ನಾವೆಲ್ಲ ಅಂದುಕೊಂಡಿರುವುದು– ಬೇಸಿಗೆ ಬಿರು ಬಿಸಿಲಿಗೆ ಏನಾದರೂ ತಣ್ಣಗಿನದ್ದು ಕುಡಿಯಬೇಕು, ಇಲ್ಲವೇ ತಿನ್ನಬೇಕು. ಕಲ್ಲಂಗಡಿ ಹಣ್ಣು ತಿಂದರೆ ಹೊಟ್ಟೆ ತಂಪಾಗುತ್ತೆ, ಅದಕ್ಕೇ ಜನ ಹೆಚ್ಚಾಗಿ ಬೇಸಿಗೆಯಲ್ಲಿ ಈ ಹಣ್ಣು ತಿನ್ನೋದು– ಅಂತ. ಕಲ್ಲಂಗಡಿಯಲ್ಲಿ ನೀರಿನಂಶ ಹೆಚ್ಚಾಗಿರುತ್ತದೆ, ಹಾಗಾಗಿ ಸಹಜವಾಗಿ ಹೊಟ್ಟೆ ತಣ್ಣಗಾಗುವುದು ನಿಜ. ಆದರೆ ಇದಷ್ಟೇ ಅಲ್ಲ, ಈ ಹಣ್ಣಿನಲ್ಲಿ ಇದಕ್ಕಿಂತಲೂ ಹೆಚ್ಚಿನ ಪೋಷಕಾಂಶಗಳು ಇವೆ. ಇನ್ನೂ ನಿಮಗೆ ಗೊತ್ತಿಲ್ಲದ ಸಂಗತಿಯೆಂದರೆ ರುಚಿಯಾಗಿ, ಸಿಹಿಯಾಗಿ ಇರುವ ಕಲ್ಲಂಗಡಿಯ ಕೆಂಪು ತಿರುಳು ತಿನ್ನುವ ಮೊದಲು ನಾವು ಕತ್ತರಿಸಿ ಬಿಸಾಡುವ ಈ ಹಣ್ಣಿನ ಹಸಿರು ಸಿಪ್ಪೆ ಹಾಗೂ ಕೆಂಪು ತಿರುಳಿನ ನಡುವಿನ ಬಿಳಿ ಭಾಗದಲ್ಲೇ ಅದರ ಹೆಚ್ಚಿನ ಪೋಷಕಾಂಶಗಳು ಅಡಗಿವೆ. ಈ ಬಿಳಿ ಭಾಗ ಸಿಹಿ ಇರುವುದಿಲ್ಲ ಎಂಬ ಕಾರಣಕ್ಕೆ ಅದನ್ನು ಬಿಸಾಡುವ ಮೂಲಕ ನಿಸರ್ಗ ನಮಗಾಗೇ ಸಂಗ್ರಹಿಸಿಟ್ಟ ಅತ್ಯಮೂಲ್ಯ ಪೋಷಕಾಂಶಗಳನ್ನು ತಿಪ್ಪೆ ಪಾಲು ಮಾಡಿ, ಮೂರ್ಖರಾಗುತ್ತಿದ್ದೇವೆ. ಹಾಗಾದರೆ ಏನು ಮಾಡಬೇಕು? ರುಚಿಯೂ ಆಗಬೇಕು, ವ್ಯರ್ಥವೂ ಆಗಬಾರದು ಎಂದರೆ ಅದರಲ್ಲೊಂದು ಸುಲಭದ ರೆಸಿಪಿ ಕಲ್ಲಂಗಡಿ ಸಿಪ್ಪೆಯ ದಿಢೀರ್ ಇಡ್ಲಿ ಮಾಡಿಬಿಡಿ!

ಇದನ್ನು ಮಾಡೋದು ಹೇಗೆ ಎಂಬುದನ್ನು ಹೇಳುವ ಮುನ್ನ ಮೊದಲು ಈ ಸಿಪ್ಪೆಯಲ್ಲಿ ಏನೆಲ್ಲ ಇರುತ್ತೆ, ಹೇಗೆಲ್ಲ ಉಪಯುಕ್ತ ಎಂಬುದನ್ನೊಮ್ಮೆ ತಿಳಿದುಕೊಳ್ಳೋಣ. ಕಲ್ಲಂಗಡಿ ಹಣ್ಣಿನ ಸಿಪ್ಪೆಯಲ್ಲಿ ಪ್ರತ್ಯಾಮ್ಲಗಳು(antioxidants) ಸಾಕಷ್ಟು ಸಮೃದ್ಧವಾಗಿರುತ್ತದೆ. ಇದು ಕೊಲೆಸ್ಟ್ರಾಲ್ ಕಡಿಮೆ ಮಾಡುವುದಲ್ಲದೇ, ದೇಹಕ್ಕೆ ಬೇರೆಬೇರೆ ರೂಪದಲ್ಲಿ ಸೇರುತ್ತಿರುವ ವಿಷಕಾರಿ ರಾಸಾಯನಿಕಗಳನ್ನು ಹೊರಹಾಕುತ್ತದೆ. ಮಾತ್ರವಲ್ಲ, ನೆಗಡಿ, ಜ್ವರ ಇತ್ಯಾದಿಗಳೂ ಸೇರಿದಂತೆ ಆಸ್ತಮಾವರೆಗಿನ ಸಮಸ್ಯೆಯನ್ನು ನಿರ್ಬಂಧಿಸುತ್ತದೆ.

ಇನ್ನು ವಿಟಮಿನ್ ಸಿ, ಫ್ಲೇವೋನೈಡ್ಸ್ (ಲೈಕೋಪೆನ್), ಬೀಟಾ ಕೆರೋಟಿನ್, ಲ್ಯೂಟಿನ್ ಮುಂತಾದ ಅತ್ಯಮೂಲ್ಯ ಪೋಷಕಾಂಶಗಳು ತ್ವಚೆಯ ರಕ್ಷಣೆ, ಗಾಯಗಳ ಮಾಯುವಿಕೆ, ಹೃದಯದ ರಕ್ಷಣೆಯಂಥ ಮಹತ್ವದ ಕಾರ್ಯನಿರ್ವಹಿಸುತ್ತವೆ. ಕಲ್ಲಂಗಡಿ ಹಣ್ಣಿನ ಸಿಪ್ಪೆ ಒಂದು ರೀತಿ ನೈಸರ್ಗಿಕ ವಯಾಗ್ರ ಎಂದರೆ ನಂಬುತ್ತೀರಾ? ನಂಬಲೇಬೇಕು. ಏಕೆಂದರೆ ಹಣ್ಣಿನ ಈ ಭಾಗದಲ್ಲಿ ಸಿಟ್ರುಲೈನ್ ಅಧಿಕವಾಗಿರುತ್ತದೆ. ಇದು ದೇಹದಲ್ಲಿ ನೈಟ್ರಿಕ್ ಆಕ್ಸೈಡ್(nitric oxide) ಉತ್ಪತ್ತಿಗೆ ಸಹಾಯಮಾಡುತ್ತದೆ. ಈ ನೈಟ್ರಿಕ್ ಆಕ್ಸೈಡ್ ರಕ್ತ ನಾಳಗಳನ್ನು ಸದೃಢಗೊಳಿಸಿ ರಕ್ತ ಪರಿಚಲನೆ ಹೆಚ್ಚಿಸುತ್ತದೆ. ಹೀಗಾಗಿ ನಿಮಿರುವಿಕೆ ಸಮಸ್ಯೆಯನ್ನು ಪರಿಹರಿಸುತ್ತದೆ ಮಾತ್ರವೇ ಅಲ್ಲ, ಹೃದಯದ ಆರೋಗ್ಯಕ್ಕೂ ನೈಟ್ರಿಕ್ ಆಕ್ಸೈಡ್ ಅಗತ್ಯ.

ಕಿಡ್ನಿಯ, ಕಣ್ಣಿನ ಆರೋಗ್ಯಕ್ಕೆ ಪೂರಕವಾದ ಸಿಟ್ರೊಲೈನ್(citrulline) ಇದರಲ್ಲಿದ್ದು, ಕಲ್ಲಂಗಡಿ ಸಿಪ್ಪೆ ತಿಂದಾಗ ಇದು ಅಮೈನೋ ಆಸಿಡ್ ಆಗಿ ಪರಿವರ್ತನೆಯಾಗಿ ಕಿಡ್ನಿಯಲ್ಲಿ ಕಲ್ಲು ಉಂಟಾಗದಂತೆ ತಡೆಯುತ್ತದೆ. ದೇಹಕ್ಕೆ ಶಕ್ತಿ ಸಂಚಯನ ಮಾಡುವ ಹಾಗೂ ಮೆದುಳಿನ ಆರೋಗ್ಯಕ್ಕೆ ಬೇಕಾದ ವಿಟಮಿನ್ ಎ, ವಿಟಮಿನ್ ಬಿ6 ಸಹ ಇದರಲ್ಲಿದೆ. ಎಲ್ಲಕ್ಕಿಂತ ಹೆಚ್ಚಾಗಿ ಕಲ್ಲಂಗಡಿ ಸಿಪ್ಪೆಯಲ್ಲಿರುವ ಲೈಕೋಪೆನ್ ಅಂಶ ಕ್ಯಾನ್ಸರ್ ಕಣಗಳ ವಿರುದ್ಧ ಹೋರಾಡುವ ಸಾಮರ್ಥ್ಯವನ್ನು ಹೊಂದಿದೆ.

ಫಾಲಿಕ್ ಆಸಿಡ್ , ಕಬ್ಬಿಣದಂಶ, ಮ್ಯಾಗ್ನಿಷ್ಯಿಯಂ, ಕ್ಯಾಲ್ಸಿಯಂ, ಸತು, ಪೊಟಾಷ್ಯಿಯಂ, ಐಯೋಡಿನ್... ಹೀಗೆ ಪಟ್ಟಿ ಮಾಡುತ್ತ ಹೋದರೆ ಮುಗಿಯದಷ್ಟು ಪೋಷಕಾಂಶಗಳ ಕಣಜ ಈ ಕಲ್ಲಂಗಡಿ ಸಿಪ್ಪೆ.

ಬಹುಶಃ ಇವೆಲ್ಲ ತಿಳಿದ ಬಳಿಕ ಇನ್ನೆಂದೂ ನೀವು ಕಲ್ಲಂಗಡಿ ಹಣ್ಣು ಮಾತ್ರ ತಿಂದು ಸಿಪ್ಪೆಯನ್ನು ಬಿಸಾಡುವ ತಪ್ಪು ಮಾಡಲಿಕ್ಕಿಲ್ಲ ಎಂದುಕೊಳ್ಳುತ್ತೇನೆ. ಈಗ ಕಲ್ಲಂಗಡಿ ಸಿಪ್ಪೆ ಬಳಸಿ, ಉದ್ದು, ಅಕ್ಕಿ ಇಲ್ಲದೇ, ದಿನಗಟ್ಟಲೆ ನೆಸಿಡೋದು, ರುಬ್ಬೋದು, ಹುಳಿ ಬರಿಸೋದು ಇವೆಲ್ಲ ರಗಳೆ ಇಲ್ಲದೇ ದಿಢೀರ್ ಇಡ್ಲಿ ಮಾಡೋದು ಹೇಗೆಂದು ತಿಳಿಯೋಣ ಬನ್ನಿ.

ಬೇಕಾಗುವ ಸಾಮಗ್ರಿ:

ಕಾಲು ಭಾಗದಷ್ಟು ಕಲ್ಲಂಗಡಿ ಹಣ್ಣಿನ ಸಿಪ್ಪೆ (ಸಾಮಾನ್ಯ ಗಾತ್ರದ ಹಣ್ಣು). ಒಂದು ಕಪ್ ಮೀಡಿಯಂ ಗೋಧಿ ರವೆ. (ಅಕ್ಕಿ ರವೆಯನ್ನೂ ಬಳಸಬಹುದು). ತುಸು ಕೊತ್ತಂಬರಿ ಸೊಪ್ಪು, ಕರಿಬೇವು, ಎರಡು ಸಣ್ಣ ಹಸಿಮೆಣಸಿನ ಕಾಯಿ. ಒಂದು ಸ್ಪೂನ್ ಸಾಸಿವೆ. ಎರಡು ಸೌಟ್ ಮೊಸರು. ರುಚಿಗೆ ತಕ್ಕಷ್ಟು ಉಪ್ಪು. ಎರಡು ಸ್ಪೂನ್ ತುಪ್ಪ. (ಶ್ರೀಮಂತಿಕೆಗೆ ಬೇಕಿದ್ದರೆ ಗೋಡಂಬಿ ತುಂಡುಗಳು)

ಮಾಡುವ ವಿಧಾನ:

ಕಲ್ಲಂಗಡಿ ಸಿಪ್ಪೆಯ ಬಿಳಿ ಭಾಗವನ್ನು ತುರಿಮಣೆಯಲ್ಲಿ ಸಣ್ಣಗೆ ತುರಿದುಕೊಳ್ಳಿ (ಎರಡುಕಪ್ ಆಗುವಷ್ಟು) . ಕೊತ್ತೊಂಬರಿ ಸೊಪ್ಪು, ಕರಿಬೇವು, ಹಸಿಮೆಣಸಿನ ಕಾಯಿಯನ್ನು ಸಣ್ಣಗೆ ಹೆಚ್ಚಿಟ್ಟುಕೊಳ್ಳಿ. ಬಾಣಲೆಯಲ್ಲಿ ತುಪ್ಪ ಹಾಕಿ, ಒಲೆಯ ಮೇಲಿಟ್ಟುಕೊಂಡು ಗೋಡಂಬಿ ಎಸಳುಗಳನ್ನು ಕೆಂಪಗಾವಂತೆ ಹುರಿದುಕೊಳ್ಳಿ. ಅದಕ್ಕೇ ಸಾಸಿವೆ ಹಾಕಿ ಸಿಡಿಸಿ. ಬಳಿಕ ಅದಕ್ಕೇ ರವೆ ಹಾಕಿ ಒಂದೈದು ನಿಮಿಷ ಹುರಿದುಕೊಳ್ಳಿ. ರವೆ ತುಂಬ ಕೆಂಪಗಾಗುವುದು ಬೇಡ. ಬಾಣಲೆ ಕೆಳಗೆ ಇಳಿಸಿ ತಣ್ಣಗಾಗಲು ಬಿಡಿ. ತಣ್ಣಗಾದ ಬಳಿಕ ಅದಕ್ಕೆ ತುರಿದ ಕಲ್ಲಂಗಡಿ ಸಿಪ್ಪೆ, ಮೊಸರು, ಹೆಚ್ಚಿಟ್ಟ ಕೊತ್ತಂಬರಿ ಸೊಪ್ಪು, ಕರಿಬೇವು, ಹಸಿಮೆಣಸು ಮತ್ತು ಉಪ್ಪು ಎಲ್ಲವನ್ನೂ ಹಾಕಿ, ಐದು ನಿಮಿಷ ಮುಚ್ಚಿಡಿ. ರವೆ ಹುದುಗು ಬಂದಂತೆ ಅರಳಿದ ನಂತರ ಮತ್ತೊಮ್ಮೆ ಬೇಕಿದ್ದರೆ ಸ್ವಲ್ಪ ನೀರು (ಇಡ್ಲಿಹಿಟ್ಟಿನ ಹದಕ್ಕೆ ಬರುವಷ್ಟು ನೀರು) ಹಾಕಿಕೊಂಡು ಕೈಯ್ಯಾಡಿ. ಇಡ್ಲಿ ಕುಕ್ಕರ್ಗೆ ಹಾಕಿ, ಇಪ್ಪತ್ತು ನಿಮಿಷ ಬೇಯಿಸಿ. ಕಾಯಿ ಚಟ್ಟಿಯೊಂದಿಗೆ ಈ ಇಡ್ಲಿ ಬಿಸಿ ಬಿಸಿ ತಿನ್ನಲು ರುಚಿಕರ ಮಾತ್ರವಲ್ಲ, ಕಲ್ಲಂಗಡಿಯ ಘಮ ಇನ್ನಷ್ಟು ತಿನ್ನಲು ಪ್ರಚೋದಿಸುತ್ತದೆ.

ಸಿಹಿ ಇಷ್ಟವಾಗುವವರು, ಕೊತ್ತಂಬರಿ, ಹಸಿಮೆಣಸು, ಕರಿಬೇವು, ಸಾಸಿವೆ ಹಾಕದೇ, ನಿಮಗೆ ಬೇಕೆನಿಸುವಷ್ಟು ಬೆಲ್ಲ ಸೇರಿಸಿಕೊಂಡು ಸಿಹಿ ಇಡ್ಲಿಯನ್ನೂ ಮಾಡಿಕೊಳ್ಳಬಹುದು. ನೆನಪಿಡಿ ತುಂಬ ಬೆಲ್ಲ ಹಾಕಿದರೆ ಇಡ್ಲಿ ಗಂಜಿಯಂತೆ ಆಗುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.