ಬೆಂಗಳೂರು: ‘ಇತ್ತೀಚಿನ ವರ್ಷಗಳಲ್ಲಿ ಬುದ್ಧ ಫ್ಯಾಷನ್ ಆಗಿ ಚಲಾವಣೆಯಲ್ಲಿದ್ದಾನೆ. ಜಗತ್ತಿನ ಅಶಾಂತಿಗೆ ಕಾರಣಆಗಿರುವ ಅಮೆರಿಕದಲ್ಲೂ ಶಾಂತಿಪ್ರಿಯ ಬುದ್ಧನ ವಿಗ್ರಹಗಳನ್ನು ಕಾಣಬಹುದಾಗಿದೆ’ ಎಂದು ವಿಮರ್ಶಕ ಬಂಜಗೆರೆ ಜಯಪ್ರಕಾಶ್ ಬೇಸರ ವ್ಯಕ್ತಪಡಿಸಿದರು.

ಕೌದಿ ಪ್ರಕಾಶನ, ಸಾವಿತ್ರಿಬಾಯಿ ಫುಲೆ ಟ್ರಸ್ಟ್, ಸಖೀಗೀತ ಪ್ರಕಾಶನ ಹಾಗೂ ನೀಲಂ ಸಾಂಸ್ಕೃತಿಕ ಕೇಂದ್ರ ಜಂಟಿಯಾಗಿ ನಗರದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಬಿ. ಸುಜ್ಞಾನಮೂರ್ತಿ ಅವರು ಅನುವಾದಿಸಿರುವ ‘ಬೌದ್ಧಧರ್ಮದ ತಿರುಳು’ ಹಾಗೂ ‘ಇಂದಿನ ಜಗತ್ತಿಗೆ ಬೌದ್ಧಧರ್ಮ’ ಕೃತಿ ಜನಾರ್ಪಣೆ ಮಾಡಿ ಮಾತನಾಡಿದರು.

‘30 ವರ್ಷಗಳ ಈಚೆಗೆ ಬುದ್ಧನ ಬಗ್ಗೆ ಓದದವರು, ಆತನ ಬಗ್ಗೆ ತಿಳಿಯದವರು ಕೂಡ ಬುದ್ಧನ ಪ್ರತಿಮೆಯನ್ನು ಮನೆಯಲ್ಲಿ ಇಟ್ಟುಕೊಳ್ಳುತ್ತಿದ್ದಾರೆ. ಇದು ಫ್ಯಾಷನ್ ಆಗಿ ಮಾರ್ಪಟ್ಟಿದೆ. ಪ್ರಪಂಚದಲ್ಲಿ ಅತಿ ಹೆಚ್ಚು ಖರ್ಚಾಗುವ ಪ್ರತಿಮೆ ಬುದ್ಧನದಾಗಿದೆ. ಆದರೆ, ದುರಾಸೆಯನ್ನು ಬಿಟ್ಟು, ಆತ ಹೇಳಿದ ಮಧ್ಯಮ ಮಾರ್ಗವನ್ನು ಜನರು ಅನುಸರಿಸುತ್ತಿಲ್ಲ’ ಎಂದರು.

‘ಅತಿಯಾಸೆ, ವಿಪರೀತ ವ್ಯಾಪಾರೀಕರಣ, ಲಾಭ, ಮಾರುಕಟ್ಟೆ ನಿಯಂತ್ರಣದ ಕಾರಣ ಯುದ್ಧಗಳನ್ನು ಸೃಷ್ಟಿ ಮಾಡಲಾಗುತ್ತಿದೆ. ಈ ಸಂದರ್ಭದಲ್ಲಿ ಅಮೆರಿಕಕ್ಕೆ ಬುದ್ಧ ಅತ್ಯಗತ್ಯ. ಆತ ಸಾರಿದ ತತ್ವಗಳನ್ನು ಟ್ರಂಪ್ಗೆ ತಲುಪಿಸಬೇಕಿದೆ. ಅಮೆರಿಕದ ಪಾಪದ ಫಲವನ್ನು ನಾವೆಲ್ಲ ಎದುರಿಸುತ್ತಿದ್ದೇವೆ’ ಎಂದು ಅಭಿಪ್ರಾಯಪಟ್ಟರು.

‘ಬೌದ್ಧಧರ್ಮದ ತಿರುಳು’ ಕೃತಿಯ ಬಗ್ಗೆ ಮಾತನಾಡಿದ ವಿಮರ್ಶಕಿ ಎಂ.ಎಸ್. ಆಶಾದೇವಿ, ‘ಸರಿಯಾದ ರೀತಿಯಲ್ಲಿ ಬೌದ್ಧಧರ್ಮವನ್ನು ಪರಿಚಯಿಸಲು ಈ ಕೃತಿ ಸಹಕಾರಿ. ಬುದ್ಧನ ಬೋಧನೆಗಳು, ಅವನ ತತ್ವಶಾಸ್ತ್ರ, ನೀತಿಶಾಸ್ತ್ರ ಮತ್ತು ಆಚರಣೆಗಳ ಕುರಿತು ಆಳವಾದ ವಿಶ್ಲೇಷಣೆಯನ್ನು ಒಳಗೊಂಡಿದೆ’ ಎಂದು ಹೇಳಿದರು.

‘ಇಂದಿನ ಜಗತ್ತಿಗೆ ಬೌದ್ಧಧರ್ಮ’ ಕೃತಿಯ ಬಗ್ಗೆ ಮಾತನಾಡಿದ ಚಿಂತಕ ಮಂಗ್ಳೂರ ವಿಜಯ, ‘ಯುದ್ಧ, ದ್ವೇಷ, ಅಸೂಯೆ, ಅತೃಪ್ತಿಯಿಂದ ಹೊರ ಬರುವ ದಾರಿಯನ್ನು ಬುದ್ಧ ತೋರಿಸಿದ್ದಾನೆ. ಬೌದ್ಧ ಧರ್ಮವು ಮಾನವ ಪ್ರೀತಿ ಸಾರಲಿದೆ’ ಎಂದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260524-4-711129129

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.