ಚಿಕ್ಕನಾಯಕನಹಳ್ಳಿ: ಹನ್ನೆರಡನೇ ಶತಮಾನದ ವಚನ ಸಾಹಿತ್ಯ ಮತ್ತು ವಚನ ಚಳವಳಿ ಸಮಾಜದ ಹಿಂದುಳಿದ ವರ್ಗಗಳು ಹಾಗೂ ಕಾಯಕಯೋಗಿಗಳಿಗೆ ಸಾಮಾಜಿಕ ಸ್ವಾತಂತ್ರ್ಯ ಮತ್ತು ಸಮಾನತೆ ತಂದುಕೊಡುವಲ್ಲಿ ಮಹತ್ತರ ಪಾತ್ರ ವಹಿಸಿದೆ ಎಂದು ಗೋಡೇಕೆರೆ ಸಂಸ್ಥಾನ ಮಠದ ಮೃತ್ಯುಂಜಯ ಪರದೇಶೀಕೇಂದ್ರ ಸ್ವಾಮೀಜಿ ಹೇಳಿದರು.

ಪಟ್ಟಣದ ಜೋಗೀಹಳ್ಳಿಯ ಅಕ್ಕಮಹಾದೇವಿ ಸಮುದಾಯ ಭವನದಲ್ಲಿ ‘ಅಕ್ಕಮಹಾದೇವಿ ಮಹಿಳಾ ಸಮಾಜ’ದಿಂದ ನಡೆದ ‘ಅಕ್ಕನ ಹುಣ್ಣಿಮೆ’ ಹಾಗೂ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಮಾತನಾಡಿದರು.

ಹನ್ನೆರಡನೇ ಶತಮಾನದಲ್ಲಿ ಸಮಾಜದಲ್ಲಿದ್ದ ವರ್ಗಭೇದ, ಶೋಷಣೆ ಹಾಗೂ ಶ್ರಮಿಕ ವರ್ಗದ ಗುಲಾಮಗಿರಿಯನ್ನು ನಿರ್ಮೂಲನೆ ಮಾಡಲು ಬಸವಣ್ಣ, ಸಿದ್ಧರಾಮೇಶ್ವರ, ಚನ್ನಬಸವಣ್ಣ, ಅಕ್ಕಮಹಾದೇವಿ ಸೇರಿದಂತೆ ಅನೇಕ ಶರಣರು ವಚನ ಸಾಹಿತ್ಯದ ಮೂಲಕ ಸಾಂಸ್ಕೃತಿಕ ಕ್ರಾಂತಿ ನಡೆಸಿದರು. ಈ ಶರಣ ಚಳವಳಿ ತೀವ್ರಗೊಂಡಾಗ ಕಿಡಿಗೇಡಿಗಳು ಒಂದು ಲಕ್ಷಕ್ಕೂ ಹೆಚ್ಚು ವಚನಗಳನ್ನು ಸುಟ್ಟುಹಾಕಿದರಾದರೂ, ಶರಣರು ತಮ್ಮ ಪ್ರಾಣದ ಹಂಗು ತೊರೆದು ಉಳಿದ ವಚನ ಸಾಹಿತ್ಯವನ್ನು ಸಂರಕ್ಷಿಸಿದರು ಎಂದರು.

ಬಸವಣ್ಣ ಅನುಭವ ಮಂಟಪದಲ್ಲಿ ಲೌಕಿಕ ಭೋಗಗಳನ್ನು ತ್ಯಜಿಸಿ, ಪರಮ ವೈರಾಗ್ಯದಿಂದ ಶರಣೆಯಾದ ಅಕ್ಕಮಹಾದೇವಿಯ ಮಾನವೀಯ ಮೌಲ್ಯ ಹಾಗೂ ಬದುಕಿನ ಸಾರವಿರುವ ವಚನಗಳನ್ನು ಕೊಡುಗೆಯಾಗಿ ನೀಡಿದ್ದಾರೆ. ಶರಣರ ಈ ಕಾಯಕ ತತ್ವವನ್ನೇ ಗೋಡೇಕೆರೆ ಮಠದಲ್ಲಿಯೂ ಕಾಯಕ ನಿಷ್ಠೆ ಮತ್ತು ಶ್ರಮದಾನದ ಮೂಲಕ ಅಳವಡಿಸಿಕೊಳ್ಳಲಾಗಿದೆ ಎಂದರು.

ತಹಶೀಲ್ದಾರ್ ಮಮತಾ ಮಾತನಾಡಿ, ಮಹಿಳೆಯರು ಸ್ವಾಭಿಮಾನದಿಂದ ಬದುಕಲು ತಮ್ಮ ಕಾನೂನಾತ್ಮಕ ಹಕ್ಕುಗಳ ಅರಿವು ಮೂಡಿಸಿಕೊಳ್ಳಬೇಕು. ಕುಟುಂಬ ಹಾಗೂ ಸಮಾಜದಲ್ಲಿ ನಡೆಯುವ ಶೋಷಣೆಗಳಿಂದ ಹೊರಬರಲು ಮಹಿಳಾ ಸಂಘಟನೆಗಳು ಪ್ರಮುಖ ವೇದಿಕೆಗಳಾಗುತ್ತವೆ. ಅಕ್ಕಮಹಾದೇವಿ ಸ್ವಾಭಿಮಾನಿ ವ್ಯಕ್ತಿತ್ವ ಇಂದಿನ ಸ್ತ್ರೀ ಅಸ್ತಿತ್ವಕ್ಕೆ ಗಟ್ಟಿ ಬುನಾದಿಯಾಗಿದೆ. ಹೆಣ್ಣುಮಕ್ಕಳಿಗೆ ಸಮಾಜದಲ್ಲಿ ಹೆಚ್ಚಿನ ಪ್ರೋತ್ಸಾಹ ಮತ್ತು ಅವಕಾಶಗಳು ಸಿಗಬೇಕು ಎಂದು ಹೇಳಿದರು.

ಅಖಿಲ ಭಾರತ ವೀರಶೈವ ಮಹಾಸಭಾದ ತಾಲ್ಲೂಕು ಅಧ್ಯಕ್ಷ ಎಸ್.ಸಿ. ದಿನೇಶ್ ಮಾತನಾಡಿ, ಅಹಿಂಸಾ ಮಾರ್ಗದ ಮೂಲಕ ಪರಸ್ಪರ ಗೌರವಿಸುವ ಸಮಸಮಾಜ ನಿರ್ಮಾಣಕ್ಕೆ ಶರಣರ ವಚನ ದಾರಿದೀಪವಾಗಿವೆ. ಅನ್ನದಾಸೋಹ, ಕಾಯಕ ನಿಷ್ಠೆಗೆ ಆದ್ಯತೆ ನೀಡಿದ ಶರಣರ ತತ್ವವನ್ನು ಗೋಡೇಕೆರೆ ಮಠದ ಸ್ವಾಮೀಜಿ ಪ್ರಾಯೋಗಿಕವಾಗಿ ಶ್ರಮದಾನದ ಮೂಲಕ ಮುಂದುವರಿಸುತ್ತಿರುವುದು ಶ್ಲಾಘನೀಯ ಎಂದರು.

ಅಕ್ಕಮಹಾದೇವಿ ಮಹಿಳಾ ಸಮಾಜದ ನೂತನ ಅಧ್ಯಕ್ಷೆಯಾಗಿ ಸುಮಾ ಪ್ರವೀಣ್, ಕಾರ್ಯದರ್ಶಿಯಾಗಿ ಕವಿತಾ ಚನ್ನಬಸವಯ್ಯ ಪದಗ್ರಹಣ ಮಾಡಿದರು.

ಸಂಸ್ಥಾಪನಾಧ್ಯಕ್ಷೆ ಪುಷ್ಪಾ ಶಿವಣ್ಣ, ಕುಪ್ಪೂರು ಗದ್ದಿಗೆ ಮಠದ ಆಡಳಿತಾಧಿಕಾರಿ ವಾಗೀಶ್ ಪಂಡಿತಾರಾಧ್ಯ, ನಿಕಟಪೂರ್ವ ಅಧ್ಯಕ್ಷೆ ಅನುಪಮ ನಾಗರಾಜು, ಅಂಕಿತ ವಿದ್ಯಾಸಂಸ್ಥೆಯ ಕಾರ್ಯದರ್ಶಿ ವೀಣಾ ಶಂಕರ್ ಮಾತನಾಡಿದರು.

ಇನ್ನರ್ವ್ಹೀಲ್ ಕ್ಲಬ್ ಮಾಜಿ ಅಧ್ಯಕ್ಷೆ ಭವಾನಿ ಜಯರಾಂ, ರೂಪಾಂತರ ಮಹಿಳಾ ಸಂಘದ ಅಧ್ಯಕ್ಷೆ ರೂಪಶ್ರೀ, ಮಹಿಳಾ ಸಮಾಜದ ಶಿವಗಂಗಮ್ಮ, ಅಂಬಿಕಾ, ವಿವಿಧ ಮಹಿಳಾ ಸಂಘಟನೆಗಳ ಮುಖಂಡರು ಉಪಸ್ಥಿತರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260531-18-1159578554

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.