ದೊಡ್ಡಬಳ್ಳಾಪುರ: ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯಿಂದ ತಾಲ್ಲೂಕು ಕಚೇರಿಯಲ್ಲಿ ಅಕ್ಕಮಹಾದೇವಿ ಜಯಂತಿ ನಡೆಯಿತು.

ತಹಶೀಲ್ದಾರ್ ಮಲ್ಲಪ್ಪ.ಕೆ.ಯರಗೋಳ ಮಾತನಾಡಿ, ಅಕ್ಕ ಮಹಾದೇವಿ ವಚನಗಳ ಮೂಲಕ ಬದುಕಿನ ಮೌಲ್ಯ ಪ್ರತಿಪಾದಿಸಿದರು. ಅವರ ವಚನಗಳ ವಿಚಾರಧಾರೆ ಪ್ರಚಾರವಾಗಬೇಕು. ಉತ್ತಮಸಮಾಜ ನಿರ್ಮಾಣಕ್ಕೆ ಅಡಿಪಾಯವಾಗಬೇಕಿದೆ ಎಂದು ಹೇಳಿದರು.

12ನೇ ಶತಮಾನದ ವಚನಕಾರರಲ್ಲಿ ಅಕ್ಕ ಪ್ರಮುಖರು. ಅಧಿಕಾರ, ಸಂಪತ್ತು, ವೈಭವ, ಆಡಂಬರ, ಭೋಗ ಜೀವನವನ್ನು ಸಂಪೂರ್ಣವಾಗಿ ತಿರಸ್ಕರಿಸಿ, ಎಲ್ಲಾ ಬಂಧನಗಳಿಂದ ಬಿಡುಗಡೆ ಪಡೆದು ಸಾಮಾನ್ಯರಲ್ಲಿ ಸಾಮಾನ್ಯಳಂತೆ ಜನ ಜೀವನದಲ್ಲಿ ಬೆರೆತು ಬದುಕಿದರು ಎಂದು ಸ್ಮರಿಸಿದರು.

ವಚನಕಾರರಲ್ಲಿ ಬಸವಣ್ಣನವರಂತೆ ಮಹಿಳಾ ವಚನಕಾರ್ತಿಯಾಗಿಅಕ್ಕಮಹಾದೇವಿ, ತಮ್ಮ ವಚನಗಳಲ್ಲಿ ಬದುಕಿನ ಮೌಲ್ಯಗಳನ್ನು ಸಾರಿದ್ದಾರೆ. ಆಡಂಬರದ ಜೀವನಕ್ಕೆ ಆಸೆ ಬೀಳದೆ ಸಮಾಜ ಮುಖಿಯಾಗಿ ಬದುಕು ನಡೆಸಿ ಸಮಾಜದ ಅಂಕು ಡೊಂಕುಗಳನ್ನು ತಿದ್ದುವ ಕಾರ್ಯ ಮಾಡಿದ್ದಾರೆ ಎಂದು ಅಕ್ಕನ ಬಳಗದ ಪುಷ್ಪಾ ಶಿವಶಂಕರ್ ಹೇಳಿದರು.

ಗ್ರಾಮ ಪಂಚಾಯಿತಿ ಮಾಜಿ ಸದಸ್ಯೆ ನಾಗರತ್ನಮ್ಮ, ಅಕ್ಕನ ಬಳಗ ಮಹಿಳಾ ಮಂಡಳಿ ಅಧ್ಯಕ್ಷೆ ಪಾರ್ವತಮ್ಮ, ರುದ್ರಪ್ಪ, ಕಾರ್ಯದರ್ಶಿ ಮಂಜುಳಾ ಉಮಾಶಂಕರ್, ಭ್ರಮರಾಂಭ,ಶಶಿಕಲಾ, ವೀರಶೈವ ಸಮಾಜದ ಪುಟ್ಟಬಸವರಾಜು, ಆರ್.ಎಸ್.ಮಂಜುನಾಥ್ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260403-15-1371305201

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.