ಹೊನ್ನಾವರ: ಭಾರತೀಯ ಸಂಸ್ಕೃತಿಯ ಹಿನ್ನೆಲೆಯಲ್ಲಿ ಬಹುತ್ವದ ಪರಿಕಲ್ಪನೆ ಇದೆ. ಸಂಗೀತ, ನೃತ್ಯ ಸೇರಿದಂತೆ ವಿವಿಧ ಕಲಾಪ್ರಕಾರಗಳು ಇಲ್ಲಿ ಹಾಸುಹೊಕ್ಕಾಗಿದ್ದು ನಮ್ಮ ಸಂಸ್ಕೃತಿಯ ತಿರುಳಾದ ಸಾಮರಸ್ಯದ ಬದುಕಿನಲ್ಲಿ ನೆಮ್ಮದಿ ಇದೆ’ ಎಂದು ಅಳ್ಳಂಕಿ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಜಿ.ಎಸ್.ಹೆಗಡೆ ಹಡಿನಬಾಳ ಹೇಳಿದರು.

ಇಲ್ಲಿಯ ಎಸ್.ಡಿ.ಎಂ. ಪದವಿ ಕಾಲೇಜಿನ ವಿದ್ಯಾರ್ಥಿ ಒಕ್ಕೂಟದ ಸಹಯೋಗದಲ್ಲಿ ಶನಿವಾರ ನಡೆದ ಸಾಂಸ್ಕೃತಿಕ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಎಸ್.ಡಿ.ಎಂ.ಪದವಿ ಕಾಲೇಜಿನಲ್ಲಿ ಕಲಿತು ಕನ್ನಡ ವಿಷಯದಲ್ಲಿ ಬಿ.ಇಡಿ. ಅಥವಾ ಎಂ.ಎ.ಮಾಡುವ ಎರಡು ವಿದ್ಯಾರ್ಥಿಗಳಿಗೆ ಪ್ರತಿವರ್ಷ ಶಿಷ್ಯವೇತನ ನೀಡುತ್ತೇನೆ’ ಎಂದು ತಿಳಿಸಿದರು.

ಪ್ರಾಚಾರ್ಯ ಜಿ.ಎನ್.ಭಟ್ಟ ಮಾತನಾಡಿದರು. ಕ್ರೀಡಾ ವಿಭಾಗದ ಸಲಹೆಗಾರ ಆರ್.ಕೆ.ಮೇಸ್ತ, ವಿದ್ಯಾರ್ಥಿ ಕಾರ್ಯದರ್ಶಿಗಳಾದ ಕಾರ್ತಿಕ ಗೌಡ, ಎಚ್. ಮನೋಜ, ವೆಂಕಟೇಶ ಭಟ್ ಇದ್ದರು.

ಎಂ.ಜಿ.ಹೆಗಡೆ ಸ್ವಾಗತಿಸಿದರು. ಉಪನ್ಯಾಸಕರಾದ ಮಂಜುನಾಥ ಭಂಡಾರಿ, ಕೆ.ಆರ್.ಶ್ರೀಲತಾ ನಿರೂಪಿಸಿ ದರು. ಡಾ.ಸುರೇಶ ಎಸ್.ವಂದಿಸಿದರು.

ಸಾಂಸ್ಕೃತಿಕ ಹಾಗೂ ಕ್ರೀಡಾ ಸ್ಪರ್ಧೆಗಳ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260508-20-275102962

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.