ, ಕಂಚಿಕಾಯಿ ನೀರ್ಗೊಜ್ಜು, ಸಮಾರಾಧನೆ ಕೂಟು, ಬ್ರಾಹ್ಮಣರ ಶೈಲಿಯ ಮುದ್ದಿಪಲ್ಯ, ಬಾಳೆಕಾಯಿ ನೀರ್ ಪೊಳಜ್ಯ, ಮಾವಿನಮಿಡಿ ಸಾರುಬೇಳೆ, ಜೀಗುಜ್ಜೆ ಪೋಡಿ, ಗೆಣಸೆಲೆ, ಬೆಲ್ಲದ ಗುಡನ್ನ...

ಅರೆ! ಇವನ್ನೆಲ್ಲ ಎಲ್ಲೋ ಕೇಳಿದಂತಿದೆಯೇ? ಕೇಳಿ ಮರೆತುಬಿಟ್ಟಿದ್ದೀರಾ? ಹೆಸರು ನೆನಪಿದ್ದರೂ ಮಾಡೋದು ಹೇಗೆ ಎಂದು ತಿಳಿದಿಲ್ಲವೇ? ಹಾಗಿದ್ದರೆ ‘ಸಂತೃಪ್ತಿ ಕಿಚನ್’ ಯೂಟ್ಯೂಬ್ ಚಾನೆಲ್ಗೆ ಭೇಟಿ ಕೊಡಿ. ಅಲ್ಲಿ ಪವಿತ್ರಾ ಹಿರೇಗಂಗೆ ಅವರು ಮರೆತುಹೋದ ಸಾಂಪ್ರದಾಯಿಕ ಅಡುಗೆಗಳ ದರ್ಶನ ಮಾಡಿಸುತ್ತಾರೆ. ಮೃದು ಧ್ವನಿಯಲ್ಲಿ, ಸ್ಪಷ್ಟ ಕನ್ನಡದಲ್ಲಿ, ಅಷ್ಟೇ ನಾಜೂಕಾಗಿ ತಮ್ಮ ಚಾನೆಲ್ಗೆ ಆಹ್ವಾನವೀಯುವ ಪವಿತ್ರಾ, ಅನೇಕ ಸಾಂಪ್ರದಾಯಿಕ ಅಡುಗೆಗಳನ್ನು ನಮ್ಮ ಮುಂದೆ ಹರವಿದ್ದಾರೆ. ಅಜ್ಜಿ, ಅಮ್ಮಂದಿರ ಕಾಲಕ್ಕೆ ಕೊನೆಗೊಂಡಿರುವ ಖಾದ್ಯಗಳನ್ನು ಮತ್ತೆ ಮೆಲುಕು ಹಾಕುತ್ತ, ಅವುಗಳನ್ನು ಜೀವಂತವಾಗಿ ಇರಿಸುವ ಕಾಯಕದಲ್ಲಿ ನಿರತರಾಗಿದ್ದಾರೆ.

ಇವರು ಹೇಳಿಕೊಟ್ಟಿರುವ ಬಾಳೆಹಣ್ಣಿನ ಶಾವಿಗೆ, ಅರಸಿನ ಎಲೆಯ ಗೆಣಸೆಲೆ, ಅತ್ರಸ, ಹಲಸಿನ ಹಣ್ಣಿನ ಕಡುಬು, ಗೊಡ್ಡು ಖಾರ, ಸಿಹಿ ಗೋಲಿ ಕಡುಬು, ಮುಷ್ಟಿ ಕಡುಬು, ನಿಂಬೆ ಗೊಜ್ಜು, ಕೆಂಡದಲ್ಲಿ ಸುಟ್ಟ ಬಾಳೆಕಾಯಿ ಚಟ್ನಿ, ಮೆಂತೆಹಿಟ್ಟಿನ ಗೊಜ್ಜು... ಹೀಗೆ ಅನೇಕ ಖಾದ್ಯಗಳು ಇಂದಿನ ಯುವಜನರ ಕಿವಿಗೇ ಬಿದ್ದಿರಲಿಕ್ಕಿಲ್ಲ; ಇನ್ನು ಸವಿದಿರುವುದು ದೂರದ ಮಾತೇ ಬಿಡಿ. ಅಂತಹ ಖಾದ್ಯಗಳಿಗೆ ಬೆಳಕು ಹಿಡಿದಿದ್ದಾರೆ ಪವಿತ್ರಾ.

ಹವ್ಯಕ ಬ್ರಾಹ್ಮಣ ಶೈಲಿಯ ಖಾದ್ಯಗಳು, ಬಹುಕಾಲ ಮಿಂಚಿ ಮೆಲ್ಲಗೆ ಅಡುಗೆಮನೆಯಿಂದ ಮರೆಯಾಗಿರುವ ಪಾಕಗಳು, ಸುಲಭದಲ್ಲಿ, ಸರಳವಾಗಿ ತಯಾರಿಸುವ ಅಡುಗೆಯ ಬಗೆಗಳನ್ನು ಲಗುಬಗೆಯಲ್ಲಿ ಮಾಡುವುದನ್ನು ಹೇಳಿಕೊಡುತ್ತಾರೆ ಅವರು.

ಮನೆಯಲ್ಲಿ ಇದ್ದುಕೊಂಡೇ ಏನಾದರೂ ಕೆಲಸ ಮಾಡಬೇಕು, ಮನೆಯ ಆರ್ಥಿಕ ಅಗತ್ಯಗಳಿಗೆ ಹೆಗಲು ಕೊಡಬೇಕು ಎಂದು ಕೆಲಸ ಅರಸುತ್ತಿದ್ದ ಪವಿತ್ರಾ ಅವರನ್ನು ಸೆಳೆದದ್ದು ಯೂಟ್ಯೂಬ್. ಕೋವಿಡ್ಗೂ ಮುನ್ನ ಯೂಟ್ಯೂಬ್ ಕದ ತಟ್ಟಿದ ಅವರು ಬಗೆಬಗೆಯ ಸಾಂಪ್ರದಾಯಿಕ ರೆಸಿಪಿಗಳನ್ನು ಚಾನೆಲ್ ಮೂಲಕ ಹಂಚಿಕೊಂಡರು. ಯೂಟ್ಯೂಬ್ಗಿಂತಲೂ ಫೇಸ್ಬುಕ್ ಹೆಚ್ಚು ಜನರನ್ನು ಸೆಳೆಯಲು ಅವರಿಗೆ ಸಹಕರಿಸಿತು. ಈಗ ಯೂಟ್ಯೂಬ್ನಲ್ಲಿ 2 ಲಕ್ಷಕ್ಕೂ ಹೆಚ್ಚು ಸಬ್ಸ್ಕ್ರೈಬರ್ಗಳು ಇದ್ದರೆ, ಫೇಸ್ಬುಕ್ನಲ್ಲಿ 3 ಲಕ್ಷಕ್ಕೂ ಹೆಚ್ಚು ಫಾಲೋವರ್ಗಳು ಇದ್ದಾರೆ.

‘ಗೃಹಿಣಿಯರಿಗೆ ಅಡುಗೆ ಮನೆ ಹೊರತಾಗಿ ಸಾಕಷ್ಟು ಕೆಲಸಗಳು ಇರುತ್ತವೆ. ಹಾಗಾಗಿ ಸುಲಭದಲ್ಲಿ, ಥಟ್ಟಂತ ಅಡುಗೆ ಮಾಡಿ ಮುಗಿಸಿದರೆ ಬೇರೆ ಕೆಲಸಗಳಲ್ಲಿ ತೊಡಗಿಕೊಳ್ಳಬಹುದು’ ಎನ್ನುವ ಇಂಗಿತ ಪವಿತ್ರಾ ಅವರದ್ದು. ಆ ದೃಷ್ಟಿಯಿಂದಲೇ ಇವರ ಬಹುತೇಕ ಖಾದ್ಯಗಳು ರೂಪುಗೊಂಡಿವೆ. ಅಜ್ಜಿ, ಅಮ್ಮ, ಅತ್ತೆ ಮಾಡುತ್ತಿದ್ದ, ಈಗ ಬಹುತೇಕ ಮರೆಯಾಗಿರುವ ಖಾದ್ಯಗಳು ಇವರ ಚಾನೆಲ್ನಲ್ಲಿ ಪ್ರಾಧಾನ್ಯ ಪಡೆದಿವೆ.

ದಿನವೂ ಸಾಂಬಾರ್ ಮಾಡುವುದು ಗೃಹಿಣಿಯರಿಗೆ ಪ್ರಯಾಸವೇ ಸರಿ. ಬೇಳೆ ಬೇಯಿಸಿ, ಮಸಾಲೆ ರುಬ್ಬಿ ಸಾಂಬಾರ್ ಮಾಡಬೇಕೆಂದರೆ ಬಹುತೇಕರಿಗೆ ತಲೆನೋವಿನ ಸಂಗತಿ. ಅಂತಹವರಿಗೆಂದೇ ಪವಿತ್ರಾ ಸುಲಭದಲ್ಲಿ ತಯಾರಿಸಬಹುದಾದ ಸಾರಿನ ರೆಸಿಪಿಗಳನ್ನು ಹೇಳಿಕೊಟ್ಟಿದ್ದಾರೆ. ಅಲ್ಲದೆ, ಬೇಸಿಗೆಯಲ್ಲಿ ಉದರಕ್ಕೆ ತಂಪನ್ನೀಯುವ ಬಗೆಬಗೆ ತಂಬುಳಿ, ಚಳಿಗಾಲಕ್ಕೆ ಸೂಕ್ತವೆನಿಸುವ ವೈವಿಧ್ಯಮಯ ರಸಂಗಳು... ಹೀಗೆ ಅನ್ನದ ಜೊತೆ ಸವಿಯುವ ಅಡುಗೆ ರೆಸಿಪಿಗಳು ಇಲ್ಲಿ ಹೆಚ್ಚು ಆದ್ಯತೆ ಪಡೆದಿವೆ. ಇನ್ನು ಮಾವಿನಕಾಯಿ, ಬಾಳೆಕಾಯಿ, ಬದನೆಕಾಯಿ, ಜೀಗುಜ್ಜೆ ಬಳಸಿ ಮಾಡುವ ವಿಶೇಷ ಖಾದ್ಯಗಳು ಇವರ ಅಡುಗೆಮನೆಯಲ್ಲಿ ತಯಾರಾಗಿವೆ.

ಮೂಲತಃ ಶಿವಮೊಗ್ಗ ಜಿಲ್ಲೆಯ ಸಾಗರದವರಾದ ಪವಿತ್ರಾ, ಅಪ್ಪನ ಉದ್ಯೋಗ, ಮದುವೆ, ಪತಿಯ ಕೆಲಸದ ನಿಮಿತ್ತ ಹಾಸನ, ಧಾರವಾಡ, ಗೋಕರ್ಣ ಸೇರಿದಂತೆ ಹಲವೆಡೆ ಸುತ್ತಿದ್ದಾರೆ. ಜತೆಗೆ ಅಲ್ಲಿಯ ಖಾದ್ಯಗಳನ್ನೂ ಕಲಿತಿದ್ದಾರೆ. ಹೀಗಾಗಿ, ಇವರ ಚಾನೆಲ್ನಲ್ಲಿ ಮಲೆನಾಡಿನ ರೆಸಿಪಿಯೊಟ್ಟಿಗೆ ಉತ್ತರ ಕರ್ನಾಟಕ, ಮಧ್ಯ ಕರ್ನಾಟಕ, ಕರಾವಳಿ ಭಾಗದ ಖಾದ್ಯಗಳನ್ನೂ ಕಲಿಯುವ ಭಾಗ್ಯ ವೀಕ್ಷಕರದ್ದು. ಇದಲ್ಲದೇ ಇವರು ಅಡುಗೆ ಮನೆಯಲ್ಲಿ ಹಲವು ಪ್ರಯೋಗಗಳಿಗೂ ಇಳಿದಿದ್ದಾರೆ. ಕಲ್ಲಂಗಡಿ ಹಣ್ಣಿನ ಸಿಪ್ಪೆಯಲ್ಲಿ ತಾಲಿಪಟ್ಟು, ಕಬ್ಬಿನಹಾಲಿನಲ್ಲಿ ದೋಸೆ, ನೆಲ್ಲಿಕಾಯಿ ಪುಳಿಯೋಗರೆ, ಹಲಸಿನಹಣ್ಣಿನ ಬನ್ಸ್, ಬೂದುಗುಂಬಳ ದೋಸೆ, ಸ್ಟಫ್ಡ್ ಇಡ್ಲಿ, ಟೊಮೆಟೊ ಇಡ್ಲಿ, ದಾಸವಾಳ ಸೊಪ್ಪಿನ ಇಡ್ಲಿ, ಟೊಮೆಟೊ ಪೂರಿ, ಕಾರ್ನ್ ಕಡುಬು... ಹೀಗೆ ಆರೋಗ್ಯದಾಯಕ ಹೊಸ ಅಡುಗೆಗಳ ಸ್ವಾದವನ್ನೂ ಉಣಬಡಿಸಿದ್ದಾರೆ ಪವಿತ್ರಾ. ಮಲೆನಾಡಿನ ವಿಶೇಷ ಖಾದ್ಯವಾದ ಕಡುಬಿನ ವಿವಿಧಾವಳಿಗಳು ಇವರ ಯೂಟ್ಯೂಬ್ ಅಂಗಳದಲ್ಲಿವೆ.

ಬಿಸಿ ಅನ್ನದೊಂದಿಗೆ ತಿಂದು ನೋಡಿ ಅಪ್ಪೇ ಸಾರು

ಮಲೆನಾಡಿನ ರುಚಿಕರ ಸಾರು, ತೆರೆಮರೆಗೆ ಸರಿದಿರುವ, ಈಗಲೂ ಹವ್ಯಕ ಬ್ರಾಹ್ಮಣರ ಮನೆಗಳಲ್ಲಿ ಘಮ್ಮೆನ್ನುವ ಮಾವಿನ ಮಿಡಿ ಸಾರು ಬೇಳೆ ಅಥವಾ ಅಪ್ಪೇ ಸಾರನ್ನು ಪವಿತ್ರಾ ನೆನಪಿಸಿದ್ದಾರೆ. ದೀಢಿರ್ ಆಗಿ ಹತ್ತೇ ನಿಮಿಷದಲ್ಲಿ ಈ ಸಾರನ್ನು ಮಾಡಿಕೊಳ್ಳಬಹುದು.

ಹೀಗೆ ಮಾಡಿ: ಐದು ಮಿಡಿ ಉಪ್ಪಿನ ಕಾಯಿಯನ್ನು ತೆಗೆದುಕೊಂಡು ಮೇಲಿನ ಖಾರವನ್ನು ತೊಳೆದು ಎಲ್ಲವನ್ನೂ ಸಣ್ಣದಾಗಿ ಹೆಚ್ಚಿಕೊಳ್ಳಬೇಕು. ಮಿಡಿ ಕಾಯಿಯ ಮಧ್ಯದಲ್ಲಿರುವ ಬೀಜವನ್ನು ತೆಗೆಯಬೇಕು. ಮಿಕ್ಸಿಗೆ ಹೆಚ್ಚಿದ ಮಿಡಿ ಕಾಯಿ, ಅರ್ಧ ಚಮಚ ಜೀರಿಗೆ, ನಾಲ್ಕೈದು ಕಾಳುಮೆಣಸು, ಒಂದು ಒಣ ಮೆಣಸಿನ ಕಾಯಿ ಹಾಕಿ ಸಣ್ಣಗೆ ರುಬ್ಬಿಕೊಳ್ಳಬೇಕು.

ಬಾಣಲೆಯನ್ನು ಗ್ಯಾಸ್ ಮೇಲಿಟ್ಟು ಒಂದು ಚಮಚ ತುಪ್ಪ ಹಾಕಿ ಬಿಸಿಯಾದ ಬಳಿಕ ಅರ್ಧ ಚಮಚ ಸಾಸಿವೆ, ಅರ್ಧ ಚಮಚ ಜೀರಿಗೆ, ಕಾಲು ಚಮಚ ಇಂಗು, ಸ್ವಲ್ಪ ಕರಿಬೇವು ಹಾಕಿ ಒಗ್ಗರಣೆ ಸಿಡಿಸಿಕೊಳ್ಳಬೇಕು. ಬಳಿಕ ಆ ಬಾಣಲೆಗೆ ರುಬ್ಬಿಟ್ಟುಕೊಂಡ ಮಿಡಿ ಮಾವಿನಕಾಯಿ ಮಿಶ್ರಣ ಹಾಕಬೇಕು. ಸಾರಿನ ಹದಕ್ಕೆ ಬೇಕಾಗುವಷ್ಟು ನೀರು, ರುಚಿಗೆ ತಕ್ಕಷ್ಟು ಉಪ್ಪು, ಸ್ವಲ್ಪ ಬೆಲ್ಲ ಹಾಕಿ ಕುದಿಸಬೇಕು.

ಬಿಸಿ ಅನ್ನದೊಂದಿಗೆ ಈ ಸಾರು ಸವಿದರೆ ಪರಮಾನ್ನ ತಿಂದ ಅನುಭವ. ಮನೆಯಲ್ಲಿ ಮಡಿ ಮಾವಿನಕಾಯಿ ಇದ್ದರೆ ಯಾವ ಸಮಯದಲ್ಲಾದರೂ ಸುಲಭವಾಗಿ ಈ ಸಾರು ಮಾಡಿ ಸವಿಯಬಹುದು. ಮಿಡಿ ಕಾಯಿ ಇಲ್ಲದಿದ್ದರೆ ಬೇರೆ ತರಹದ ಮಾವಿನ ಕಾಯಿ ಉಪ್ಪಿನ ಕಾಯಿ ಹಾಕಿಯೂ ಈ ಸಾರು ಮಡಬಹುದು. ಮಿಡಿ ಕಾಯಿ ಹಾಕಿದರೆ ರುಚಿ ಹೆಚ್ಚು ಎನ್ನುವರು ಪವಿತ್ರಾ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.