ಮೆಂತೆಕಾಳೆಂದಾಕ್ಷಣ ಮೂಗು ಮುರಿಯುವವವರೇ ಹೆಚ್ಚು. ಔಷಧವಾಗಿ ಬಿಟ್ಟು ಬಹುತೇಕ ಮನೆಗಳಲ್ಲಿ ಮೆಂತೆಯ ಬಳಕೆ ತೀರಾ ಕಡಿಮೆಯೇ. ಹೆಚ್ಚೆಂದರೆ ಉಪ್ಪಿನಕಾಯಿ, ಸಾರು ಇತ್ಯಾದಿ ಒಗ್ಗರಿಸುವಾಗ ಒಂದೆರಡು ಕಾಳು ಹಾಕಿ ಡಬ್ಬಿ ಮುಚ್ಚಿಬಿಡುತ್ತಾರೆ. ಇದರ ತುಸು ಕಹಿ ರುಚಿಯಿಂದಾಗಿ ಮಕ್ಕಳಂತೂ ಇದರಿಂದ ಮಾರು ದೂರ. ಆದರೆ, ನಿತ್ಯ ಮೆಂತೆ ಬಳಕೆ ಆರೋಗ್ಯವಂತ ಜೀವನಕ್ಕೆ ಭದ್ರ ಬುನಾದಿ.

ಈಗಂತೂ ಬೇಸಿಗೆಯ ಬೇಗೆ. ಅನ್ನ ತಿನ್ನೋದೇ ಬೇಡ. ಏನಾದರೂ ತಣ್ಣಗೆ ಒಂದಷ್ಟು ಕುಡಿಯೋಣ ಎನ್ನಿಸುತ್ತಿರುತ್ತದೆ. ದೇಹದಲ್ಲೂ ಉಷ್ಣಾಂಶ ಏರುಪೇರಾಗುವುದರ ಜತೆಗೆ ಬೇಗ ಇನ್ಫೆಕ್ಷನ್ಗಳಾಗಿ, ಗಂಟಲು ನೋವು, ಜ್ವರ, ಹೊಟ್ಟೆ ನೋವು, ಭೇದಿ, ಚರ್ಮದಲ್ಲಿ ರಾಶಸ್ಗಳೇಳುವುದು, ಕಣ್ಣು–ನೆತ್ತಿ– ಅಂಗಾಲು ಉರಿ ಇತ್ಯಾದಿಗಳು ಆಗಾಗ ಕಾಣಿಸಿಕೊಳ್ಳುತ್ತವೆ. ಅದರಲ್ಲೂ ಮಕ್ಕಳು ಮತ್ತು ಹಿರಿಯರಲ್ಲಿ ಈ ಸಂಭವನೀಯತೆ ಹೆಚ್ಚು. ಇಂಥ ಸಂದರ್ಭದಲ್ಲಿ ದೇಹಕ್ಕೂ ಹಿತವೆನಿಸುವ ಮತ್ತು ರುಚಿಯೂ ಆಗುವ ಆಹಾರದ ಅಗತ್ಯ ಹೆಚ್ಚಿದೆ. ಇಂಥ ಸನ್ನಿವೇಶಕ್ಕೆ ಹೇಳಿ ಮಾಡಿಸಿದ್ದು ಮೆಂತ್ಯ. ಏಕೆಂದರೆ ಮೆಂತ್ಯದಲ್ಲಿ ಉತ್ಕರ್ಷಣ ನಿರೋಧಕ ಗುಣಲಕ್ಷಣಗಳಿವೆ. ಜತೆಗೆ ಇದು ದೇಹದ ತಾಪಮಾನವನ್ನು ತಕ್ಷಣ ನಿಯಂತ್ರಣಕ್ಕೆ ತರುತ್ತದೆ. ಮೆಂತ್ಯ ಅತ್ಯುತ್ತಮ ಬ್ಯಾಕ್ಟೀರಿಯಾ ವಿರೋಧಿ, ಉರಿಯೂತವನ್ನು ನಿವಾರಿಸಿ ದೇಹವನ್ನು ಆರಾಮಾಗಿಸುತ್ತದೆ

ಇದಷ್ಟೇ ಅಲ್ಲದೇ ಮೆಂತ್ಯ ಪೌಷ್ಟಿಕಾಂಶದ ಆಗರ. ಇದರಲ್ಲಿ ಫೋಲೆಟ್, ನಿಯಾಸಿನ್, ಪೈರಿಡಾಕ್ಸಿನ್, ಥಿಯಾಮಿನ್, ಸೋಡಿಯಂ, ಪೊಟಾಷಿಯಂ, ಕ್ಯಾಲ್ಷಿಯಂ, ಮೆಗ್ನೀಷಿಯಂ, ಕಾಪರ್, ಐರನ್, ಮ್ಯಾಂಗನೀಸ್, ಸಿಲೇನಿಯಂ, ಝಿಂಕ್, ಪಾಸ್ಪರಸ್, ವಿಟಮಿನ್ ಎ ಹಾಗೂ ಸಿ... ಒಂದೇ ಎರಡೇ? ದೇಹಕ್ಕೆ ನಿತ್ಯ ಕೊಡಲೇಬೇಕಾದ 21 ನ್ಯೂಟ್ರಿಯಂಟ್ಗಳಲ್ಲಿ ಅರ್ಧಕ್ಕೂ ಹೆಚ್ಚು ಮೆಂತ್ಯ ಒಂದರಲ್ಲೇ ಸಿಗುತ್ತದೆ.
.ಕಸರಸಂ: ತಟ್ಟೆ ತುದಿಯಲ್ಲಿ ಎತ್ತಿಡುವ ಕರಿಬೇವಿನ ತಂಬುಳಿ ಬೆನ್ನು ನೋವಿಗೆ ರಾಮಬಾಣ.ಕಸರಸಂ: ಈ ಯುಗಾದಿಗೆ ಮಾಡಿ ನೋಡಿ ಸುಲಭದ ಬಾಳೆದಿಂಡಿನ ಜಾಮೂನ್!.
ಅದಕ್ಕೂ ಮೀರಿದ ಮೆಂತೆಯ ಲಾಭವೆಂದರೆ ಅದರಲ್ಲಿನ ಇನ್ಯುಲಿನ್ ಫೈಬರ್ ಜೀರ್ಣಕ್ರಿಯೆ ಹಾಗೂ ರಕ್ತದಲ್ಲಿನ ಸಕ್ಕರೆ ಅಂಶದ ಸಮತೂಲನಕ್ಕೆ ರಾಮಬಾಣ. ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡಿ, ಮಧುಮೇಹವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.

ಕಹಿ ತೆಗೆಯೋದು ಹೇಗೆ?

‘ಅದೆಲ್ಲವೂ ಸರಿ, ಆದರೆ ಕಹಿಯಾದ ಮೆಂತ್ಯವನ್ನು ತಿನ್ನುವುದಾದರೂ ಹೇಗೆ? ಒಂದೊಮ್ಮೆ ಕಹಿ ಇಲ್ಲ ಅಂದ್ರೆ ತಿನ್ನಬಹುದಿತ್ತಪ್ಪಾ’ ಅಂತೀರಾ? ಮೆಂತ್ಯದಲ್ಲಿನ ಕಹಿ ಕಳೆದು, ರುಚಿಕಟ್ಟಾದ ಎರಡು ಅಡುಗೆಯನ್ನು ಮಾಡುವುದು ಹೇಗೆ ಎಂಬ ಗುಟ್ಟನ್ನು ನಿಮಗಿವತ್ತು ಏಳಿಕೊಡುತ್ತೇನೆ.

ಗುಟ್ಟು ಗೊತ್ತಾ, ಮೆಂತ್ಯದ ಕಾಳನ್ನು ಮೊಳಕೆ ಬರಿಸಿಬಿಟ್ಟರೆ ಅದರಲ್ಲಿನ ಕಹಿ ಅಂಶ ಮಂಗಮಾಯವಾಗಿಬಿಡುತ್ತದೆ. ಅಷ್ಟೇ ಅಲ್ಲ, ಮೊಳಕೆಯೊಡೆದ ಮೆಂತ್ಯದಲ್ಲಿ ಪೋಷಕಾಂಶ ಹೆಚ್ಚಿರುತ್ತದೆ, ದೇಹದ ಗ್ಲೂಕೋಸ್ ಅಂಶವನ್ನು ನಿಧಾನಕ್ಕೆ ಕರಗಿಸುತ್ತದೆ. ಹಾಗಾದರೆ ಮೆಂತ್ಯವನ್ನು ಮೊಳಕೆ ಬರಿಸೋದು ಹೇಗೆ? ಇದು ಬಾರೀ ಸುಲಭ. ಒಂದು ಮುಷ್ಟಿ ಮೆಂತೆ ಒಂದು ದಿನ ನೆನೆಹಾಕಿ, ನೀರು ಬಸಿದು ಶುದ್ಧ ಬಟ್ಟೆಯಲ್ಲಿ ಎರಡುದಿನ ಬಿಗಿಯಾಗಿ ಸುತ್ತಿಟ್ಟು ಮೊಳಕೆ ಕಟ್ಟಿ. ಮೂರನೇ ದಿನ ಮೊಳೆಕೆಯೊಡೆದ ಹೆಸರುಕಾಳಿನಂತೆಯೇ ಇದು ಕಾಣುತ್ತದೆ.

ಮೆಂತ್ಯದ ಕೋಸುಂಬರಿ

ಸಾಮಗ್ರಿಗಳು

ಮೊಳಕೆಯೊಡೆದ ಮೆಂತ್ಯದ ಕಾಳು – ಒಂದು ಮುಷ್ಟಿ

ಕೊತ್ತಂಬರಿ ಸೊಪ್ಪು – ಸಣ್ಣಗೆ ಹೆಚ್ಚಿದದು

ತೆಂಗಿನಕಾಯಿ ತುರಿ – ಸಾಕಷ್ಟು

ಉಪ್ಪು – ರುಚಿಗೆ

ಲಿಂಬು ರಸ – ಅಗತ್ಯಕ್ಕೆ

ಮೊದಲನೆಯದು ಮೊಳಕೆಯೊಡೆದ ಮೆಂತ್ಯದ ಕಾಳಿನ ಕೋಸಂಬರಿ ಮಾಡೋದು ಹೇಗೆ ನೋಡೋಣ. ಸಿಂಪಲ್, ಮೊಳೆಕೆ ಬಂದ ಒಂದು ಮುಷ್ಟಿ ಮಂತ್ಯದ ಕಾಳನ್ನು ಚೆನ್ನಾಗಿ ನೀರಿನಲ್ಲಿ ತೊಳೆದುಕೊಳ್ಳಿ. ಅದಕ್ಕೆ ಸಣ್ಣಗೆ ಹೆಚ್ಚಿದ ಕೊತ್ತುಂಬರಿ ಸೊಪ್ಪು, ಸಾಕಷ್ಟಿ ಹಸಿ ತೆಂಗಿನಕಾಯಿ ತುರಿ, ರುಚಿಗೆ ತಕ್ಕಷ್ಟು ಉಪ್ಪು, ಲಿಂಬು ಸೇರಿಸಿ ಒಗ್ಗರಿಸಿ. ದಿಢೀರ್ ಕೋಸಂಬರಿ ಸಿದ್ಧ! ಊಟದೊಂದಿಗೆ ಮಾತ್ರವಲ್ಲ, ಸಂಜೆಯ ಸ್ನ್ಯಾಕ್ಸ್ ಗೂ ಈ ಕೋಸುಂಬರಿ ರುಚಿಕರ!
.ಕಸರಸಂ: ನೈಸರ್ಗಿಕ ವಯಾಗ್ರಾ ಕಲ್ಲಂಗಡಿ ಸಿಪ್ಪೆಯ ದಿಢೀರ್ ಇಡ್ಲಿ!.ಕಸರಸಂ | ಹಬ್ಬಕ್ಕೆ ತಂದ ವೀಳ್ಯದೆಲೆ ಉಳಿದಿದೆಯಾ? ತಂಬುಳಿ ಮಾಡಿ ಚಪ್ಪರಿಸಿ ಊಟ ಮಾಡಿ.
ಮೆಂತ್ಯದ ರುಚಿ ತಂಬುಳಿ

ಎರಡನೆ ರುಚಿಕರ ಮೆಂತ್ಯದ ಕಾಳಿನ ರೆಸಿಪಿ ಅಂದರೆ ಮಲೆನಾಡಿನ ತಂಬುಳಿ.

ಸಾಮಗ್ರಿಗಳು

ತೆಂಗಿನ ತುರಿ – ಒಂದು ಹಿಡಿ

ಮೊಳಕೆ ಬಂದ ಮೆಂತ್ಯ – 2 ಸ್ಪೂನ್

ಕರಿಮೆಣಸು – 4–8 ಕಾಳು

ಬ್ಯಾಡಗಿ ಮೆಣಸು – 1

ಬೆಲ್ಲ – ಅರ್ಧ ಚಮಚ

ಉಪ್ಪು – ರುಚಿಗೆ ತಕ್ಕಂತೆ

ಹುಣಸೆಹಣ್ಣು – ಬಾಂಬೆ ಕಡಲೆ ಗಾತ್ರ

ಮಜ್ಜಿಗೆ – ಅರ್ಧ ಕಪ್

ಒಗ್ಗರಣೆಗೆ – ತುಪ್ಪ ಮತ್ತು ಜೀರಿಗೆ

ಹಸಿ ತೆಂಗಿನ ತುರಿಯ ಜತೆ ಮೊಳಕೆ ಬಂದ ಮೆಂತ್ಯ, ಕರಿಮೆಣಸಿಕಾಳು, ಬ್ಯಾಡಗಿ ಮೆಣಸಿಕಾಯಿ, ಬೆಲ್ಲ, ಉಪ್ಪು, ಹುಣಸೆ ಹಣ್ಣು ಇವಿಷ್ಟನ್ನೂ ಮಿಕ್ಸಿ ಜಾರ್ಗೆ ಹಾಕಿಕೊಂಡು ಸ್ವಲ್ಪ ನೀರು ಸೇರಿಸಿ ನುಣ್ಣಗೆ ರುಬ್ಬಿ. ಅದನ್ನು ಪಾತ್ರೆಗೆ ಬಗ್ಗಿಸಿಕೊಂಡು, ಮಿಕ್ಸಿ ಜಾರ್ಗೆ ಸ್ವಲ್ಪ ನೀರು ಹಾಕಿ ಜಾಲಾಡಿ ಅದನ್ನೂ ಪಾತ್ರೆಗೆ ಸುರುವಿ. ನಂತರ ಕಡೆದ ಮಜ್ಜಿಗೆ ಸೇರಿಸಿ ಚೆನ್ನಾಗಿ ಕದಡಿ. ಮೇಲಿಂದ ತುಪ್ಪದಲ್ಲಿ ಜೀರಿಗೆ ಒಗ್ಗರಣೆ ಕೊಟ್ಟರೆ ತಂಬುಳಿ ಸಿದ್ಧ. ಇದನ್ನು ಅನ್ನದೊಂದಿಗೆ ಕಲೆಸಿಯೂ ಉಣ್ಣಬಹುದು. ಹಾಗೆಯೇ ಕುಡಿಯಲು ಸಹ ಹಿತವಾಗಿರುತ್ತದೆ.

ಕೊನೆಗೊಂದು ಟಿಪ್ಸ್

ಮೊಳಕೆಯೊಡೆದ ಮೆಂತ್ಯದ ಬೀಜಗಳನ್ನು ಗಾಳಿಯಾಡದ ಬಾಕ್ಸ್ನಲ್ಲಿ ಹಾಕಿಟ್ಟರೆ ಒಂದು ವಾರಗಳವರೆಗೂ ಕೆಡದೇ ಇರುತ್ತೆ. ಬೇಕಾದ ಚೆನ್ನಾಗಿ ತೊಳೆದು ಬಳಸಬಹುದು. ಯಾವುದೇ ಸಲಾಡ್ ಅಥವಾ ಚಾಟ್ಗೂ ಇದು ಹೊಂದಿಕೆಯಾಗುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.