ಕರಿಬೇವಿಲ್ಲದ ಅಡುಗೆ ಬಹುಶಃ ಯಾರ ಮನೆಯಲ್ಲೂ ಪರಿಪೂರ್ಣವೆನಿಸುವುದೇ ಇಲ್ಲ. ಎಂಥಾ ಅಡುಗೆಯಿದ್ದರೂ ಸರಿ, ಮೇಲೊಂದು ಕರಿಬೇವಿನ ಒಗ್ಗರಣೆ ಬಿದ್ದು ಬಿಟ್ಟರೆ ಅದರ ರುಚಿಯ ಪರಮಾರ್ಥವೇ ಬೇರೆ. ಕರಿಬೇವಿಲ್ಲದ ಅಡುಗೆಯೆಂದರೆ ಸರ್ವಾಭರಣಭೂಷಿತೆ ತಿಲಕವಿಡದೇ ನಿಂತಂತೆಯೇ ಸರಿ.

ಇಷ್ಟಿದ್ದರೂ ಊಟ ಮಾಡುವವರು ಮಾತ್ರ ಅಡುಗೆ ಜೊತೆಗೆ ಬರುವ ಕರಿಬೇವನ್ನು ಆಹಾರದ ಜೊತೆಗೆ ತಿನ್ನುವುದು ಕಡಿಮೆಯೇ. ಬಹುತೇಕರು ಎಲೆಯ (ತಟ್ಟೆಯ) ತುದಿಗೆ ಅದನ್ನು ಎತ್ತಿ ಇಟ್ಟೇ ಚೆಲ್ಲುತ್ತಾರೆ. ಇದೊಂತರಾ ಕಚೇರಿಯಲ್ಲಿ ಎಲ್ಲ ಕೆಲಸಕ್ಕೆ ಬೇಕು, ಆದರೆ ಸಂಬಳ ಸಾರಿಗೆ ಹೆಚ್ಚಳದ ವಿಚಾರ ಬಂದಾಗ ಮಾತ್ರ ಬೇಡ ಎನ್ನುವ ನೌಕರನಿದ್ದಂತೆ.

ನಿಜಕ್ಕೂ ಕರಿಬೇವಿನಲ್ಲಿರುವ ಪೌಷ್ಟಿಕಾಂಶ ಅಗಾಧ. ಕರಿಬೇವನ್ನು ತಿನ್ನುವುದರಿಂದ ಆಗುವ ಪ್ರಯೋಜನಗಳು ಗೊತ್ತಾದರೆ ಖಂಡಿತಾ ನೀವಿನ್ನು ಅದನ್ನು ತಿನ್ನದೇ ಎತ್ತಿಟ್ಟು ಬಿಸಾಡುವುದಿಲ್ಲ. ಪಾಸ್ಪರಸ್, ಕ್ಯಾಲ್ಷಿಯಂ, ಪೊಟಾಷಿಯಂ, ಕ್ಲೋರೈಡ್, ಬಿಟಾಕೆರೋಟಿನ್, ನಿಯಾಸಿನ್, ಫೋಲಿಕ್ ಆಸಿಡ್, ವಿಟಮಿನ್ ಸಿ ಹೀಗೆ ಆರೋಗ್ಯಕರ, ರೋಗನಿರೋಧಕ ಶಕ್ತಿಯನ್ನೊಳಗೊಂಡ ದೇಹಕ್ಕೆ ಏನೇನು ಬೇಕೋ ಅದೆಲ್ಲ ಕರಿಬೇವಿನಲ್ಲಿದೆ.

ಕರಿಬೇವಿನ ಎಲೆಗಳು ಉರಿಯೂತ ನಿವಾರಕ ಮತ್ತು ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿದ್ದು, ದೇಹದಲ್ಲಿನ ಉರಿಯೂತವನ್ನು ಕಡಿಮೆ ಮಾಡುವುದರ ಜೊತೆಗೆ ದೇಹವನ್ನು ಸೋಂಕಿನಿಂದ ರಕ್ಷಿಸುತ್ತದೆ. ದೇಹದಲ್ಲಿನ ವಿಷಕಾರಿ ಅಂಶಗಳನ್ನು ಹೊರಹಾಕುವ ವಿಶೇಷ ಗುಣ ಇದರಲ್ಲಿರುವುದರಿಂದ, ಡೀಟಾಕ್ಸ್ ಮಾಡುವವರು ಇದನ್ನು ನೀರನೊಂದಿಗೆ ಕುದಿಸಿ, ಖಾಲಿ ಹೊಟ್ಟೆಯಲ್ಲಿ ಇಡೀ ದಿನ ಕುಡಿಯಬೇಕೆನ್ನುತ್ತಾರೆ ತಜ್ಞರು.

ಇನ್ನು ಇದು ನೋವನ್ನು ನಿವಾರಿಸಲು ಸಹಾಯ ಮಾಡುತ್ತದೆ ಕರಿಬೇವಿನ ಎಲೆಗಳ ಸೇವನೆಯು ಸರ್ವಿಕಲ್ ಸ್ಪಾಂಡಿಲೋಸಿಸ್ ನಂಥ ಸಮಸ್ಯೆ ನೀವಾರಣೆಗೂ ಬಳಕೆಯಾಗುತ್ತದೆ. ದೀರ್ಘಕಾಲದ ನೋವು, ಸುದೀರ್ಘ ಪ್ರಯಾಣ, ವಾಹನ ಚಾಲನೆಯಂಥ ಸಂದರ್ಭದಲ್ಲಿ ಕಾಣಿಸಿಕೊಳ್ಳುವ ಬೆನ್ನು ನೋವಿನ ನಿವಾರಣೆಗೂ ಕರಿಬೇವು ರಾಮಬಾಣ.

ಇದಲ್ಲದೇ ಮೆದುಳಿನ ಆರೋಗ್ಯ ವೃದ್ಧಿ, ನೆನಪಿನ ಶಕ್ತಿ ಸುಧಾರಣೆಗೂ ಕರಿಬೇವು ಸಹಾಯ ಮಾಡುತ್ತದೆ. ಮೆದುಳಿಗೆ ಅಗತ್ಯ ಗ್ಲುಟಾಥಿಯೋನ್ ಪೆರಾಕ್ಸಿಡೇಸ್ (GPX), ಸೂಪರ್ಆಕ್ಸೈಡ್ ಡಿಸ್ಮುಟೇಸ್ (SOD) ಮತ್ತು ಗ್ಲುಟಾಥಿಯೋನ್ ರಿಡಕ್ಟೇಸ್ (GRD)ಗಳನ್ನು ಸಹ ಕರಿಬೇವು ಹೊಂದಿದೆ. ಇದರಿಂದ ಆಕ್ಸಿಡೇಟಿವ್ ಹಾನಿ ಮತ್ತು ಆಲ್ಝೈಮರ್ನಂಥ ಸಮಸ್ಯೆ ನಿವಾರಣೆಗೆ ಸಹಾಯ ಮಾಡುತ್ತದೆ.

ಇಂಥ ಕರಿಬೇವಿಂದ ರುಚಿಕರ ತಂಬುಳಿ ಮಾಡಿ ಉಂಡರೆ? ಬೇಸಿಗೆಯ ಈ ಬಿಸಿಲಿಗೆ ಕರಿಬೇವಿನ ತಂಬುಳಿ ಹೇಳಿ ಮಾಡಿಸಿದ ರೆಸಿಪಿ. ಮಾಡುವುದೂ ಸುಲಭ.

ಎಳೆಯ ಒಂದು ಮುಷ್ಟಿ ಕರಿಬೇವಿನ ಎಸಳು(ಎಲೆ)ಗಳನ್ನು ಸ್ವಚ್ಛಗೊಳಿಸಿ, ತುಸು ತುಪ್ಪದಲ್ಲಿ ಬಾಡಿಸಿ, ಅದಕ್ಕೆ ಅರ್ಧ ಸ್ಫೂನ್ ಜೀರಿಗೆ, ಎಂಟುಹತ್ತು ಕರಿ ಮೆಣಿಸಿಕಾಳು, ತೆಂಗಿನ ತುರಿ ಸೇರಿಸಿ, ರುಚಿಗೆ ತಕ್ಕಷ್ಟು ಉಪ್ಪು ಹಾಕಿ ನುಣ್ಣಗೆ ರುಬ್ಬಿ. ಆ ಮಿಶ್ರಣಕ್ಕೆ ಕಡೆದ ಮಜ್ಜಿಗೆ ಒಂದು ಕಪ್ ಸೇರಿಸಿ, ಮೇಲಿಂದ ತುಪ್ಪ-ಜೀರಿಗೆಯ ಒಗ್ಗರಣೆಕೊಟ್ಟು ನೋಡಿ, ಘಮಘಮಿಸುವ ತಂಬುಳಿ ಸಿದ್ಧ. ಅನ್ನದೊಂದಿಗೆ ಕಲೆಸಿ ಉಣ್ಣಲು, ಹಾಗೆಯೇ ಕುಡಿಯಲು ಸಹ ಯೋಗ್ಯ. ಉತ್ತಮ ಜೀರ್ಣಕಾರಿ ಸಹ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.