ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚೀನಾದಲ್ಲಿ ‘ಐ ಆ್ಯಮ್‌ ಗೇ’ ಆನ್‌ಲೈನ್‌ ಚಳವಳಿ

Last Updated 14 ಏಪ್ರಿಲ್ 2018, 19:30 IST
ಅಕ್ಷರ ಗಾತ್ರ

ಬೀಜಿಂಗ್‌: ತನ್ನ ವೆಬ್‌ಸೈಟ್‌ನಿಂದ ಸಲಿಂಗಕಾಮಕ್ಕೆ ಸಂಬಂಧಿಸಿದ ವಿಷಯಗಳನ್ನು ತೆಗೆದುಹಾಕುವುದಾಗಿ ಚೀನಾದ ಜನಪ್ರಿಯ ಕಿರು ಬ್ಲಾಗಿಂಗ್‌ ವೇದಿಕೆ ಸೈನಾ ವೀಬೊ ಘೋಷಿಸಿದೆ. ಇದನ್ನು ವಿರೋಧಿಸಿ, ‘ಐ ಆ್ಯಮ್‌ ಗೇ’ ಎಂಬ ಆನ್‌ಲೈನ್‌ ಚಳವಳಿ ಆರಂಭಿಸಲಾಗಿದೆ.

‘ತನ್ನ ವೆಬ್‌ಸೈಟ್‌ನಲ್ಲಿ ಇರುವ ಅಕ್ರಮ ವಿಡಿಯೊಗಳು, ಅಸಹಜ ಲೈಂಗಿಕತೆ, ಹಿಂಸಾಚಾರ ಮತ್ತು ಸಲಿಂಗಕಾಮ ಪ್ರಚೋದಿಸುವ ವಿಡಿಯೊಗಳನ್ನು ತೆಗೆದುಹಾಕುವ ಪ್ರಕ್ರಿಯೆಯನ್ನು ಈಗಾಗಲೇ ಆರಂಭಿಸಲಾಗಿದೆ. ಈ ಪ್ರಕ್ರಿಯೆ ಮುಂದಿನ ಮೂರು ತಿಂಗಳವರೆಗೆ ಜಾರಿಯಲ್ಲಿರುತ್ತದೆ’ ಎಂದು ವೀಬೊ ಪ್ರಕಟಣೆಯಲ್ಲಿ ತಿಳಿಸಿದೆ.

ಸಂಸ್ಥೆಯ ಈ ನಿರ್ಧಾರ ವಿರೋಧಿಸಿ ಹಲವು ಬಳಕೆದಾರರು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ.

‘ಸಮಾಜವಾದದಲ್ಲಿ ಸಲಿಂಗಾಮ ಇರುವುದಿಲ್ಲವೆ? ಆರ್ಥಿಕವಾಗಿ ಮುಂಚೂಣಿಯಲ್ಲಿದ್ದು, ಬಲಿಷ್ಠ ಮಿಲಿಟರಿ ಪಡೆ ಹೊಂದಿರುವ ಚೀನಾ, ವಿಚಾರಗಳ ದೃಷ್ಟಿಯಿಂದ ಊಳಿಗಮಾನ್ಯ ಪದ್ಧತಿಗೆ ಹಿಂದಿರುಗಿತೇ’ ಎಂದು ವ್ಯಕ್ತಿಯೊಬ್ಬರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT