ಬ್ರಹ್ಮಾವರ: ನಾಟಕಗಳು ಕೇವಲ ಮನೋರಂಜನೆಯ ಕಾರ್ಯಕ್ರಮಗಳಲ್ಲ. ಅವುಗಳು ಸಮಾಜದ ಅಂಕುಡೊಂಕುಗಳನ್ನು ಜನರ ಮುಂದಿಟ್ಟು, ಸಮಾಜವನ್ನು ಜಾಗೃತಿಗೊಳಿಸುತ್ತವೆ. ನಾಟಕಗಳು ನೀಡುವ ಉತ್ತಮ ಸಂದೇಶಗಳಿoದ ನೈತಿಕ ಸಮಾಜದ ಸೃಷ್ಟಿ ಸಾಧ್ಯ ಎಂದು ರಂಗಭೂಮಿ ಉಡುಪಿ ಅಧ್ಯಕ್ಷ ತಲ್ಲೂರು ಶಿವರಾಮ ಶೆಟ್ಟಿ ಹೇಳಿದರು.

ಬ್ರಹ್ಮಾವರದ ಎಸ್ಎಂಎಸ್ ಕಾಲೇಜಿನ ಎಸ್.ಎಂ.ಎಸ್ ಮಕ್ಕಳ ಮಂಟಪದಲ್ಲಿ ಈಚೆಗೆ ನಡೆದ ಭೂಮಿಕಾ ಹಾರಾಡಿ ರಂಗಭೂಮಿ ಸಂಸ್ಥೆಯ ನಾಟಕೋತ್ಸವ ‘ಬಣ್ಣ -12’ರ ಸಮಾಪನ ಸಭಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ರಂಗಭೂಮಿಯ ನಿರಂತರ ಬೆಳವಣಿಗೆಗೆ ಪ್ರೇಕ್ಷಕರ ಪ್ರೋತ್ಸಾಹ ಅತ್ಯಗತ್ಯವಾಗಿದೆ. ಈ ನಿಟ್ಟಿನಲ್ಲಿ ಭೂಮಿಕಾ ಹಾರಾಡಿ ಸಂಸ್ಥೆಯ ಸಂಚಾಲಕ ರಾಮ್ ಶೆಟ್ಟಿ ಹಾಗೂ ಅವರ ತಂಡದ ಶ್ರಮದ ಫಲವಾಗಿ ಈ ನಾಟಕೋತ್ಸವ 12ನೇ ವರ್ಷವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ ಎಂದರು.

ಸಾಮಾಜಿಕ ಪಿಡುಗುಗಳ ಬಗ್ಗೆ ಜನರನ್ನು ಎಚ್ಚರಿಸುವ ಸಂದೇಶವನ್ನು ಹೊತ್ತ ನಾಟಕಗಳ ಪ್ರದರ್ಶನ ನಡೆಯಬೇಕು. ಇಂದಿನ ಯುವಪೀಳಿಗೆಗೆ ನೈತಿಕ ಮೌಲ್ಯಗಳನ್ನು ಬಿತ್ತುವ ಈ ಕಾರ್ಯ ನಿರಂತರವಾಗಿ ರಂಗಭೂಮಿಯಿಂದ ನಡೆಯಲಿ ಎಂದು ಹೇಳಿದರು.

ನಿಯೋಜಿತ ರೋಟರಿ ಜಿಲ್ಲಾ ಗವರ್ನರ್ ಬಿ.ಎಂ.ಭಟ್ ಮಾತನಾಡಿ, ಭೂಮಿಕಾ ಹಾರಾಡಿಯ ಪರಿಶ್ರಮವನ್ನು ಆರಂಭದಿಂದಲೂ ಕಂಡಿದ್ದೇನೆ. ಒಂದು ನಾಟಕದಿಂದ ಆರಂಭಗೊಂಡ ಈ ನಾಟಕೋತ್ಸವ ಇಂದು 51 ನಾಟಕಗಳನ್ನು ಪ್ರದರ್ಶನ ಮಾಡಿದೆ. ನಿಜಕ್ಕೂ ಶ್ಲಾಘನೀಯ ಕೆಲಸವನ್ನು ಮಾಡಿದೆ ಎಂದರು.

ಭೂಮಿಕಾದ ಅಧ್ಯಕ್ಷ ಆರ್.ಎಂ. ಸಾಮಗ, ಗೌರವಾಧ್ಯಕ್ಷ ರವಿ ಎಸ್. ಪೂಜಾರಿ, ಕೋಶಾಧಿಕಾರಿ ಶ್ರೀಹರಿ ಭಟ್ ಉಪಸ್ಥಿತರಿದ್ದರು. ಕಾರ್ಯದರ್ಶಿ ಹರೀಶ್ ಕಿರಣ್ ತುಂಗ ಸ್ವಾಗತಿಸಿದರು. ಸಂಚಾಲಕ ಬಿ.ಎಸ್. ರಾಮ್ ಶೆಟ್ಟಿ ಹಾರಾಡಿ ವಂದಿಸಿದರು.

ಸಭಾ ಕಾರ್ಯಕ್ರಮದ ಬಳಿಕ ಭೂಮಿಕಾ ಹಾರಾಡಿ ತಂಡದಿಂದ ‘ಸುಯೋಧನ’ ನಾಟಕ ಪ್ರದರ್ಶನಗೊಂಡಿತು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260409-28-1662256459

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.