ಬಳ್ಳಾರಿ: ‘ನಾಟಕಗಳು ನೀತಿ ನಿರೂಪಣೆ, ರಾಜಕೀಯ ಮತ್ತು ಮಾನವೀಯ ಮಿಡಿತಗಳನ್ನು ಅಭಿವ್ಯಕ್ತಿಗೊಳಿಸಲು ರೂಪುಗೊಂಡಿವೆ. ಅಭಿವ್ಯಕ್ತಿ ಮಾಧ್ಯಮಗಳಲ್ಲೇ ನಾಟಕ ಅತ್ಯಂತ ಶ್ರೇಷ್ಠವಾದದ್ದು’ ಎಂದು ರಂಗನಿರ್ದೇಶಕ ಬಸವಲಿಂಗಯ್ಯ ಅಭಿಪ್ರಾಯಪಟ್ಟರು.

ಬರಹಗಾರ್ತಿ, ರಾಜಕಾರಣಿಯೂ ಆಗಿದ್ದ ರಮಣಿಕಾ ಗುಪ್ತಾ ಅವರ ಸ್ಮರಣೆಯಲ್ಲಿ ಬಳ್ಳಾರಿ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಪ್ರದರ್ಶನ ಕಲೆ (ನಾಟಕ) ವಿಭಾಗವು ಹಮ್ಮಿಕೊಂಡಿರುವ 10 ದಿನಗಳ ರಾಷ್ಟ್ರೀಯ ರಂಗಭೂಮಿ ಕಾರ್ಯಾಗಾರವನ್ನು ಸೋಮವಾರ ಹಾರ್ಮೋನಿಯಂ ನುಡಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.

‘ಮಾಧ್ಯಮಗಳು ಸದಾ ಪ್ರಶ್ನಿಸಬೇಕು. ಅದು ಈಗ ಕಾಣಿಸುತ್ತಿಲ್ಲ. ಪ್ರಶ್ನಿಸುವ ಗುಣ ನಾಟಕಗಳದ್ದೂ ಆಗಿದೆ. ನಾಟಕ ಕೇವಲ ವಿಷಯ ತಿಳಿಸುವಂತದ್ದು ಅಲ್ಲ, ಅದೊಂದು ಪ್ರಾಯೋಗಿಕ ಕಲೆ’ ಎಂದರು.

ಸಾವಯವ ಕೃಷಿ ಬೇಕು: ‘ರಾಜ್ಯದಲ್ಲಿ ವಿವಿಧ ಸಾಮಾಜಿಕ ಚಳವಳಿಗಳಿಗೆ ಶಕ್ತಿ ತುಂಬಿದ್ದೇ ರಂಗಭೂಮಿ. ಆದರೆ, ಇಂದು ಭೂಮಿಗೆ ರಾಸಾಯನಿಕ ಹಾಕಿ ಅದರ ಫಲವತ್ತತೆ ಕೆಡಿಸಿದಂತೆ, ರಂಗಭೂಮಿಗೂ ‘ರಾಸಾಯನಿಕ’ದ ಪ್ರಭಾವ ತಟ್ಟಿದ್ದರಿಂದ ಅದರ ವರ್ಚಸ್ಸು ಕುಂದಿದೆ. ಹೀಗಾಗಿ ಭೂಮಿ ಮತ್ತು ರಂಗಭೂಮಿ ಎರಡಕ್ಕೂ ಈಗ ‘ಸಾವಯವ ಕೃಷಿ’ಯ ಅಗತ್ಯವಿದೆ’ ಎಂದು ‘ಪ್ರಜಾವಾಣಿ’ ಕಾರ್ಯನಿರ್ವಾಹಕ ಸಂಪಾದಕ ರವೀಂದ್ರ ಭಟ್ಟ ತಿಳಿಸಿದರು.

ಕಾರ್ಯಾಗಾರದ ಸಂಚಾಲಕ ಶಿರಗಾರನಹಳ್ಳಿ ಶಾಂತನಾಯಕ ಮಾತನಾಡಿ, ‘ರಮಣಿಕಾ ಗುಪ್ತಾ ಅವರು ನಾಟಕ ಕಲೆಗಳನ್ನು ಪ್ರೋತ್ಸಾಹಿಸಲು ಹಲವು ವರ್ಷಗಳ ಹಿಂದೆ ಬಳ್ಳಾರಿ ವಿಶ್ವವಿದ್ಯಾಲಯಕ್ಕೆ ₹5 ಲಕ್ಷ ದೇಣಿಗೆ ನೀಡಿದ್ದರು. ಆ ನಿಧಿಯಿಂದಲೇ ಇಂದು ಈ ಕಾರ್ಯಕ್ರಮ ಆಯೋಜಿಸಲಾಗಿದೆ. ಮುಂದೆಯೂ ಅವರ ನೆನಪಿನಲ್ಲಿ ಇಂತಹ ಕಾರ್ಯಕ್ರಮಗಳು ಮುಂದುವರಿಯಲಿವೆ’ ಎಂದರು.

ವಿಶ್ವವಿದ್ಯಾಲಯದ ಕುಲಪತಿ ಮುನಿರಾಜು ಮಾತನಾಡಿ, ‘ಬಳ್ಳಾರಿ ಮಣ್ಣಿನಲ್ಲಿ ಸಾಕಷ್ಟು ಶ್ರೇಷ್ಠ ಕಲಾವಿದರು ಮೂಡಿ ಬಂದಿದ್ದಾರೆ. ಭವಿಷ್ಯದಲ್ಲೂ ಅಂಥವರನ್ನು ಸೃಷ್ಟಿಸಬೇಕಿದೆ. ನಂದಿಹಳ್ಳಿ ಆವರಣದಲ್ಲಿ ಚಲನಚಿತ್ರ ತರಬೇತಿ ಕೇಂದ್ರ ಆರಂಭಿಸಲಾಗುವುದು. ಈ ರಂಗ ತರಬೇತಿ ಶಿಬಿರದಲ್ಲಿ ಮೊದಲ ಸ್ಥಾನ ಪಡೆಯುವ ವಿದ್ಯಾರ್ಥಿಗೆ ‘ಚಿನ್ನದ ಪದಕ’ ನೀಡುವ ಚಿಂತನೆಯಿದೆ’ ಎಂದರು.

ಕಾರ್ಯಾಗಾರಕ್ಕೆ ಒಟ್ಟು 120 ಶಿಬಿರಾರ್ಥಿಗಳು ನೋಂದಾಯಿಸಿಕೊಂಡಿದ್ದು, ತರಬೇತಿ ಹಾಗೂ ವಿಶೇಷ ಉಪನ್ಯಾಸಗಳು ನಡೆಯಲಿವೆ. ಉಪನ್ಯಾಸಕ ಅಣ್ಣಾಜಿ ಕೃಷ್ಣರೆಡ್ಡಿ, ಕಲಾ ನಿಕಾಯದ ಡೀನ್ ರಾಬರ್ಟ್ ಜೋಸ್, ಪ್ರಭಾರ ಕುಲಸಚಿವ ಲೋಕೇಶ್ ವಿ, ಉಪನ್ಯಾಸಕರಾದ ಕಾಳಿಂಗ, ಸಂತೋಷ, ರಾಕೇಶ್ ತಾಳೀಕೋಟೆ, ಚಾಂದ್ ಪಾಷ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260602-25-118718881

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.