ಚಿತ್ರದುರ್ಗ: ‘ಸಾಹಿತಿ, ಕವಿಗಳಾದವರು ಒಂದೇ ಭಾಷೆಗೆ ಅಂಟಿಕೊಳ್ಳುವ ಬದಲು ಇತರೆ ಭಾಷೆಗಳ ಬರಹಗಳನ್ನು ಓದಬೇಕು. ಇಲ್ಲವಾದರೆ ಹೊಸ ಆಲೋಚನೆಗಳು ಯಾರಲ್ಲೂ ಹುಟ್ಟಲು ಸಾಧ್ಯವಿಲ್ಲ’ ಎಂದು ಸಂಶೋಧಕ ಬಿ. ರಾಜಶೇಖರಪ್ಪ ತಿಳಿಸಿದರು.

ನಗರದ ಪತ್ರಕರ್ತರ ಭವನದಲ್ಲಿ ಭಾನುವಾರ ಚಿನ್ಮೂಲಾದ್ರಿ ಸಾಹಿತ್ಯ ವೇದಿಕೆಯಿಂದ ಆಯೋಜಿಸಿದ್ದ ಲೇಖಕಿ ಚಾಂದಿನಿ ಖಲೀದ್ ಅವರ ಒಂದು ಬೊಗಸೆ ಪ್ರೀತಿ ಕವನ ಸಂಕಲನ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದರು.

‘ಕಾವ್ಯದ ಬಗ್ಗೆ ಜವಾಬ್ದಾರಿಯಿದ್ದಾಗ ಮಾತ್ರ ಸರಿಯಾದ ಬರವಣಿಗೆ ಕೊಡಬೇಕೆಂಬ ಕಾಳಜಿ ಕವಿಯಲ್ಲಿರುತ್ತದೆ’ ಎಂದರು.

‘ಆರೋಗ್ಯಕರ ಕೃತಿಯನ್ನು ಸಮಾಜಕ್ಕೆ ಕೊಡಬೇಕಾಗಿರುವುದರಿಂದ ಕವಿಗೆ ಜವಾಬ್ದಾರಿಯಿರಬೇಕು. ಕಾವ್ಯ ಇದ್ದಕ್ಕಿದ್ದಂತೆ ಹುಟ್ಟುವುದಿಲ್ಲ. ನಿಲುವು, ಯೋಚನಾ ಲಹರಿ ಬಹುಮುಖ್ಯವಾಗುತ್ತದೆ’ ಎಂದು ತಿಳಿಸಿದರು.

‘ಪ್ರೀತಿ ಎಂದರೆ ಕೇವಲ ಗಂಡು–ಹೆಣ್ಣಿನ ನಡುವಿನ ಪ್ರೀತಿಯಲ್ಲ. ಅಪ್ಪ ಅಮ್ಮನ ಪ್ರೀತಿ, ಸಹೋದರರ ಪ್ರೀತಿ, ಸ್ನೇಹಿತರ ನಡುವಿನ ಪ್ರೀತಿಗೂ ಪ್ರಾಮುಖ್ಯತೆಯಿದೆ. ಆ ಅರ್ಥದಲ್ಲಿ ಚಾಂದಿನಿ ಖಲೀದ್ ಬೊಗಸೆಯಷ್ಟು ಪ್ರೀತಿ ಎಂಬ ಕವನ ಸಂಕಲನ ಹೊರತಂದಿದ್ದಾರೆ’ ಎಂದು ವಕೀಲ ಬಿ.ಕೆ. ರಹಮತ್ ವುಲ್ಲಾ ಹೇಳಿದರು.

‘ಸಾಹಿತಿಗೆ ತನ್ನದೆ ಆದ ಜವಾಬ್ದಾರಿ, ಕನಸುಗಳಿರುತ್ತವೆ. ಕೃತಿ ಮನಸ್ಸನ್ನು ಆಕರ್ಷಿಸುವಂತಿರಬೇಕು. ಕಾವ್ಯ, ಕೃತಿ, ಕಾದಂಬರಿಯನ್ನು ಬರೆಯುವುದೆಂದರೆ ಜ್ಞಾನದ ಅಡುಗೆಯನ್ನು ಓದುಗರಿಗೆ ಬಡಿಸಿದಂತೆ. ಇದರ ಮೂಲಕ ಸಮಾಜಕ್ಕೆ ಬೆಳಕಿನ ಆಕರವಾಗಬೇಕು’ ಎಂದು ಆರ್ಥಿಕ ಚಿಂತಕ ಜಿ.ಎನ್. ಮಲ್ಲಿಕಾರ್ಜುನಪ್ಪ ತಿಳಿಸಿದರು.

‘ಸಂವೇದನೆ ಕಳೆದುಕೊಂಡ ಬದುಕು ಅಮಾನವೀಯವಾಗಿರುತ್ತದೆ. ಕಾವ್ಯವನ್ನು ಆಸ್ವಾದಿಸುವಾಗ ಅಕ್ಕಮಹಾದೇವಿಯ ವಚನಗಳ ಸಾಲಿನಂತಿರಬೇಕು. ಸಾಂಪ್ರದಾಯಿಕ ವ್ಯವಸ್ಥೆ ಮೀರಿ ಬರೆಯುವ ಧೈರ್ಯ ಕವಿ, ಸಾಹಿತಿಗಿರಬೇಕು’ ಎಂದರು.

ಉಪನ್ಯಾಸಕ ಫೈಜ್ನಟ್ರಾಜ್, ಚಿನ್ಮೂಲಾದ್ರಿ ಸಾಹಿತ್ಯ ವೇದಿಕೆ ಅಧ್ಯಕ್ಷೆ ಶಾರದಾ ಜೈರಾಮ್, ನಗರಸಭೆ ಮಾಜಿ ಅಧ್ಯಕ್ಷೆ ಸುನೀತಾ ಮಲ್ಲಿಕಾರ್ಜುನ್ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260511-44-2093209151

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.