ಬೆಂಗಳೂರು: ರಾಜ್ಯ ಬಂಡಾಯ ಸಾಹಿತ್ಯ ಸಂಘಟನೆ ಹಮ್ಮಿಕೊಂಡಿರುವ ‘ಬಂಡಾಯ ಸಾಹಿತ್ಯ: ಹೊಸ ತಲೆಮಾರು’ ಅಭಿಯಾನವನ್ನು ವಿವಿಧ ಜಿಲ್ಲೆಗಳಿಗೆ ವಿಸ್ತರಿಸಲಾಗುತ್ತಿದೆ.

ಈ ಅಭಿಯಾನಕ್ಕೆ ಬೆಂಗಳೂರಿನಲ್ಲಿ ಮಾರ್ಚ್ 15ರಂದು ಚಾಲನೆ ದೊರೆತಿತ್ತು. ಸಾಹಿತ್ಯ, ಸಮಾಜ ಮತ್ತು ಜನಸಂಸ್ಕೃತಿಗಳ ಬಗ್ಗೆ ತಾತ್ವಿಕ ತಿಳಿವಳಿಕೆ ಮೂಡಿಸುವುದು ಈ ಅಭಿಯಾನದ ಪ್ರಮುಖ ಆಶಯವಾಗಿದೆ.

‘ಇದೇ 25ರಂದು ತುಮಕೂರಿನಲ್ಲಿ ‘ಕನ್ನಡ ಸಾಹಿತ್ಯದಲ್ಲಿ ಚರಿತ್ರೆ ಮತ್ತು ಪುರಾಣ ಪಯಣ: ಸಾಮಾಜಿಕ ನೆಲೆಗಳು’ ಎಂಬ ವಿಷಯದ ಮೇಲೆ, 26ರಂದು ರಾಯಚೂರಿನಲ್ಲಿ ‘ಆಧುನಿಕ ಕನ್ನಡ ಸಾಹಿತ್ಯ: ಸಾಮಾಜಿಕ ನಿಲುವಿನ ನಡಿಗೆ’ ಎಂಬ ವಿಷಯದ ಮೇಲೆ ಒಂದು ದಿನದ ವಿಚಾರಸಂಕಿರಣಗಳು ನಡೆಯಲಿವೆ’ ಎಂದು ಸಂಘಟನೆ ಪರವಾಗಿ ಸಾಹಿತಿ ಬರಗೂರು ರಾಮಚಂದ್ರಪ್ಪ ತಿಳಿಸಿದ್ದಾರೆ.

‘ಮೇ 23ರಂದು ಬೆಳಗಾವಿಯಲ್ಲಿ ‘ಕನ್ನಡ ಸಿನಿಮಾ: ಪ್ರಗತಿಪರ ನೆಲೆಗಳ ಸ್ವರೂಪ’ ಎಂಬ ವಿಷಯದ ಮೇಲೆ, ಜೂನ್ ತಿಂಗಳ ಮೊದಲ ವಾರ ಚಿತ್ರದುರ್ಗದಲ್ಲಿ ‘ಸೃಜನಶೀಲತೆ: ರಾಜಪ್ರಭುತ್ವ ಮತ್ತು ಪ್ರಜಾಪ್ರಭುತ್ವ’ ವಿಷಯದ ಮೇಲೆ ವಿಚಾರಸಂಕಿರಣ ಹಮ್ಮಿಕೊಳ್ಳಲಾಗಿದೆ’ ಎಂದು ಹೇಳಿದ್ದಾರೆ.

‘ಜೂನ್ ತಿಂಗಳ ಮೂರನೇ ವಾರ ದಾವಣಗೆರೆಯಲ್ಲಿ ಹೊಸತಲೆಮಾರಿನ ಸಾಹಿತಿಗಳ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿದೆ. ಎಲ್ಲ ಕಡೆ ಯುವ ಪ್ರತಿಭೆಗಳನ್ನು ಒಳಗೊಂಡ ಕವಿಗೋಷ್ಠಿಗಳು ನಡೆಯಲಿವೆ. ಆಸಕ್ತರು ಭಾಗವಹಿಸಬೇಕು’ ಎಂದು ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260423-44-1434823061

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.