ಹಬ್ಬ ಬಂತೆಂದರೆ ಯಾವ ಸಿಹಿ ಅಡುಗೆ ಮಾಡುವುದು ಎಂಬುದೇ ಎಲ್ಲ ಹೆಣ್ಣು ಮಕ್ಕಳ ತಲೆಬಿಸಿ. ಮೊದಲೇ ಹಬ್ಬಕ್ಕೆ ಸಿದ್ಧತೆ ಮಾಡುವುದು, ಮನೆಯನ್ನು ಸ್ವಚ್ಛಗೊಳಿಸುವುದು ಇತ್ಯಾದಿಗಳಿಂದಾಗಿ ಸುಸ್ತಾಗಿ ಹೋಗಿರುತ್ತಾರೆ. ಮೇಲಿಂದ ಹಬ್ಬದಂದು ಅತಿಥಿಗಳು ಮನೆಗೆ ಬರುತ್ತಾರೆಂದರಂತೂ ಮುಗಿದೇ ಹೋಯಿತು. ಜತೆಗೆ ಮನೆಯಲ್ಲಿ ಒಬ್ಬರಿಗೆ ಒಬ್ಬಟ್ಟು ಇಷ್ಟವಾದರೆ, ಮತ್ತೊಬ್ಬರು ಅದನ್ನು ಗ್ಯಾಸ್ಟ್ರಿಕ್ ಎಂಬ ಕಾರಣಕ್ಕೆ ತಿನ್ನುವುದಿಲ್ಲ... ಹೀಗೆ ಒಬ್ಬರಿಗಾದದ್ದು ಒಬ್ಬರಿಗಾಗುವುದಿಲ್ಲ. ಇವೆಲ್ಲದರ ನಡುವೆ ಸ್ನಾನ–ಪೂಜೆ ಮಾಡಿಕೊಂಡು, ಅತಿಥಿಗಳನ್ನೂ ಮಾತಾಡಿಸಿಕೊಂಡು, ತಾವೂ ರೆಡಿ ಆಗಿ, ಆನ್ ಟೈಮ್ಗೆ ಅಡುಗೆ ಮಾಡಿ ಊಟಕ್ಕೆ ಹಾಕುವುದರೊಳಗೆ ಮನೆಯ ಹೆಂಗಸರು ಹೈರಾಣಾಗಿಬಿಡುತ್ತಾರೆ. ಈ ಬಾರಿ ಯುಗಾದಿ ನಿಮಗೆ ಇಂಥ ಕಹಿ ಅನುಭವವನ್ನು ತರುವುದೇ ಇಲ್ಲ. ಏಕೆಂದರೆ ನಿಮಗಾಗಿ ನಾವು ಅತಿ ಸುಲಭದಲ್ಲಿ ಮಾಡಬಹುದಾದ, ಎಲ್ಲರಿಗೂ ಇಷ್ಟವಾಗುವ, ಆರೋಗ್ಯಕ್ಕೂ ಹಿತಕಾರಿಯಾದ ಹೊಚ್ಚ ಹೊಸ ರೆಸಿಪಿ ಒಂದನ್ನು ನಾವಿಲ್ಲಿ ಕೊಡ್ತಾ ಇದೀವಿ. ಸೋ ಹಬ್ಬದೂಟದ ತಯಾರಿಯ ಚಿಂತೆ ಬಿಡಿ, ಕೂಲಾಗಿ ಮಾಡಿ ರುಚಿ ನೋಡಿ, ಬಾಳೆ ದಿಂಡಿನ ಜಾಮೂನ್!

ಅಷ್ಟು ಸುಲಭದಲ್ಲಿ, ನಿಮಗೆ ಬಾಳೆದಿಂಡಿನ ಜಾಮೂನ್ ಮಾಡೋದು ಹೇಗೆಂದು ಹೇಳಿ ಬಿಡ್ತೀವಾ? ಖಂಡಿತಾ ಹೇಳ್ತೀವಿ, ಆದರೆ ಅದಕ್ಕೂ ಮುಂಚೆ ಬಾಳೆದಿಂಡು ಎಂಥಾ ಆರೋಗ್ಯಕಾರಿ ತರಕಾರಿ, ಅದರಲ್ಲಿರುವ ಪೋಷಕಾಂಶಗಳೇನೇನು, ಅದರಿಂದ ಏನೆಲ್ಲ ಉಪಯೋಗ ಅನ್ನೋದನ್ನು ತಿಳ್ಕೊಂಡು ತಿಂದರೆ ಇನ್ನೂ ತೃಪ್ತಿ ಹೆಚ್ಚಲ್ವಾ?

ಸಾಮಾನ್ಯವಾಗಿ ಬಾಳೆಗಿಡದ ಕಾಂಡದ ಒಳಗಿನ ತಿರುಳಿನ ಭಾಗವನ್ನು ಕಡಿದು ತಿಪ್ಪೆಗೆಸೆಯುವವರೇ ಹೆಚ್ಚು. ಇಲ್ಲವೇ ಜಾನುವಾರುಗಳಿಗೆ ಕೊಚ್ಚಿ ಹಾಕುತ್ತಾರೆ. ತುಂಬ ಜನ ಅದನ್ನು ಅಡುಗೆಯಾಗಿ ತಿನ್ನಲು ಇಷ್ಟಪಡುವುದಿಲ್ಲ. ಏಕೆಂದರೆ, ಅದರಲ್ಲಿ ನಾರಿನಂಶ ಹೆಚ್ಚಿರುವುದರಿಂದ ರುಚಿಯೂ ಕಡಿಮೆ, ಜತೆಗೆ ತಿನ್ನುವಾಗ ‘ಕಚಕಚ‘ ಎನ್ನುತ್ತದೆ ಎಂಬುದು ಇದಕ್ಕೆ ಕಾರಣ. ಆದರೆ ದಿಂಡಿನಲ್ಲಿನ ಇಂಥ ನಾರೇ ದೇಹಕ್ಕೆ ದಿವ್ಯೌಷಧ ಅಂದರೆ ನಂಬ್ತೀರಾ? ನಂಬಲೇ ಬೇಕು ಎನ್ನುತ್ತದೆ ಆರೋಗ್ಯ ವಿಜ್ಞಾನ. ಬಾಳೆ ದಿಂಡು ಜೀರ್ಣಾಂಗ ವ್ಯವಸ್ಥೆ ಮತ್ತು ಆಮ್ಲೀಯತೆ (ಅಸಿಡಿಟಿ)ಯ ಸಮಸ್ಯೆಗೆ ಅತ್ಯುತ್ತಮ ಪರಿಹಾರ.

ಇದರಲ್ಲಿ ಪೊಟ್ಯಾಸಿಯಮ್, ವಿಟಮಿನ್ ಬಿ6, ಮೆಗ್ನೀಷಿಯಮ್, ವಿಟಮಿನ್ ಸಿ, ತಾಮ್ರ , ಕಬ್ಬಿಣ , ಮ್ಯಾಂಗನೀಸ್ ಹಾಗೂ ಇತರ ಖನಿಜಗಳು ಮತ್ತು ಸೂಕ್ಷ್ಮ ಪೋಷಕಾಂಶಗಳು ದಟ್ಟವಾಗಿ ಅಡಗಿದೆ. ಮೇಲ್ನೋಟಕ್ಕೆ ನಾರು–ನಾರಾಗಿರುವುದು ಕಾಣುವುವದರಿಂದ ಫೈಬರ್ ರಿಚ್ ಅಂತ ಬೇರೆ ಹೇಳಬೇಕಿಲ್ಲ. ಅದರ ಜತೆಗೆ ಅತ್ತುತ್ತಮ ಪ್ರಮಾಣದ ಕಾರ್ಬೋಹೈಡ್ರೇಟ್ ಸಹ ಇದರಲ್ಲಿದೆ. ಹೀಗೆ ಕಡಿಮೆ ಕ್ಯಾಲೋರಿ ಹಾಗೂ ಹೆಚ್ಚಿನ ನೀರನಂಶ ಇರುವ ಬಾಳೆದಿಂಡು ದೇಹದಲ್ಲಿನ ಕೆಟ್ಟ ಕೊಲೆಸ್ಟರಾಲ್ ಮಟ್ಟವನ್ನು ನಿಯಂತ್ರಿಸಿ, ಹೃದಯದ ಆರೋಗ್ಯವನ್ನು ರಕ್ಷಿಸಿತ್ತದೆ. ಕಡಿಮೆ ಸಾಂದ್ರತೆಯ ಲಿಪೊಪ್ರೋಟೀನ್ಗಳ (LDL)ನ್ನು ನಿಯಂತ್ರಿಸುವಲ್ಲಿ ದಿಂಡಿನ ಪಾತ್ರ ಬಹುಮುಖ್ಯ ಎಂದು ಸ್ವತಃ WHO ಪ್ರಕಟಿಸಿದ ವರದಿಗಳು ಹೇಳುತ್ತವೆ.

ಇನ್ನು ಕಬ್ಬಿಣದಂಶ ಮತ್ತು ವಿಟಮಿನ್ B6 ನ ಶ್ರೀಮಂತ ಮೂಲವಾಗಿರುವುದರಿಂದ ರಕ್ತದಲ್ಲಿ ಹಿಮೋಗ್ಲೋಬಿನ್ ಮಟ್ಟವನ್ನು ಹೆಚ್ಚಿಸುತ್ತದಲ್ಲದೇ, ರಕ್ತ ಶುದ್ಧೀಕರಣ, ಮತ್ತು ರಕ್ತನಾಳಗಳ ನಿರ್ವಹಣೆಗೂ ನೆರವಾಗುತ್ತದೆ. ಇದರಲ್ಲಿನ ಪೊಟ್ಯಾಸಿಯಮ್ ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ.

ಮೂತ್ರಪಿಂಡದ ಕಲ್ಲು ಸಮಸ್ಯೆ ನಿವಾರಣೆಗೆ ಬಾಳೆದಿಂಡು ಬಹದೊಡ್ಡ ಪ್ರಯೋಜನಕಾರಿ ಎಂಬುದು ಜನಮಾನಸದಲ್ಲಿ ಜನಜನಿತ ಸಂಗತಿ. ಇದಷ್ಟೇ ಅಲ್ಲ, ಮಹಿಳೆಯರಲ್ಲಿ ಸಾಮಾನ್ಯವಾಗಿ ಕಾಣಿಸಿಕೊಳ್ಳುವ ಮೂತ್ರನಾಳದ ಸೋಂಕು (UTI), ಯೋನಿ ಸೋಂಕು, ಜೀರ್ಣಾಂಗ ಸೋಂಕು ತಡೆ, ಪಿಸಿಓಎಸ್, ಋತುಚಕ್ರ ಸಮಸ್ಯೆ, ಬಿಳಿ ಸೆರಗು ಮತ್ತು ಪಿಐಡಿಯಂತಹ ಮಹಿಳೆಯರ ಆರೋಗ್ಯ ಸಮಸ್ಯೆಗಳಿಗೂ ಬಾಳೆ ದಿಂಡಿನ ರಸ ಹೇಳಿ ಮಾಡಿಸಿದ ಪಥ್ಯ. ದೇಹದಲ್ಲಿನ ವಿಷಕಾರಿ ಸಂಗತಿಗಳನ್ನು ಇದು ಹೊರಹಾಕುತ್ತದೆ. ಇಷ್ಟೇ ಅಲ್ಲ, ಬಾಳೆ ಕಾಂಡವು ದೇಹವನ್ನು ತಂಪಾಗಿರಿಸುತ್ತದೆ. ಹೊಟ್ಟೆಯ ಸಮಸ್ಯೆಗಳು, ಆಸಿಡ್ ರಿಫ್ಲಕ್ಸ್ ಮತ್ತು ಹೊಟ್ಟೆ ಉಬ್ಬರ ಇತ್ಯಾದಿ ಸಮಸ್ಯೆಗಳ ನಿವಾರಣೆಗೂ ಪ್ರಯೋಜನಕಾರಿ.

ಹಾಗಾದರೆ ಇಂಥ ಬಾಳೆ ದಿಂಡಿನ ರುಚಿಕರ ಜಾಮೂನ್ ಮಾಡುವುದು ಹೇಗೆಂದು ತಿಳಿದುಕೊಳ್ಳೋಣ ಬನ್ನಿ:

ಬೇಕಾಗುವ ಸಾಮಗ್ರಿಗಳು

ಎರಡು ತುಂಡು ಎಳೆಯದಾದ, ತಾಜಾ ಬಾಳೆ ದಿಂಡು (ಸಾಮಾನ್ಯ ಗಾತ್ರದ್ದು). ಒಂದು ದೊಡ್ಡ ಕಪ್ ಬೆಲ್ಲ (ಸಕ್ಕರೆಯನ್ನೂ ಹಾಕಬಹುದು, ಆದರೆ ಬೆಲ್ಲ ರುಚಿಕರ) ಎರಡು ಸ್ಪೂನ್ ಶುದ್ಧ ತುಪ್ಪ. ಏಲಕ್ಕಿ ನಾಲ್ಕೆಂಟು. ಒಂದು ಸಣ್ಣ ಕಪ್ ಹಾಲು.

ಮಾಡುವ ವಿಧಾನ

ಬಾಳೆ ದಿಂಡಿನ ಮೇಲಿನ ಒಂದೆರಡು (ಕೆಲವೊಮ್ಮೆ ಮೂರು–ನಾಲ್ಕು ಲೇಯರ್ಗಳನ್ನೂ ತೆಗೆಯಬೇಕಾಗುತ್ತದೆ. ಅದು ಎಷ್ಟು ಬೆಳೆದಿದೆ ಎನ್ನುವುದರ ಮೇಲೆ ಅವಲಂಬಿತ) ಲೇಯರ್ಗಳನ್ನು ಬಿಡಿಸಿ ತೆಗೆದುಹಾಕಿ ಎಳೆಯದಾದ ಒಳಗಿನ ತಿರುಳನ್ನು ಚಕ್ರಾಕಾರದಲ್ಲಿ ತೆಳುವಾಗಿ (ಸ್ಲೈಸ್) ಕತ್ತರಿಸಿಕೊಳ್ಳಿ. ದಪ್ಪ ತಳದ ಪಾತ್ರೆಯಲ್ಲಿ ಹಾಲು ಹಾಗೂ ಸ್ವಲ್ಪ ನೀರನ್ನೂ (ಕಾಲು ಕಪ್) ಸೇರಿಸಿಕೊಂಡು, ಕಾಯಲು ಇಡಿ, ಕಾಯುತ್ತಿರುವಾಗಲೇ ದಿಂಡಿನ ಸ್ಲೈಸ್ ಹಾಕಿ, ಬೇಯಲು ಬಿಡಿ, ಆಗಾಗ ಕೈಯ್ಯಾಡುತ್ತ ತಳ ಹಿಡಿಯದಂತೆ, ಹಾಲುಕ್ಕಿ ಬರದಂತೆ ನೋಡಿಕೊಳ್ಳಿ.

ಹಾಲನ್ನೆಲ್ಲ ಹೀರಿಕೊಂಡು ಸ್ಲೈಸ್ ಬೆಂದ ನಂತರ (ಬೇರೆ ತರಕಾರಿಗಳಂತೆ ಮೆತ್ತಗಾಗುವುದಿಲ್ಲ) ಇಳಿಸಿಟ್ಟುಕೊಳ್ಳಿ. ಮತ್ತೊಂದು ದಪ್ಪ ತಳದ ಪಾತ್ರೆಯಲ್ಲಿ ಅರ್ಧಕಪ್ ನೀರು ಹಾಗೂ ಬೆಲ್ಲ ಸೇರಿಸಿ, ಉರಿಯ ಮೇಲಿಟ್ಟು ಕೈಯ್ಯಾಡುತ್ತ ಬನ್ನಿ. ಬಲ್ಲ ಕರಗಿ ಎಳೆಯ ಪಾಕ ಬಂದ ನಂತರ, ಏಲಕ್ಕಿ ಪುಡಿ ಸೇರಿಸಿ, ಬೇಸಿಟ್ಟ ದಿಂಡಿನ ಸ್ಲೈಸ್ ಅನ್ನು (ತುಸು ಹಾಲು ತಳದಲ್ಲಿದ್ದರೆ ಅದನ್ನು ಸೇರಿಸಿ) ಪಾಕಕ್ಕೆಹಾಕಿ, ಎರಡು ನಿಮಿಷ ಚೆನ್ನಾಗಿ ಕಲಕಿ ಇಳಿಸಿ, ತುಪ್ಪ ಬೆರೆಸಿ ಬಟ್ಟಲು ಮುಚ್ಚಿ, ಸ್ಲೈಸ್ಗಳು ಚೆನ್ನಾಗಿ ಪಾಕ ಹೀರಿಕೊಳ್ಳಲು ಬಿಡಿ. ಊಟದ ಹೊತ್ತಿಗೆ ಜಾಮೂನ್ ಕಪ್ನಲ್ಲಿ ಎರಡೆರಡು ಸ್ಲೈಸ್ಗಳನ್ನು ತುಸು ಪಾಕದೊಂದಿಗೆ ಸರ್ವ್ ಮಾಡಿ. ಎಲ್ಲರಿಗೂ ಇಷ್ಟವಾಗುವ ಈ ಜಾಮೂನ್ ಅನ್ನು ವಾರಗಳವರೆಗೆ ಇಟ್ಟು ತಿನ್ನಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.