ಸೌಂದರ್ಯ ಎನ್ನುವುದು ಮನಸ್ಸಿನ ಶಾಂತ ಸ್ಥಿತಿಯನ್ನು ಪ್ರತಿಬಿಂಬಿಸುತ್ತದೆ. ನೀವು ಹೇಗೆ ಆಲೋಚಿಸುತ್ತೀರೋ ಹಾಗೇ ನಿಮ್ಮ ಬದುಕು ಇರುತ್ತದೆ. ನಮ್ಮ ಆಲೋಚನೆಗಳು ನಮ್ಮ ಚರ್ಮ ಹಾಗೂ ಕೂದಲಿನ ಮೇಲೆ ದೊಡ್ಡ ಮಟ್ಟದಲ್ಲಿ ಪ್ರಭಾವ ಬೀರುತ್ತವೆ. ಹಾಗಾಗಿ, ಮನಸ್ಸನ್ನು ಪ್ರಶಾಂತವಾಗಿ ಇಟ್ಟುಕೊಳ್ಳುವುದು ಬಹಳ ಮುಖ್ಯ. ಒತ್ತಡ ಮಾಡಿಕೊಂಡಷ್ಟೂ ಚರ್ಮ ಹಾಳಾಗುವುದೇ ಹೆಚ್ಚು. ಒತ್ತಡರಹಿತವಾಗಿ ಮನಸ್ಸನ್ನು ಇಟ್ಟು ಕೊಳ್ಳುವುದು ಬಹಳ ಮುಖ್ಯ.

ಸಾಮಾನ್ಯವಾಗಿ ನಿತ್ಯ ಬೆಳಿಗ್ಗೆ ಮುಖಕ್ಕೆ ಐಸಿಂಗ್ ಮಾಡಿಕೊಳ್ಳು ತ್ತೇನೆ. ಅಂದರೆ, ಐಸ್ ನೀರಿನಲ್ಲಿ ಮುಖವನ್ನು ಕೆಲ ನಿಮಿಷ ಮುಳುಗಿಸುತ್ತೇನೆ. ಇದು ನನ್ನ ಚರ್ಮ ನಳನಳಿಸುವಂತೆ ಮಾಡಲು ದೊಡ್ಡ ಮಟ್ಟದಲ್ಲಿ ಸಹಕಾರಿಯಾಗಿದೆ. ಆಗಾಗ್ಗೆ ಚರ್ಮ ಒಣಗಿದಂತೆ ಅನ್ನಿಸುತ್ತದೆ. ಆಗೆಲ್ಲ ನಾನು ರಾತ್ರಿ ಹೊತ್ತು ಶುದ್ಧವಾದ ಎರಡು ಹನಿ ತುಪ್ಪದಿಂದ ಮುಖಕ್ಕೆ ಮಸಾಜ್ ಮಾಡಿಕೊಳ್ಳುತ್ತೇನೆ.

ಇನ್ನು ನಾವು ಏನು ಸೇವಿಸುತ್ತೇವೋ ಅದು ನಮ್ಮ ಚರ್ಮ ಹಾಗೂ ಕೂದಲಿನ ಆರೋಗ್ಯವನ್ನು ಕಾಪಾಡುತ್ತದೆ. ಸಕ್ಕರೆ ಸೇವನೆಯನ್ನು ಸಂಪೂರ್ಣವಾಗಿ ತೊರೆದಿದ್ದೇನೆ. ಯಾವುದೇ ಕಾರಣಕ್ಕೂ ಜಂಕ್ಫುಡ್ ತಿನ್ನುವುದಿಲ್ಲ. ಹೆಚ್ಚೆಚ್ಚು ನೀರು ಕುಡಿಯುತ್ತೇನೆ. ಈಗಂತೂ ಬಿಸಿಲಿನ ವಾತಾವರಣ ಇರುವುದರಿಂದ ದ್ರವಾಹಾರ ಸೇವನೆಗೆ ಹೆಚ್ಚು ಆದ್ಯತೆ ನೀಡುತ್ತೇನೆ. ಮಜ್ಜಿಗೆಯನ್ನು ಆಗಾಗ್ಗೆ ಕುಡಿಯುತ್ತೇನೆ. ಪುದೀನಾ, ಕೊತ್ತಂಬರಿ, ಕರಿಬೇವು, ಜೀರಿಗೆ, ಬೆಳ್ಳುಳ್ಳಿ, ಶುಂಠಿ, ಉಪ್ಪು, ಚಾಟ್ಮಸಾಲ ಸೇರಿಸಿ ಮಾಡಿದ ಐಸ್ಕ್ಯೂಬ್ಗಳನ್ನು ಇಟ್ಟುಕೊಂಡಿರುತ್ತೇನೆ. ಆಗಾಗ್ಗೆ ನೀರಿಗೆ ಈ ಐಸ್ಕ್ಯೂಬ್ಗಳನ್ನು ಹಾಕಿಕೊಂಡು ಕುಡಿಯುತ್ತೇನೆ.

ಇನ್ನು ನಿತ್ಯ ಒಂದೂವರೆ ಗಂಟೆ ವ್ಯಾಯಾಮ ಮಾಡುತ್ತೇನೆ. ನಲವತ್ತು ನಿಮಿಷ ಈಜುತ್ತೇನೆ. ಇದು ನಾನು ಫಿಟ್ ಆಗಿರುವಂತೆ ಮಾಡಲು ಸಹಕಾರಿಯಾಗಿದೆ. ಸಾಮಾನ್ಯವಾಗಿ ಎಣ್ಣೆ ಹಚ್ಚಿ ಸ್ನಾನ ಮಾಡುವುದು ಬಿಟ್ಟರೆ ಕೂದಲಿಗೆ ವಿಶೇಷವಾದ ಆರೈಕೆಯನ್ನೇನೂ ಮಾಡುವುದಿಲ್ಲ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260425-51-1675844148

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.