ಶುಂಠಿ ನಿಮಗೆಷ್ಟು ಗೊತ್ತು?

7

ಶುಂಠಿ ನಿಮಗೆಷ್ಟು ಗೊತ್ತು?

Published:
Updated:

ಅಡುಗೆ ಮನೆಯಲ್ಲಿ ಶುಂಠಿಯ ಉಪಸ್ಥಿತಿ ಸರ್ವೇ ಸಾಮಾನ್ಯ. ಬಗೆಬಗೆಯ ಖಾದ್ಯಗಳಲ್ಲಿ ಅದರ ವಿಶಿಷ್ಟ ಸುವಾಸನೆಗೆ ಶುಂಠಿಯನ್ನು ಬಳಸಲಾಗುತ್ತದೆ.

ಶುಂಠಿ ಒಂದು ಬಿಳಿ-ಹಳದಿ ಹೂವುಗಳು ಬಿಡುವ ವಾರ್ಷಿಕ, ಲಾಳದಂತೆ ಕಾಣುವ, ಸುಮಾರು ೧ ಮೀಟರ್‌ ನಷ್ಟು ಬೆಳೆಯುವ ಸಸ್ಯ ಪ್ರಭೇದ. ಇದು ಅರಿಶಿಣ, ಏಲಕ್ಕಿ ಮುಂತಾದವುಗಳ ಕುಟುಂಬವಾದ ‘ಜಿಂಜಿಬರೇಸೀ’ಯ ಸದಸ್ಯ. ಇದರ ವೈಜ್ಞಾನಿಕ ನಾಮ Zingiber officinale. ಇದನ್ನು ಮುಖ್ಯವಾಗಿ ಸುವಾಸನೆಯುಳ್ಳ, ಮಾಂಸಯುಕ್ತ ಬೇರುಕಾಂಡವಾದ ಶುಂಠಿಯಾಗಿ ಬಳಸಲಾಗುತ್ತದೆ.

ಶುಂಠಿ ಒಂದು ಉಷ್ಣಕಾರಿ ಹಾಗೂ ಸುವಾಸನೆಯುಳ್ಳ ಮಸಾಲೆ ಪದಾರ್ಥ. ಎಷ್ಟೋ ದೇಶಗಳಲ್ಲಿ, ಬಗೆ ಬಗೆಯ ಖಾದ್ಯಗಳಲ್ಲಿ ಇದನ್ನು ಬಳಸಲಾಗುತ್ತದೆ. ಶುಂಠಿಯ ಉಪ್ಪಿನಕಾಯಿ, ಮುರಬ್ಬ, ಶುಂಠಿಯ ನುಣ್ಣಗೆ ಅರೆದಿರುವ ಹಿಟ್ಟು, ಒಣಗಿಸಿದ ಶುಂಠಿ ಪುಡಿ, ಹೀಗೆ ತರಾವರಿ ಪದಾರ್ಥಗಳನ್ನು ತಯಾರಿಸಲಾಗುತ್ತದೆ. ಇದಲ್ಲದೇ ಶುಂಠಿ ಚಹಾ ಕೂಡ ಪ್ರಸಿದ್ಧ.

ಇದು ಸುವಾಸನೆಯನ್ನು ಹೊರಸೂಸುವುದರಿಂದ, ಇದರಿಂದ ಮದ್ಯವನ್ನು ಸಹ ತಯಾರಿಸಲಾಗುತ್ತದೆ. ಸಾಂಪ್ರದಾಯಿಕ ಚಿಕಿತ್ಸಾ ವಿಧಾನಗಳಲ್ಲಿ, ಶುಂಠಿ ಗಣನೀಯ ಸ್ಥಾನವನ್ನು ಪಡೆದುಕೊಂಡಿದೆ. ಕೆಮ್ಮು ನಗಡಿಯಿಂದ ಹಿಡಿದು, ಕೆಲ ರೋಗ ರುಜಿನಗಳಿಗೆ ಶುಂಠಿ ರಸ ರಾಮಬಾಣದಂತೆ. ಕ್ಯಾನ್ಸರ್ ಕೋಶಗಳನ್ನು ನಾಶಮಾಡುವ ಶಕ್ತಿಯ ಕುರಿತು ಶುಂಠಿಯ ರಾಸಾಯನಗಳ ಮೇಲೆ ಎಷ್ಟೋ ವರ್ಷಗಳಿಂದ ಸಂಶೋಧನೆಗಳು ನಡೆಯುತ್ತಲೇ ಇವೆ.

ಹಸಿ ಶುಂಠಿಯಲ್ಲಿ ಸುಮಾರು 79% ನೀರಿನಾಂಶವಿರುತ್ತದೆ. ಮಿಕ್ಕ 21% ಅವಶ್ಯಕ ಪೌಷ್ಟಿಕಾಂಶಗಳಿರುತ್ತವೆ. ಇದರ ವಿಶಿಷ್ಟ ಸುವಾಸನೆಗೆ ಕಾರಣ ಇದರಲ್ಲಿರುವ ಶೇಕಡಾ 1-3% ಬಾಷ್ಪಶೀಲ ರಾಸಾಯನಗಳಾದ Zingerone, Shogaols, ಮತ್ತು Gingerols. ಶುಂಠಿಯ ವಾರ್ಷಿಕ ಒಟ್ಟು ಇಳುವರಿಯಲ್ಲಿ ಭಾರತ ಅಗ್ರಸ್ಥಾನವನ್ನು ಪಡೆದುಕೊಂಡಿದೆ.

ಮಳೆಗಾಲ ಪ್ರಾರಂಭವಾಗಿದೆ. ಹಾಗಿದ್ದಲ್ಲಿ, ಶುಂಠಿ ಕಾಫಿ, ಶುಂಠಿ ಚಹಾ ಕುಡಿಯಲು ತಯಾರಾಗಿರಿ, ಮತ್ತು ಒಳ್ಳೆಯ ಆರೋಗ್ಯ ನಿಮ್ಮದಾಗಿಸಿಕೊಳ್ಳಿ.

ಬರಹ ಇಷ್ಟವಾಯಿತೆ?

 • 7

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !