ಹಬ್ಬ ಹರಿದಿನಗಳು, ಪೂಜೆ ಎಂದರೆ ನಮ್ಮಲ್ಲಿ ವೀಳ್ಯದೆಲೆ ಇಲ್ಲದಿದ್ದರೆ ಪರಿಪೂರ್ಣವಾಗುವುದೇ ಇಲ್ಲ ಅಲ್ಲವೇ? ಅದರಲ್ಲೂ ಶುಕ್ರವಾರ, ಮಂಗಳವಾರಗಳಂದು ಲಕ್ಷ್ಮೀಪೂಜೆಗೆ ವೀಳ್ಯದೆಲೆ ನಮಗೆ ಬೇಕೇಬೇಕು. ಸುಮಂಗಲಿಯರಿಗೆ ಅರಿಶಿನ–ಕುಂಕುಮ ನೀಡಲು, ಹಿರಿಯರಿಗೆ–ಅರ್ಚಕರಿಗೆ ದಕ್ಷಿಣೆ ನೀಡಲು ವಿಳ್ಯದೆಲೆ ಇಲ್ಲದಿದ್ದರೆ ನೈಜ ಗೌರವ ಸಮರ್ಪಣೆ ಎನಿಸಿಕೊಳ್ಳುವುದೇ ಇಲ್ಲ. ತುಂಬ ಸಂದರ್ಭದಲ್ಲಿ ಹೀಗೆ ತಾಂಬೂಲವಾಗಿನೀಡಿದ, ಹಬ್ಬಗಳಿಗೆ ಪೂಜೆಗೆ ತಂದ ವೀಲ್ಯದೆಲೆ ಉಳಿದದದ್ದನ್ನು ಏನು ಮಾಡಬೇಕೆಂಬುದೇ ಗೊತ್ತಾಗುವುದಿಲ್ಲ. ಲಕ್ಷ್ಮಿ ಸ್ವರೂಪಿ ಆಗಿರುವುದರಿಂದ ಅದನ್ನು ಬಿಸಾಡಲೂ ಮನಸು ಬರುವುದಿಲ್ಲ. ಮನೆಯಲ್ಲಿ ಯಾರಾದರೂ ಎಲೆ–ಅಡಿಕೆ ಹಾಕಿಕೊಳ್ಳುವವರಿದ್ದರೆ ಅವರು ಬಳಸುತ್ತಾರೆ. ಅದಿಲ್ಲದಿದ್ದರೆ, ಹಾಗೆಯೇ ಎರಡು ಮೂರುದಿನ ಮೂಲೆಯಲ್ಲಿಟ್ಟು ಒಣಗಿಸಿ, ಕೊನೆಗೂ ಬೇರೆ ದಾರಿ ಕಾಣದೇ ಬಿಸಾಡುತ್ತೇವೆ. ನೆನಪಿಡಿ, ನೀವು ಬಿಸಾಡಿದ್ದು ‘ಲಕ್ಷ್ಮಿ’ಯನ್ನು ಮಾಥ್ರವೇ ಅಲ್ಲ, ಔಷಧೀಯ ಅಂಶಗಳನ್ನುಳ್ಳು ಅಮೂಲ್ಯ ಗಣಿಯನ್ನು. ಹೌದು ವೀಲ್ಯದೆಲೆ ಹಲವು ಖನಿಜಾಂಶ, ವಿಟಮಿನ್ಗಳ ಕಣಜ. ಅದನ್ನು ಹಾಗೆ ಬಿಸಾಡುವ ಬದಲು ಸುಲಭದಲ್ಲಿ ರುಚಿಕರ ತಂಬುಳಿ ರೆಸಿಪಿಯನ್ನು ಮಾಡಿ ಸವಿಯಬಹುದು. ಅದಕ್ಕೂ ಮುನ್ನ ವೀಳ್ಯದೆಲೆಯಲ್ಲಿ ಏನೆಲ್ಲ ಪೋಷಕಾಂಶಗಳಿರುತ್ತವೆ ಎಂಬುದನ್ನು ಕ್ವಿಕ್ ಆಗಿ ನೋಡಿಬಿಡೋಣ.

ವೀಳ್ಯದೆಲೆಯಲ್ಲಿ ವಿಟಮಿನ್ ಸಿ,ಥಯಾಮಿನ್, ನಿಯಾಸಿನ್, ರಿಬೋಫ್ಲಾವಿನ್, ಕೆರೋಟಿನ್ಗಳಲ್ಲದೇ ಕ್ಯಾಲ್ಸಿಯಂ, ಅಯೋಡಿನ್, ಪೊಟ್ಯಾಸಿಯಮ್, ಐರನ್ ಮತ್ತು ವಿಟಮಿನ್ ಎ ಸಮೃದ್ಧವಾಗಿದೆ. ಆದ್ದರಿಂದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಆಂಟಿ ಆಕ್ಸಿಡೆಂಟ್ಗಳಾದ ಚಾವಿಬೆಟೊಲ್ (Chavibetol) ಮತ್ತು ಯುಜೆನಾಲ್ (Eugenol)ಗಳನ್ನು ಸಹ ಒಳಗೊಂಡಿದೆ. ಹೀಗಾಗಿ ದೇಹದಲ್ಲಿ ಗಾಯಗಳಾದರೆ ವೀಳ್ಯದೆಲೆ ಸೇವನೆ ಬಲುಬೇಗ ಗಾಯವನ್ನು ಮಾಸುವಂತೆ ಮಾಡುತ್ತದೆ. ಜತೆಗೆ ಇದರಲ್ಲಿ ಹೆಚ್ಚಿನ ಪ್ರಮಾಣದಲ್ಲಿ ನೀರು (ಶೇ. 85.4), ಪ್ರೋಟೀನ್ (ಶೇ. 31) ಮತ್ತು ಕೊಬ್ಬಿನಾಂಶ (ಶೇ. 0.8) ಇದೆ, ಜೊತೆಗೆ. ಇದು ಜೀರ್ಣಕ್ರಿಯೆ ಸುಧಾರಣೆ ಮತ್ತು ಹೆಚ್ಚಿಸಲು ಸಹಕಾರಿಯಾಗಿದೆ.

ವೀಳ್ಯದೆಲೆಯಲ್ಲಿ ಉರಿಯೂತ ನಿವಾರಕ ಗುಣಗಳಿರುವುದರಿಂದ ಸಂಧಿವಾತವನ್ನು ಶೀಘ್ರವೇ ಗುಣಪಡಿಸಲು ನೆರವಾಗುತ್ತವೆ. ಅಜೀರ್ಣತೆಯಿಂದ ಎದುರಾಗುವ ಹಲವಾರು ಬಗೆಯ ತೊಂದರೆಗಳಿಗೆ ವೀಳ್ಯದೆಲೆಯಲ್ಲಿರುವ ಪೋಷಕಾಂಶಗಳು ಪರಿಹಾರ ಒದಗಿಸುತ್ತವೆ. ಅಪಾನವಾಯು ನಿರೋಧಕ ಗುಣ ಮತ್ತು ಆಮ್ಲೀಯತೆಯನ್ನು ನಿವಾರಿಸುವ ಗುಣವೂ ಇದರಲ್ಲಿ ಅಡಗಿದೆ. ಅತಿಸೂಕ್ಷ್ಮಕ್ರಿಮಿ ನಿವಾರಕ ಗುಣಗಳಿರುವುದರಿಂದ ಬಾಯಿಯಲ್ಲಿ ಆಶ್ರಯ ಪಡೆದಿದ್ದ ಕ್ರಿಮಿಗಳನ್ನು ಕೊಲ್ಲುತ್ತದೆ. ಹೀಗಾಗಿ ಹೊಮ್ಮುವ ದುರ್ವಾಸನೆಯಿಂದ ರಕ್ಷಿಸುತ್ತದೆ. ಬ್ಯಾಕ್ಟೀರಿಯಾ ನಿವಾರಕ ಮತ್ತು ಉರಿಯೂತ ನಿವಾರಕ ಗುಣಗಳು ಗಂಟಲ ಭಾಗದಲ್ಲಿರುವ ಕ್ರಿಮಿಗಳನ್ನು ಕೊಂದು ಈ ತೊಂದರೆಯಿಂದ ಪಾರು ಮಾಡುತ್ತವೆ. ವೀಳ್ಯದೆಲೆಯಲ್ಲಿ ಮಧುಮೇಹಿ ವಿರೋಧಿಯಾಗಿರುವಂತಹ ಟ್ಯಾನಿನ್ ಎನ್ನುವ ಅಂಶವಿದೆ. ಇದು ರಕ್ತದಲ್ಲಿನ ಗ್ಲೂಕೋಸ್ ಮಟ್ಟವನ್ನು ನಿಯಂತ್ರಣದಲ್ಲಿ ಇಡುತ್ತದೆ. ಜತೆಗೆ ಇದರಲ್ಲಿರುವ ಫಾಲಿಪೆನಾಲ್ ಮೇಧೋಜೀರಕ ಗ್ರಂಥಿಯ ಕೋಶಕ್ಕೆ ಫ್ರೀ ರಾಡಿಕಲ್ನಿಂದ ಹಾನಿಯಾಗದಂತೆ ತಡೆಯುತ್ತದೆ.

ಎಲ್ಲಕ್ಕಿಂತ ಹೆಚ್ಚಾಗಿ, ವೀಳ್ಯದೆಲೆಯಲ್ಲಿರುವ ನಾರಿನಂಶ ಆಹಾರವನ್ನು ಜೀರ್ಣಿಸಲು ನೆರವಾಗುವ ಜೊತೆಗೇ ತೂಕ ಇಳಿಕೆಗೂ ನೆರವಾಗುತ್ತದೆ. ಆಯುರ್ವೇದದ ಪ್ರಕಾರ ನಿಮಿರು ದೌರ್ಬಲ್ಯತೆಯನ್ನು ವೀಳ್ಯದೆಲೆಯ ಮೂಲಕ ನಿವಾರಿಸಬಹುದು. ಚಳಿಗಾಲದಲ್ಲಿ ದಾಳಿ ಮಾಡುವ ವೈರಸ್ಸುಳಿಂದಾಗಿನ ಶೀತ ಮತ್ತು ಕೆಮ್ಮುಗಳಿಗೆ ವೀಳ್ಯದೆಲೆ ಉತ್ತಮ ಪರಿಹಾರ ಒದಗಿಸುತ್ತದೆ. ಕಟ್ಟಿರುವ ಎದೆ, ಉಸಿರಾಟ ಕಷ್ಟಕರವಾಗಿರುವುದು ಮತ್ತು ಅಸ್ತಮಾ ತೊಂದರೆಗಳಿಗೂ ವೀಳ್ಯದೆಲೆ ಉತ್ತಮ ಪರಿಹಾರ.

ಇಷ್ಟೆಲ್ಲ ಔಷಧೀಯ ಗುಣಗಳಿರುವ ವೀಲ್ಯದೆಲೆಯನ್ನು ಹೇಗೆ ತಾನೆ ಬಿಸಾಡಲು ಮನಸ್ಸು ಬಂದೀತು, ಅಲ್ಲವೇ? ಅದರ ಬದಲೂ ದಿಢೀರನೆ ತಂಬುಳಿ ಮಾಡಿ ಸವಿಯಬಹುದು.

ಬೇಕಾಗುವ ಸಾಮಗ್ರಿಗಳು:

ನಾಲ್ಕು ಸಾಮಾನ್ಯಗಾತ್ರದ (ಯಾವುದೇ ಜಾತಿಯ) ವೀಲ್ಯದೆಲೆಗಳು, ಒಂದು ಹಿಡಿ ಹಸಿ ತೆಂಗಿನ ತುರಿ, ಅರ್ಧ ಚಮಚ ಜೀರಿಗೆ ನಾಲ್ಕಾರು ಕರಿಮೆಣಸಿನಕಾಳು. ಉಪ್ಪು, ನೆಲ್ಲಿ ಕಾಯಿ ಗಾತ್ರದ ಬೆಲ್ಲ, ಒಂದು ಕಪ್ ಮಜ್ಜಿಗೆ, ಒಗ್ಗರಣೆಗೆ ಒಂದು ಸ್ಪೂನ್ ತುಪ್ಪ, ಮತ್ತೆ ಅರ್ಧ ಚಮಚ ಜೀರಿಗೆ, (ಬೇಕಿದ್ದರೆ ಇಂಗು).

ಮಾಡುವ ವಿಧಾನ:

ಸ್ಚಚ್ಛಗೊಳಿಸಿಕೊಂಡ ಎಲೆಗಳನ್ನು ಮಿಕ್ಸಿಜಾರಿಗೆ ತೆಂಗಿನ ತುರಿಯೊಂದಿಗೆ ಹಾಕಿ, ಜೀರಿಗೆ ಮೆಣಿಸಿಕಾಳು, ಬೆಲ್ಲ, ಉಪ್ಪಿನ ಜತೆಗೆ ತುಸು ನೀರು ಹಾಕಿ ನುಣ್ಣಗೆ ರುಬ್ಬಿಕೊಳ್ಳಿ. ಅದನ್ನು ಚಿಕ್ಕದೊಂದು ಪಾತ್ರೆಗೆ ಹಾಕಿ, ಮಿಕ್ಸಿ ಜಾರಿಗೆ ಅರ್ಧ ಕಪ್ ನೀರು ಹಾಕಿ ಕೈಯ್ಯಾಡಿಸಿ ಅದನ್ನೂ ಹಾಕಿ. ಮೇಲಿಂದ ಒಂದು ಕಪ್ ಕಡೆದ ಮಜ್ಜಿಗೆ ಹಾಕಿ. ಮೇಲಿಂದ ತುಪ್ಪದಲ್ಲಿ ಜೀರಿಗೆ ಒಗ್ಗರಣೆ ಹಾಕಿ ಬಿಡಿ. ಅನ್ನದ ಜತೆಗೂ ಅದ್ಭುತ, ಹಾಗೆಯೇ ಬಿಸಿಲಿನಲ್ಲಿ ಊಟಕ್ಕೆ ಮುನ್ನ ಕುಡಿಯಲೂ ಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.