ಲಿಂಗಸುಗೂರು: ‘ರಂಗಭೂಮಿ ಕಲೆ ಉಳಿಸುವ ಹಿನ್ನಲೆಯಲ್ಲಿ ಆಟ ಕೂಟ ಮಕ್ಕಳ ರಂಗ ಶಿಬಿರ ನಡೆಸಲಾಗಿತ್ತು. ಶಿಬಿರದ ಮಕ್ಕಳಿಂದಲೇ ಮೇ27 ರಂದು ಸಂಜೆ 6ಗಂಟೆಗೆ ಪಟ್ಟಣದ ವೀರಶೈವ ವಿದ್ಯಾವರ್ಧಕ ಸಂಘದ ಬಸವ ಸಭಾಂಗಣದಲ್ಲಿ ಎರಡು ನಾಟಕ ಪ್ರದರ್ಶನ ಹಮ್ಮಿಕೊಳ್ಳಲಾಗಿದೆ’ ಎಂದು ವೀರಶೈವ ವಿದ್ಯಾವರ್ಧಕ ಸಂಘದ ಆಡಳಿತಾಧಿಕಾರಿ ಬಸವಂತರಾಯ ಕುರಿ ಹೇಳಿದರು.

ಪಟ್ಟಣದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಮಕ್ಕಳಲ್ಲಿ ರಂಗಭೂಮಿ ಕಲೆ ಹಾಗೂ ಸೃಜನಶೀಲತೆ ಬಗ್ಗೆ ಆಸಕ್ತಿ ಮೂಡಿಸುವ ಹಿನ್ನೆಲೆಯಲ್ಲಿ ನಟ, ನಿರ್ದೇಶಕ ಹಾಗೂ ಬೆಂಗಳೂರು ವಿವಿ ಕಲಾವಿಭಾಗದ ಉಪನ್ಯಾಸಕ ಪ್ರಭುರಾಜ ನೇತೃತ್ವದಲ್ಲಿ 30 ದಿನ ಪಟ್ಟಣದ ಅಮರೇಶ್ವರ ವಿದ್ಯಾವರ್ಧಕ ಸಂಘದಲ್ಲಿ ಆಟ ಕೂಟ ಮಕ್ಕಳ ರಂಗ ಶಿಬಿರ ಆಯೋಜಿಸಲಾಗಿತ್ತು’ ಎಂದು ತಿಳಿಸಿದರು.

‘ಶಿಬಿರದ ಸಮಾರೋಪದ ಸಮಾರಂಭದ ಪ್ರಯುಕ್ತ ರಂಗಭೂಮಿ ಹಿರಿಯ ನಿರ್ದೇಶಕ ಶಂಕರಯ್ಯ ಘಂಟಿ ನಿರ್ದೇಶನದ ಲಿಯೋ ಟಾಲಸ್ಟಾಯ್ ಅವರ ಕಥೆ ಆಧಾರಿತ ಕಿರುಗೆಜ್ಜೆ ಘಲ್ ಘಲ್ ಹಾಗೂ ವಿರೇಶ ಎಂ.ಪಿ ನಿರ್ದೇಶನದ ಮೂರ್ಖ ರಾಜ ನಾಟಕಗಳ ಪ್ರದರ್ಶನ ಮಕ್ಕಳಿಂದಲೇ ಪ್ರದರ್ಶನ ನಡೆಯಲಿದೆ. ಇದೇ ಸಭಾ ಭವನದಲ್ಲಿ ಮೇ28ರಂದು ಸಂಜೆ 6 ಗಂಟೆಗೆ 2026ರ ಅಂತರರಾಷ್ಟ್ರಿಯ ಚಲನಚಿತ್ರೋತ್ಸವದಲ್ಲಿ 2ನೇ ಅತ್ಯತ್ತಮ ಎರಡನೇ ಕನ್ನಡ ಸಿನಿಮಾ ಬಹುಮಾನ ಪಡೆದ ನಿರ್ದೇಶಕ ಶಂಕರಯ್ಯ ಘಂಟಿ ನಿರ್ಮಿಸಿದ ನಮ್ಮ ಸಾಲಿ ಚಲನಚಿತ್ರ ಪ್ರದರ್ಶನ ನಡೆಯಲಿದೆ. ಶಿಬಿರದ ಸಮಾರೋಪ ಸಮಾರಂಭವನ್ನು ನಾಟಕ ಅಕಾಡೆಮಿ ಅಧ್ಯಕ್ಷ ಕೆ.ವಿ.ನಾಗರಾಜಮೂರ್ತಿ ಉದ್ಘಾಟಿಸಿಲಿದ್ದಾರೆ’ ಎಂದರು.

ನಟ ನಿರ್ದೇಶಕ ಪ್ರಭುರಾಜ ಮಾತನಾಡಿ, ಕರ್ನಾಟಕ ನಾಟಕ ಅಕಾಡೆಮಿ ಬೆಂಗಳೂರು, ರಂಗಧ್ವನಿ, ಜನರಂಗ, ವಿಜಯಲಕ್ಷ್ಮೀ ಸ್ವಸಹಾಯ ಸಹಕಾರಿ ಸಂಘ ಹಾಗೂ ಅಮರೇಶ್ವರ ವಿದ್ಯಾವರ್ಧಕ ಸಂಘ ಸಹಯೋಗದಲ್ಲಿ ಆಟ ಕೂಟ ರಂಗ ಶಿಬಿರ ನಡೆಸಲಾಗಿದೆ. ರಂಗ ಶಿಬಿರ ಮಕ್ಕಳಿಗೆ ವ್ಯಾಪಾರದ ಅರಿವು ಮೂಡಿಸುವ ಹಿನ್ನಲೆಯಲ್ಲಿ ಅಮರೇಶ್ವರ ಶಾಲೆಯಲ್ಲಿ ಮೇ 24 ರಂದು ಸಂಜೆ 4 ಗಂಟೆಗೆ ಮಕ್ಕಳ ಸಂತೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಮಕ್ಕಳ ನಾಟಕ ಪ್ರದರ್ಶನ ಹಾಗೂ ಮಕ್ಕಳ ಸಂತೆ ಕಾರ್ಯಕ್ರಮಕ್ಕೆ ರಂಗಾಸಕ್ತರು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕು’ ಎಂದು ಕೋರಿದರು.

ನಿರ್ದೇಶಕ ಶಂಕ್ರಯ್ಯ ಘಂಟಿ, ವೀರಭದ್ರಪ್ಪ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260524-32-1885287910

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.