ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನ್ಯಾಥಾನ್: 4000ಬೆಂಗಳೂರಿಗರ ಓಟ

Last Updated 17 ಮಾರ್ಚ್ 2019, 19:45 IST
ಅಕ್ಷರ ಗಾತ್ರ

ನಗರದ ಐಎಫ್‌ಐಎಂನ ವಿದ್ಯಾ ಸಂಸ್ಥೆಗಳು ವಾರ್ಷಿಕ ಸಹಾಯಾರ್ಥ ‘ಕನ್ಯಾಥಾನ್ 2019’ ಓಟವನ್ನು ಇನ್ಫೊಸಿಸ್‌ ಲೀಷರ್ ಗ್ರೌಂಡ್‌ನಲ್ಲಿ ಆಯೋಜಿಸಿದ್ದವು. 4000 ಓಟಗಾರರು ‘ಹೆಣ್ಣುಮಗುವನ್ನು ಉಳಿಸುವ’ ಸಂಕಲ್ಪದೊಂದಿಗೆ ಭಾಗವಹಿಸಿದ್ದರು.

ಭಾರತೀಯ ವಾಯುಪಡೆಯ ಮೊದಲ ಆರು ಮಹಿಳಾ ಯುದ್ಧವಿಮಾನ ಚಾಲಕಿಯರಲ್ಲಿ ಒಬ್ಬರಾದ ಫ್ಲೈಯಿಂಗ್‌ ಆಫೀಸರ್ ರಾಶಿರೈನಾ, ಯುದ್ಧವಿಮಾನ ಚಾಲನೆ ತರಬೇತುದಾರ ಸ್ಕ್ವಾಡ್ರನ್‌ ಲೀಡರ್ ಹೇಮರಾಜ್, ನಗರ ಪೊಲೀಸ್ ಆಯುಕ್ತ ಸುನೀಲ್ ಕುಮಾರ್ ಮತ್ತು ಒಲಿಂಪಿಕ್ ಈಜುಗಾರ ಸಾಜನ್ ಪ್ರಕಾಶ್ ಅತಿಥಿಗಳಾಗಿ ಭಾಗವಹಿಸಿದ್ದರು.

ಇನ್ಫೊಸಿಸ್‌ನಲ್ಲಿ ಜಾಗತಿಕ ವೈವಿಧ್ಯತೆ ಮತ್ತು ಒಳಗೊಳ್ಳುವಿಕೆ ವಿಭಾಗದ ಮುಖ್ಯಸ್ಥರು ಮತ್ತು ಸಹ ಉಪಾಧ್ಯಕ್ಷರಾದ ಅರುಣಾ ಸಿ. ನ್ಯೂಟನ್, ಚೈಲ್ಡ್‌ ರೈಟ್ಸ್‌ ಅಂಡ್‌ ಯು (ಕ್ರೈ) ಸ್ವಯಂಸೇವಕರು, ಸೈನ್ಯ ಸಿಬ್ಬಂದಿ ಮತ್ತಿತರರು ಓಟದಲ್ಲಿ ಭಾಗವಹಿಸಿದ್ದರು.

ಮ್ಯಾರಥಾನ್‌ನಿಂದ ಸಂಗ್ರಹಿಸಲಾದ ನಿಧಿಯನ್ನು ಸರ್ಕಾರೇತರ ಸಂಸ್ಥೆ ಚೈಲ್ಡ್ ರೈಟ್ಸ್ ಅಂಡ್ ಯು(ಸಿಆರ್‌ವೈ)ಗೆ ಮತ್ತು ಉನ್ನತ್ ಭಾರತ್ ಅಭಿಯಾನದಡಿ ಸಂಸ್ಥೆ ದತ್ತು ತೆಗೆದುಕೊಂಡಿರುವ ಕೋಲಾರದಸೆಟ್ಟಿಗಾನಹಳ್ಳಿ, ಮೈಲಾಂಡಹಳ್ಳಿ, ಗಂಗಾಪುರ, ತಿರುಮಲಕೊಪ್ಪ ಮತ್ತು ಕೂತಂಡಹಳ್ಳಿ ಗ್ರಾಮಗಳಿಗೆ ದಾನವಾಗಿ ನೀಡಲಾಗುವುದು. ಐಎಫ್‌ಐಎಂನ ವಿದ್ಯಾರ್ಥಿಗಳು ತಮ್ಮ ಪ್ರಮುಖ ಇಂಡಸ್ಟ್ರಿ ಇಂಟರ್ನ್‌ಶಿಪ್‌ ಪ್ರೋಗ್ರಾಂ (ಐಐಪಿ) ಮೂಲಕ ಈ ಗ್ರಾಮಗಳಿಗೆ ನೆರವು ನೀಡುತ್ತಾರೆ.

‘ಕಳೆದ ಮೂರು ವರ್ಷಗಳಲ್ಲಿ ವಿದ್ಯಾರ್ಥಿಗಳು ₹ 10 ಲಕ್ಷ ನಿಧಿ ಸಂಗ್ರಹಿಸಿ ದಾನವಾಗಿ ನೀಡಲು ಸಾಧ್ಯವಾಗಿದೆ. ವಿಶೇಷ ಆರೈಕೆಯ ಅಗತ್ಯವಿರುವ ಗ್ರಾಮಗಳಿಗೆ ನೆರವು ನೀಡಲು ಈ ಸಲ ಕೇಂದ್ರ ಸರ್ಕಾರದ ಉಪಕ್ರಮ ‘ಉನ್ನತ್ ಭಾರತ್ ಅಭಿಯಾನ’ದೊಂದಿಗೆ ಸಹಯೋಗ ನೀಡಿದ್ದೇವೆ’ ಎಂದು ಐಎಫ್‌ಐಎಂ ಸಂಸ್ಥೆಗಳ ಸಿಡಿಇ ಕಾರ್ಯದರ್ಶಿ ಸಂಜಯ್ ಪಡೋಡೆ ಹೇಳಿದರು.

ಐಎಫ್‌ಐಎಂ:1995ರಲ್ಲಿ ಐಎಫ್‌ಐಎಂ ಶಿಕ್ಷಣ ಸಂಸ್ಥೆ ಆರಂಭಗೊಂಡಿದೆ. ಪದವಿ ಮತ್ತು ಸ್ನಾತಕೋತ್ತರ ಶಿಕ್ಷಣವನ್ನು ಐಎಫ್‌ಐಎಂ ಬ್ಯುಸಿನೆಸ್ ಸ್ಕೂಲ್, ಐಎಫ್‌ಐಎಂ ಕಾಲೇಜ್, ಐಎಫ್‌ಐಎಂ ಲಾ ಕಾಲೇಜುಗಳ ಮೂಲಕ ನೀಡುತ್ತಿದೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT