ಹೊಸಪೇಟೆ: ಪ್ರಕೃತಿಯ ಚರಾಚರ ವಸ್ತುಗಳಲ್ಲಿ ಸಂಗೀತ ಅಡಗಿದೆ. ಸಂಗೀತದಲ್ಲಿ ಚಿಕಿತ್ಸಕ ಗುಣವೂ ಇದೆ. ಈ ಭಾಗದಲ್ಲಿ ಸಂಗೀತ ಕಲಾವಿದರಿಗೇನು ಕೊರತೆ ಇಲ್ಲ. ಆದರೆ ಅವರಿಗೆ ಪ್ರೋತ್ಸಾಹ ದೊರಕುತ್ತಿಲ್ಲ ಎಂದು ಹಂಪಿ ಕನ್ನಡ ವಿಶ್ವವಿದ್ಯಾಲಯದ ಸಾಹಿತ್ಯ ಅಧ್ಯಯನ ವಿಭಾಗದ ಪ್ರಾಧ್ಯಾಪಕ ಪ್ರೊ ಗೋವಿಂದ ಹೇಳಿದರು.

ಅವರು ಶನಿವಾರ ಇಲ್ಲಿ ಪಂಡಿತ್ ಪಂಚಾಕ್ಷರಿ ಗವಾಯಿಗಳವರ ಸಂಗೀತ ಪಾಠಶಾಲೆ ಹಾಗೂ ಪಂಡಿತ್ ಪುಟ್ಟರಾಜ ಗವಾಯಿಗಳವರ ಶಿಷ್ಯ ಮಂಡಳಿ ಮತ್ತು ಅಭಿಮಾನಿ ಬಳಗವು ಉಭಯ ಗವಾಯಿಗಳ ಜಯಂತ್ಯುತ್ಸವ, ಪ್ರಶಸ್ತಿ ಪ್ರದಾನ ಹಾಗೂ ಸಂಗೀತೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.

‘ಮುಂಬರುವ ದಿನಗಳಲ್ಲಾದರೂ ಸರ್ಕಾರಿ ಇಲ್ಲವೇ ವಸತಿ ಶಾಲೆಗಳಲ್ಲಿ ಸಂಗೀತ ಶಿಕ್ಷಕರನ್ನು ನೇಮಕಾತಿ ಮಾಡಿಕೊಂಡು ಅವರಿಗೆ ನೆರವಾಗಬೇಕು. ಪ್ರಾಥಮಿಕ ಶಿಕ್ಷಣದಿಂದಲೇ ಸಂಗೀತದ ಪಠ್ಯವನ್ನು ಐಚ್ಚಿಕವಾಗಿ ಕಲಿಸಲು ಸರ್ಕಾರವು ಅವಕಾಶ ಕಲ್ಪಿಸಿಕೊಡಬೇಕು.ಈ ಬೇಡಿಕೆ ಈಡೇರಿಕೆಗಾಗಿ ಪದವೀಧರ ಸಂಗೀತಗಾರರು ಸರ್ಕಾರದ ಗಮನಕ್ಕೆ ತರಲು ಒತ್ತಾಯಿಸಿ, ಜನಪ್ರತಿನಿಧಿಗಳಿಗೆ ಮನವಿ ಪತ್ರ ನೀಡಬೇಕು’ ಎಂದರು.

ಉಪ ತಹಶೀಲ್ದಾರ್ ಅಮರನಾಥ ಕಾರ್ಯಕ್ರಮ ಉದ್ಘಾಟಿಸಿದರು. ನಗರಸಭಾ ಸದಸ್ಯ ತಾರಿಹಳ್ಳಿ ಜಂಬುನಾಥ ಮಾತನಾಡಿದರು. ವೇದಿಕೆಯ ಮೇಲೆ ಜಿಲ್ಲಾ ಡಾ.ಬಿ.ಆರ್.ಅಂಬೇಡ್ಕರ್ ಸಂಘದ ಅಧ್ಯಕ್ಷ ಕೆ.ಪಿ.ಉಮಾಪತಿ, ಯುಟಿಐನ ಹಿರಿಯ ಉಪವಿಭಾಗಧಿಕಾರಿ ಬಿ. ಪಾಲಾಕ್ಷ, ರಾಜ್ಯ ಸರ್ಕಾರಿ ನೌಕರ ಸಂಘದ ನಿರ್ದೇಶಕ ಕಡ್ಲಿ ವೀರಭದ್ರೇಶ, ವಕೀಲರಾದ ಕರುಣಾನಿಧಿ, ಇಪ್ಪಿತೇರಿ ಮಾಗಣಿಯ ಕರಿಬಸವೇಶ್ವರ ಮಠದ ಮಾತೋಶ್ರೀ ಅನುರಾದೇಶ್ವರಿ ಅಮ್ಮ ಇದ್ದರು.

ಸಾನಿಧ್ಯ ವಹಿಸಿದ ಗದಗಿನ ವೀರೇಶ್ವರ ಪುಣ್ಯಾಶ್ರಮದ ಪೀಠಾಧಿಪತಿ ಕಲ್ಲಯ್ಯಜ್ಜ ಅವರಿಗೆ ಮೈತ್ರಿ ಉಮಾಪತಿ, ಶ್ರೇಯಸ್ ಅಮರಾನಾಥ, ದಿ.ದಾಕ್ಷಾಯಣಿ ಕುಟುಂಬದವರು ತುಲಾಭಾರ ನೆರವೇರಿಸಿದರು. ಪಂಡಿತ್ ಸದಾಶಿವ ಐಹೊಳೆ, ಪಂಡಿತ್ ಸದಾಶಿವ ಪಾಟೀಲ್, ನಾಗರಾಜ ಪತ್ತಾರ್, ಕೃಷ್ಣಪ್ಪ ಜೋಗಿ, ಯೋಗ ನರಸಿಂಹಚಾರ್ಯ, ಪರಮೇಶ್ವರಪ್ಪ, ಕು. ಆರೋಹಿ ಐಹೊಳೆ ಅವರುಗಳಿಗೆ ಶ್ರೀ ಗುರು ಪುಟ್ಟರಾಜ ಕಲಾ ಸಿರಿ ಪ್ರಶಸ್ತಿ ನೀಡಿ ಗೌರವಿಸಿ ಸನ್ಮಾನಿಸಲಾಯಿತು.

ಆರೋಹಿ ಐಹೊಳೆ ಅವರು ಕಥಕ್ಕಳಿ ನೃತ್ಯ ಪ್ರದರ್ಶಿಸಿದರು. ಬಳಿಕ ಆಕಾಶವಾಣಿ ನಿಲಯ ಕಲಾವಿದರಾದ ಪಂಡಿತ ಸದಾಶಿವ ಐಹೊಳೆ, ಸುಮ ಕಾಳಗಟ್ಟ, ಮಲ್ಲಿಕಾರ್ಜುನ್ ತುರುವನೂರ್, ವಿಜಯ ಕುಮಾರ ಬಡಿಗೇರ, ಮಲ್ಲಿಕಾರ್ಜುನ್ ಬಡಿಗೇರ್ ಸಂಶೋಧಕಿ ಅನುರಾಧ ಮುಂತಾದವರು ಪ್ರಸ್ತುತ ಪಡಿಸಿದ ಹಿಂದೂಸ್ಥಾನಿ ಗಾಯನವು ನೆರೆದವರ ಮನರಂಜಿಸುವಲ್ಲಿ ಯಶಸ್ವಿಯಾಯಿತು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260323-25-1545334656

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.