ಬೆಂಗಳೂರು: ‘ರಾಮಾಯಣವನ್ನು ಯಾರೂ ಮೊದಲ ಬಾರಿಗೆ ಓದುವುದಿಲ್ಲ. ಅದು ನಮ್ಮ ಸಂಸ್ಕಾರದ ಭಾಗವೇ ಆಗಿರುವುದರಿಂದ ಸದಾ ಮರು ಓದಿಗೆ ಒಳಪಡುತ್ತಿರುತ್ತೇವೆ’ ಎಂದು ನಿವೃತ್ತ ಐಎಎಸ್ ಅಧಿಕಾರಿ ಚಿರಂಜೀವ್ ಸಿಂಘ್ ತಿಳಿಸಿದರು.

ಭಾರತೀಯ ವಿದ್ಯಾಭವನದಲ್ಲಿ ಭಾನುವಾರ ಆಯೋಜಿಸಿದ್ದ ಕೆ.ಜಿ. ರಾಘವನ್ ಅವರ ‘ಎಕೋಸ್ ಫ್ರಮ್ ರಾಮಾಯಣ’ ಜನಾರ್ಪಣೆ ಮತ್ತು ಪದ್ಮಭೂಷಣ ಪುರಸ್ಕೃತರಾದ ಶತಾವಧಾನಿ ಆರ್. ಗಣೇಶ್ ಅವರಿಗೆಗೌರವಾರ್ಪಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಈ ಪುಸ್ತಕವು ಒಣ ಶೈಕ್ಷಣಿಕ ಪಠ್ಯವಲ್ಲ. ಬದಲಾಗಿ ಭಕ್ತಿಪೂರ್ವಕ ಮಂಥನ. ರಾಘವನ್ ಅವರ ಪುಸ್ತಕವು ಕಾಡು, ಪರಿಸರ ಮತ್ತು ಮಹಾಕಾವ್ಯದಲ್ಲಿ ಮಹಿಳೆಯರ ಪಾತ್ರವನ್ನು ಅನ್ವೇಷಿಸುವ ಮೂಲಕ ಧರ್ಮಬದ್ಧ ಜೀವನಕ್ಕೆ ಮಾರ್ಗದರ್ಶಿಯಾಗಿದೆ’ ಎಂದು ಹೇಳಿದರು.

ಒಡಿಶಾ ಹೈಕೋರ್ಟ್ನ ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಮಾತನಾಡಿ, ‘ನಿಜವಾದ ಪಾಂಡಿತ್ಯವನ್ನು ಹಗೆತನದಿಂದ ನೋಡುವ ಪರಿಸ್ಥಿತಿ ಈಗ ಇದೆ. ಗಣೇಶ್ ಅವರಂತಹ ವಿದ್ವಾಂಸರಿಗೆ ದೇಶದ ಅತ್ಯುನ್ನತ ನಾಗರಿಕ ಗೌರವವಾದ ಭಾರತ ರತ್ನ ಸಿಗಬೇಕು’ ಎಂದರು.

‘ಯಾವ ರಾಜನು ವಿದ್ವಾಂಸನ ಬಳಿ ಹೋಗುತ್ತಾನೋ ಆತ ಧನ್ಯ. ಯಾವ ವಿದ್ವಾಂಸನು ರಾಜನ ಬಳಿ ಹೋಗುತ್ತಾನೋ ಆತ ಶಾಪಗ್ರಸ್ತ. ಶತಾವಧಾನಿ ಗಣೇಶ್ ಅವರು ಬಿರುದು-ಬಾವಲಿಗಳ ಹಿಂದೆ ಹೋದವರಲ್ಲ. ಒಂದು ವೇಳೆ ನಮ್ಮ ಪ್ರಾಚೀನ ಪರಂಪರೆ ನಾಶವಾದರೂ, ಅದನ್ನು ತಮ್ಮ ನೆನಪಿನ ಶಕ್ತಿಯಿಂದಲೇ ಮರುಸೃಷ್ಟಿಸಬಲ್ಲ ಸಾಮರ್ಥ್ಯ ಅವರಲ್ಲಿದೆ’ ಎಂದು ಶ್ಲಾಘಿಸಿದರು.

ಭಾರತೀಯ ವಿದ್ಯಾಭವನದ ವಜ್ರಮಹೋತ್ಸವದ ಅಂಗವಾಗಿ ಹಮ್ಮಿಕೊಂಡಿರುವ ಹಲವು ಕಾರ್ಯಕ್ರಮ ಗಳಲ್ಲಿ ಇದು ಮೊದಲನೆಯದ್ದಾಗಿದೆ. ಮುಂಬರುವ ದಿನಗಳಲ್ಲಿ ಐದು ದಿನಗಳ ಸಾಹಿತ್ಯ ಉತ್ಸವ ಮತ್ತು‘ಸಂಗೀತವಾಣಿ’ ಎಂಬ ಜಾಗತಿಕ ಸಂಗೀತ ಸಮ್ಮೇಳನ ವನ್ನು ಆಯೋಜಿಸಲಾಗುವುದು ಎಂದು ವಿದ್ಯಾಭವನದ ಅಧ್ಯಕ್ಷ ಕೆ.ಜಿ. ರಾಘವನ್ ಮಾಹಿತಿ ನೀಡಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260420-4-2029296488

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.