ದೊಡ್ಡಬಳ್ಳಾಪುರ: ನಗರದ ಡಾ.ರಾಜ್ಕುಮಾರ್ ಕಲಾಮಂದಿರದಲ್ಲಿ ಹೊಸದುರ್ಗ ತಾಲ್ಲೂಕಿನ ಸಾಣೇಹಳ್ಳಿ ಶಿವಕುಮಾರ ಕಲಾ ಸಂಘದ ಕಲಾವಿದರಿಂದ ಮೂರು ದಿನಗಳ ಶಿವ ಸಂಚಾರ ನಾಟಕೋತ್ಸವ ಆರಂಭಗೊಂಡಿತು.

ದೊಡ್ಡಬಳ್ಳಾಪುರ ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತು, ಲಯನ್ಸ್ ಕ್ಲಬ್ ಮತ್ತು ಲಯನ್ಸ್ ಚಾರಿಟಬಲ್ ಟ್ರಸ್ಟ್, ಕನ್ನಡ ಸಾಹಿತ್ಯ ಪರಿಷತ್ ಮತ್ತು ತಾಲ್ಲೂಕು ಕಲಾವಿದರ ಸಂಘ ಸಹಯೋಗದಲ್ಲಿ ಆಯೋಜಿಸಿರುವ ನಾಟಕೋತ್ಸವದಲ್ಲಿ ಮೊದಲ ದಿನ ‘ಜಂಗಮದೆಡೆಗೆ’ ನಾಟಕ ಪ್ರದರ್ಶನವಾಯಿತು.

ಸಾಣೇಹಳ್ಳಿ ಮಠದ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ರಚಿಸಿರುವ ನಾಟಕವನ್ನು ಆರ್.ಜಗದೀಶ್ ನಿರ್ದೇಶನ ಮಾಡಿದ್ದರು.

ಜಂಗಮದೆಡೆಗೆ ನಾಟಕವು ಬಸವಣ್ಣನವರ ಬದುಕಿನ ಸುತ್ತ ನಡೆಯುವ ಘಟನಾವಳಿಗಳ ಚಿತ್ರಣವಾಗಿದೆ. ನಾಟಕದಲ್ಲಿ ಬಸವಣ್ಣನವರ ಬಾಲ್ಯವು ಕತ್ತಲೆಯಿಂದ ಬೆಳಕಿನೆಡೆಗೆ ಹೆಜ್ಜೆ ಇಡುತ್ತಿರುವುದು ಆರಂಭದ ದೃಶ್ಯದಿಂದಲೇ ವ್ಯಕ್ತವಾಗುತ್ತದೆ. ಬಸವಣ್ಣನವರ ಅಂತರಂಗ-ಬಹಿರಂಗ, ಅಂದಿನ ರಾಜಕೀಯ ಸಂಚು, ಪುರೋಹಿತಶಾಹಿಯ ಪಿತೂರಿ, ಬಿಜ್ಜಳನ ತಳಮಳ, ಗಂಗಾಂಬಿಕೆ, ನೀಲಾಂಬಿಕೆ, ಅಕ್ಕನಾಗಮ್ಮ ಮುಂತಾದವರ ಪ್ರೋತ್ಸಾಹದ ಅಂಶಗಳು ನಾಟಕದ ಜಂಗಮತ್ವಕ್ಕೆ ಪ್ರೇರಕವಾಗಿವೆ.

ನಾಟಕ ಬಸವಣ್ಣನವರ ಬಹುಮುಖಿ ಬದುಕಿಗೆ ಕನ್ನಡಿ ಹಿಡಿಯಿತು. ಬಸವಣ್ಣನವರ ಚಿಂತನೆಗಳು ಮತ್ತು ವಚನಗಳು ಇಂದಿಗೂ ಜಗತ್ತಿಗೆ ಬೆಳಕನ್ನು ಚೆಲ್ಲುವ ಜಂಗರೂಪಿಗಳು ಎನ್ನುವುದನ್ನು ಜಂಗಮದೆಡೆಗೆ ನಾಟಕ ಬಿಂಬಿಸುತ್ತದೆ.

ಬಸವರಾಜ ತಮ್ಮಣ್ಣ ಪೂಜಾರಿ, ವಿಶ್ವಾಸರೆಡ್ಡಿ,ಪ್ರವೀಣ ಕೊಪ್ಪಳ, ಸುನೀಲ ಕಲುಬುರಗಿ, ಉದಯಕುಮಾರ್, ದಿನೇಶ್ ಯರನಾಳೆ, ಎನ್.ವಿಶ್ವಜ್ಯೋತಿ, ಪ್ರಶಾಂತ್, ಜಿ.ಯಲ್ಲಪ್ಪ, ಎಸ್.ಎಸ್.ಸುಹಾಸ್, ಬಿ.ಎಸ್.ರಾಜೇಶ್, ಜೆ.ಜನಾರ್ಧನ್. ಚಂದ್ರಕಲಾ, ನಾಗರತ್ನ, ದರ್ಶನ್ ಪಾತ್ರಗಳಿಗೆ ಜೀವ ತುಂಬಿದ್ದರು.

ಜಂಗಮದೆಡೆಗೆ ನಾಟಕಕ್ಕೆ ಆರ್.ಜಗದೀಶ್ ಸಂಗೀತ ಮತ್ತು ವಿನ್ಯಾಸ, ಸಂಗೀತ ಸಹಕಾರವನ್ನು ಎಚ್.ಎಸ್.ನಾಗರಾಜ್ ಮತ್ತು ಕೆ.ದಾಕ್ಷಾಯಣಿ, ತಬಲ ಸಾಥಿ ಶರಣ್ ಕುಮಾರ್ , ಸಂಗೀತ ನಿರ್ವಹಣೆ ಆರ್.ಚಂದ್ರಮ್ಮ, ಬಸವರಾಜ ತಮ್ಮಣ್ಣ ಪೂಜಾರಿ, ಪ್ರಶಾಂತ್, ಬೆಂಕಿನ ವಿನ್ಯಾಸ ರಾಜು ಬಿ ಲಕ್ಕಮುತ್ತೇನಹಳ್ಳಿ ಮತ್ತು ರಂಗ ನಿರ್ವಹಣೆಯನ್ನು ದಿನೇಶ್ ಯರನಾಳ ಮಾಡಿದ್ದರು. ಜಂಗಮದೆಡೆಗೆ ನಾಟಕವು ಪ್ರೇಕ್ಷರ ಮೆಚ್ಚುಗೆಗೆ ಪಾತ್ರವಾಗಿತ್ತು.

ನಾಟಕೋತ್ಸವ ಉದ್ಘಾಟನಾ ಸಮಾರಂಭದಲ್ಲಿ ಕೇಂದ್ರ ರೇಷ್ಮೆ ಮಂಡಳಿ ಮಾಜಿ ಅಧ್ಯಕ್ಷ ಕೆ.ಎಂ.ಹನುಮಂತರಾಯಪ್ಪ, ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತು ಸಂಸ್ಥಾಪಕ ಅಧ್ಯಕ್ಷ ಹುಲಿಕಲ್ ನಟರಾಜ್, ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಬಿ.ಎಚ್.ಕೆಂಪಣ್ಣ, ಬೆಂಗಳೂರು ಗ್ರಾಮಾಂತರ ಜಿಲ್ಲಾ ಕಲಾವಿದರ ಸಂಘದ ಕಾರ್ಯಾಧ್ಯಕ್ಷ ಕೆ.ಎಂ.ಕೃಷ್ಣಮೂರ್ತಿ, ಅಧ್ಯಕ್ಷ ರಬ್ಬನಹಳ್ಳಿ ಕೆಂಪಣ್ಣ, ತಾಲ್ಲೂಕು ಅಧ್ಯಕ್ಷ ರಾಮಾಂಜಿನಪ್ಪ, ಕಾರ್ಯದರ್ಶಿ ಚಂದ್ರಶೇಖರ್, ಲಯನ್ಸ್ ಕ್ಲಬ್ ಅಧ್ಯಕ್ಷ ನಂಜುಂಡೇಶ್ವರಸ್ವಾಮಿ, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಪಿ.ಗೋವಿಂದರಾಜು, ಗೌರವ ಕಾರ್ಯದರ್ಶಿ ಎ.ಜಯರಾಮ್ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260424-15-756592201

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.