ಚನ್ನಪಟ್ಟಣ: ನಾಡಿನ ಪರಂಪರೆ ಸೊಗಡನ್ನು ಮುಂದಿನ ಪೀಳಿಗೆಗೆ ಪರಿಚಯಿಸುವಲ್ಲಿ ಜಾನಪದ ಕಾರ್ಯಕ್ರಮ ಮಹತ್ತರ ಪಾತ್ರ ವಹಿಸುತ್ತದೆ ಎಂದು ನಿವೃತ್ತ ಹಿರಿಯ ಫಾರ್ಮಾಸಿಸ್ಟ್ ಎಂ.ವೇದಮೂರ್ತಿ ಅಭಿಪ್ರಾಯಪಟ್ಟರು.

ನಗರದ ಕೊಲ್ಲಾಪುರದಮ್ಮ ದೇವಾಲಯದ ಆವರಣದಲ್ಲಿ ಶಿವಪಾರ್ವತಿ ಸಾಮಾಜಿಕ ಶೈಕ್ಷಣಿಕ ಸಾಂಸ್ಕೃತಿಕ ಕಲಾ ಟ್ರಸ್ಟ್ ಹಾಗೂ ಕನ್ನಡ ಸಂಸ್ಕೃತಿ ಇಲಾಖೆ, ಬೆಂಗಳೂರು ಸಹಯೋಗದಲ್ಲಿ ಶನಿವಾರ ನಡೆದ ರಾಜ್ಯಮಟ್ಟದ ಜಾನಪದ ಕಲಾ ಉತ್ಸವ ಉದ್ಘಾಟಿಸಿ ಮಾತನಾಡಿದರು.

ಜಾನಪದ ಕಲೆಗಳು ಗ್ರಾಮೀಣ ಜೀವನದ ಜೀವನಾಡಿ. ಅವು ಸಂಸ್ಕೃತಿ ಮತ್ತು ಪರಂಪರೆ ದಾಖಲೆಗಳು. ಇವು ಕೇವಲ ಮನರಂಜನೆಯ ಸಾಧನಗಳಲ್ಲ. ಸಂಸ್ಕೃತಿ, ಸಂಪ್ರದಾಯ ಮತ್ತು ಬದುಕಿನ ತತ್ವಗಳನ್ನು ಒಳಗೊಂಡಿರುವ ಜೀವಂತ ದಾಖಲೆಗಳಾಗಿವೆ. ಇಂದಿನ ತಂತ್ರಜ್ಞಾನ ಯುಗದಲ್ಲಿ ಯುವ ಜನರು ಜಾನಪದ ಕಲೆಗಳಿಂದ ದೂರವಾಗುತ್ತಿರುವುದು ವಿಷಾದಕರ ಸಂಗತಿ ಎಂದರು.

ಅಧ್ಯಕ್ಷತೆ ವಹಿಸಿದ್ದ ಹಿರಿಯ ಕಲಾವಿದ ಮರಿದೇವರು ಮಾತನಾಡಿ, ಜಾನಪದ ಕಲಾವಿದರ ಸಂಕಷ್ಟದಲ್ಲಿದ್ದಾರೆ. ಅನೇಕ ಕಲಾವಿದರು ತಮ್ಮ ಜೀವನವನ್ನು ಕಲೆಗಾಗಿ ಅರ್ಪಿಸಿದ್ದರೂ, ಅವರಿಗೆ ತಕ್ಕ ಮಟ್ಟಿನ ಪ್ರೋತ್ಸಾಹ ಮತ್ತು ಮಾನ್ಯತೆ ದೊರೆಯದಿರುವುದು ನೋವಿನ ಸಂಗತಿ. ಸರ್ಕಾರ ಮತ್ತು ಸಮಾಜ ಎರಡೂ ಸೇರಿ ಈ ಕಲಾವಿದರ ಬದುಕು ಸುಧಾರಿಸಲು ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು.

ಕಾರ್ಯಕ್ರಮದಲ್ಲಿ ಹಲವು ಪ್ರತಿಭಾವಂತ ಕಲಾವಿದರು ಕಲಾ ಕೌಶಲ ಪ್ರದರ್ಶಿಸಿದರು. ಕಲಾವಿದರಾದ ನಾಗಸ್ವಾಮಿ, ಗಂಗಾಧರ್, ಚಕ್ಕೆರೆ ಲೋಕೇಶ್, ಸಿದ್ದರಾಜು, ಶಿವಪ್ಪ ಶೆಟ್ಟಳ್ಳಿ, ಸಮತಾ, ಹಿರಿಯ ಕಲಾವಿದರು ಭಾಗವಹಿಸಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260419-14-1835417866

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.