ಬೆಂಗಳೂರು: ‘ದೈಹಿಕ ಶ್ರಮವಿಲ್ಲದ ಜಡ ಜೀವನಶೈಲಿ, ಕೆಲಸದ ಒತ್ತಡ, ಅನಾರೋಗ್ಯಕರ ಆಹಾರ ಪದ್ಧತಿ, ಧೂಮಪಾನ, ನಿದ್ದೆಯ ಕೊರತೆ ಸೇರಿ ವಿವಿಧ ಕಾರಣದಿಂದ ಹೃದಯದ ಕಾಯಿಲೆ ಹೆಚ್ಚಳವಾಗುತ್ತಿದೆ’ ಎಂದು ವೈದ್ಯಕೀಯ ತಜ್ಞರು ಕಳವಳ ವ್ಯಕ್ತಪಡಿಸಿದರು.

ಕಿರುತೆರೆ ಕಲಾವಿದರ ಸಹಭಾಗಿತ್ವದಲ್ಲಿ ಫೋರ್ಟಿಸ್ ಆಸ್ಪತ್ರೆ ನಗರದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಹೃದಯದ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸಲಾಯಿತು. ಜೀವನಶೈಲಿ ಬದಲಾವಣೆಯೊಂದಿಗೆ ಹೃದಯದ ಕಾಯಿಲೆ ತಡೆಗಟ್ಟುವಿಕೆ, ಹೃದಯದ ಕಾಯಿಲೆಯ ಲಕ್ಷಣಗಳ ಗುರುತಿಸುವಿಕೆ ಬಗ್ಗೆಯೂ ತಜ್ಞರು ಸಾರ್ವಜನಿಕರಿಗೆ ತಿಳಿಸಿದರು.

ಯಶವಂತಪುರದ ಫೋರ್ಟಿಸ್ ಆಸ್ಪತ್ರೆಯ ಹೃದ್ರೋಗ ವಿಭಾಗದ ಹೆಚ್ಚುವರಿ ನಿರ್ದೇಶಕ ಡಾ. ಪ್ರಸಾದ್ ಎಂ. ಭಟ್, ‘ಹೃದಯ ಸಂಬಂಧಿ ಕಾಯಿಲೆಗಳು ಈಗ ಯುವಜನರಲ್ಲಿಯೂ ಕಾಣಿಸಿಕೊಳ್ಳುತ್ತಿದ್ದು, ಆಸ್ಪತ್ರೆ ದಾಖಲಾತಿಯೂ ಇತ್ತೀಚೆಗೆ ಹೆಚ್ಚಾಗಿದೆ. ಆರೋಗ್ಯ ಕಡೆಗಣನೆಯೇ ಇದಕ್ಕೆ ಮುಖ್ಯ ಕಾರಣ. ನಿಯಮಿತ ಆರೋಗ್ಯ ತಪಾಸಣೆ, ದೈಹಿಕವಾಗಿ ಸಕ್ರಿಯವಾಗಿರುವುದು, ರಕ್ತದೊತ್ತಡ ಮತ್ತು ಮಧುಮೇಹವನ್ನು ನಿಯಂತ್ರಣದಲ್ಲಿಡುವುದು, ತಂಬಾಕು ಸೇವನೆಯಿಂದ ದೂರವಿರುವುದು ಸೇರಿ ವಿವಿಧ ಕ್ರಮಗಳ ಮೂಲಕ ಹೃದಯ ರಕ್ತನಾಳದ ಕಾಯಿಲೆಗಳ ಅಪಾಯವನ್ನು ಗಣನೀಯವಾಗಿ ಕಡಿಮೆ ಮಾಡಬಹುದು’ ಎಂದು ಹೇಳಿದರು.

ಹೃದ್ರೋಗ ತಜ್ಞ ಡಾ. ಸತೀಶ್ ಎಲ್., ‘ಹೃದಯಾಘಾತ ಸಂಭವಿಸಿದಾಗ ಪ್ರತಿಯೊಂದು ನಿಮಿಷವೂ ಅತ್ಯಂತ ಅಮೂಲ್ಯವಾಗಿರುತ್ತದೆ. ಎದೆ ನೋವು ಅಥವಾ ಅಸ್ವಸ್ಥತೆ, ಉಸಿರಾಟದ ತೊಂದರೆ, ಅತಿಯಾಗಿ ಬೆವರುವುದು, ಯಾವುದೇ ಕಾರಣವಿಲ್ಲದೆ ವಿಪರೀತ ಆಯಾಸವಾಗುವುದು ಸೇರಿ ವಿವಿಧ ಲಕ್ಷಣಗಳನ್ನು ನಿರ್ಲಕ್ಷಿಸಬಾರದು. ಚಿಕಿತ್ಸೆ ವಿಳಂಬವಾದರೆ ಅದು ಹೃದಯದ ಸ್ನಾಯುಗಳಿಗೆ ಸರಿಪಡಿಸ ಲಾಗದಷ್ಟು ಹಾನಿಯನ್ನುಂಟು ಮಾಡುತ್ತದೆ. ಲಕ್ಷಣಗಳು ಕಂಡು ಬಂದ ತಕ್ಷಣವೇ ವೈದ್ಯಕೀಯ ನೆರವು ಪಡೆಯುವುದರಿಂದ ರೋಗಿ ಗುಣಮುಖವಾಗುವ ಸಾಧ್ಯತೆ ಹೆಚ್ಚುತ್ತದೆ’ ಎಂದು ಅಭಿಪ್ರಾಯಪಟ್ಟರು.

ನಟ ಅನಿರುದ್ಧ, ಬೆಂಗಳೂರು ನಗರ ಸಂಚಾರ ಪೊಲೀಸ್ ವಿಭಾಗದ ಸಹಾಯಕ ಪೊಲೀಸ್ ಕಮಿಷನರ್ (ಎಸಿಪಿ- ಸಂಚಾರ ಯೋಜನೆ) ಕವಿತಾ ಕರಿಯಪ್ಪ, ಕರ್ನಾಟಕ ಕಿರುತೆರೆ ಕಲಾವಿದರ ಕೂಟದ ಸಂಸ್ಥಾಪನಾಧ್ಯಕ್ಷ ಗಣೇಶ್ ರಾವ್ ಕೇಸರ್ಕರ್ ಉಪಸ್ಥಿತರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260601-4-918831349

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.