ಬಾಗಲಕೋಟೆ: ಶುಶ್ರೂಷಕರು ಆರೋಗ್ಯ ವಿಭಾಗದ ಬೆನ್ನೆಲುಬಾಗಿದ್ದಾರೆ. ಆರೋಗ್ಯ ವ್ಯವಸ್ಥೆಯ ಸಮತೋಲನ ಕಾಪಾಡಿದ್ದಾರೆ ಎಂದು ಶಾರದಾಂಬೆ ನರ್ಸಿಂಗ್ ವಿಜ್ಞಾನ ಕಾಲೇಜಿನ ಪ್ರಾಚಾರ್ಯ ಡಾ.ಪ್ರವೀಣ ಪಾಟೀಲ ಹೇಳಿದರು.

ಬಿವಿವಿ ಸಂಘದ ಶಾರದಾಂಬೆ ಕಾಲೇಜಿನಲ್ಲಿ ಈಚೆಗೆ ಹಮ್ಮಿಕೊಂಡಿದ್ದ ವಿಶ್ವ ಶುಶ್ರೂಷಕರ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು, ರೋಗಿಗಳು ಗುಣಮುಖರಾಗುವಲ್ಲಿ ಶುಶ್ರೂಷಕರು ಪ್ರಮುಖ ಪಾತ್ರ ವಹಿಸುತ್ತಾರೆ. ಎಐ ತಂತ್ರಜ್ಞಾನದಿಂದ ವಿವಿಧ ಕ್ಷೇತ್ರದಲ್ಲಿ ಜನರು ನಿರುದ್ಯೋಗಿಗಳಾಗುತ್ತಿದ್ದಾರೆ. ಆದರೆ, ನರ್ಸಿಂಗ್ ಕ್ಷೇತ್ರದಲ್ಲಿ ಬೇಡಿಕೆ ಹೆಚ್ಚುತ್ತಲೇ ಇದೆ ಎಂದರು.

ಕಾಲೇಜಿನ ಅಧ್ಯಾಪಕಿ ಸವಿತಾ ಅಂಗಡಿ ಮಾತನಾಡಿ, ನರ್ಸಿಂಗ್ ಎಂಬುದು ಬರೀ ಒಂದು ಉದ್ಯೋಗವಲ್ಲ. ಅದು ಕಲಾತ್ಮಕವಾದ ವಿಜ್ಞಾನ. ರೋಗಿಗಳ ಸೇವೆಗೆ ಜೀವನವನ್ನು ಮುಡಿಪಿಡಬೇಕು ಎಂದು ಹೇಳಿದರು.

ಅಧ್ಯಾಪಕ ಗುರು ಹಿರೇಮಠ ಮಾತನಾಡಿ, ರೋಗಿಗಳು ಮತ್ತು ವೈದ್ಯರ ನಡುವೆ ಶುಶ್ರೂಷಕರು ಕೊಂಡಿಯಾಗಿ ಕಾರ್ಯ ನಿರ್ವಹಿಸುತ್ತಾರೆ. ಭಾವನಾತ್ಮಕವಾಗಿ ಬೆಸುಗೆ ಬೆಳೆಸುವ ಕಾರ್ಯವಾಗಿದೆ. ಜ್ಞಾನದ ಜೊತೆಗೆ ಕೌಶಲವನ್ನೂ ಬೆಳೆಸಿಕೊಳ್ಳಬೇಕು ಎಂದರು.

ಸುಪ್ರಿಯಾ ನಿರೂಪಿಸಿದರು. ಜೋಹರಿಯಾ ಸ್ವಾಗತಿಸಿದರು. ಭೂಮಿಕಾ ವಂದಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260515-19-930263610

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.