ಮಂಡ್ಯ: ಭಾಷೆ ಮತ್ತು ಸಂಸ್ಕೃತಿಯ ನಿಜವಾದ ಶಕ್ತಿ ಏನೆಂಬುದು ಬಹಳಷ್ಟು ಜನರಿಗೆ ಅರ್ಥವಾಗಿಲ್ಲ ಎಂದು ಚಲನಚಿತ್ರ ನಿರ್ದೇಶಕ ಟಿ.ಎಸ್.ನಾಗಾಭರಣ ವಿಷಾದಿಸಿದರು.

ನಗರದಲ್ಲಿ ರೋಟರಿ ಸಂಸ್ಥೆ ಭಾನುವಾರ ಆಯೋಜಿಸಿದ್ದ ಯೂನಿಟ್ ಫಾರ್ ಗುಡ್ ಚಾಲೆಂಜರ್ಸ್ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಮೊಬೈಲ್ ಸೆಲ್ಫಿ ಫೊಟೋಗೆ ಜೋತು ಬಿದ್ದಿದ್ದೇವೆ, ಮೊದಲು ಸ್ಟೇಟಸ್ಗೆ ಅಪ್ಲೋಡ್ ಮಾಡಲೇಬೇಕೆಂಬ ಹಠಕ್ಕೆ ಬಿದ್ದಿದ್ದೇವೆ, ಬಲಗೈಲಿ ಕೊಟ್ಟಿದ್ದು ಎಡಗೈಗೆ ಗೊತ್ತಾಗಬಾರದೆನ್ನುವ ಕಾಲ ಹೋಗಿ, ಕೊಟ್ಟಿದ್ದನ್ನು ಹೇಳುವ ಸ್ಥಿತಿಗೆ ಬಂದಿರುವುದು ಸೇವೆಯಾಗಿದೆ ಎಂದು ವಿಷಾದಿಸಿದರು.ನಾನು ರಂಗಭೂಮಿಯನ್ನು ಅಳವಡಿಸಿಕೊಳ್ಳಲು ಇಚ್ಚಿಸುತ್ತೇನೆ, ಭಾಷೆ, ಸಹೋದರತ್ವವನ್ನು ಗೌರವಿಸುವ ಹಾಗೂ ಸಂಸ್ಕೃತಿಯನ್ನು ಕಲಿಸುವುದೇ ರಂಗಭೂಮಿ ಎಂದು ಅಭಿಪ್ರಾಯ ಪಟ್ಟರು.

ನಟಿ ಪೂಜಾ ಗಾಂಧಿ ಮಾತನಾಡಿ, ಮನುಷ್ಯ ಬೆಳೆಯುತ್ತಾ ಹೋದಂತೆ ವಿಭಿನ್ನತೆಯಲ್ಲಿ ಏಕತೆಯನ್ನು ಸಾಧಿಸುವ ವಿಶ್ವ ಮಾನವನಾಗಿ ಬದಲಾಗಬೇಕೆಂಬುದನ್ನು ನಂಬುತ್ತೇನೆ, ರೋಟರಿ ಸಂಸ್ಥೆಯಲ್ಲಿ ಸೇರಿ ಸಾಮಾಜಿಕ ಸೇವೆಯಲ್ಲಿ ತೊಡಗುವುದು ಎಲ್ಲರಿಗೂ ಮುಖ್ಯವಾಗಬೇಕಿದೆ ಎಂದು ಸಲಹೆ ನೀಡಿದರು.

ರೋಟರಿ ಸಂಸ್ಥೆಯ ಎಲಿಜಬೆತ್ ಚೆರಿಯನ್, ಎಂ.ನಾಗರಾಜ್ಯಾದವ್, ಎನ್.ಹೊನ್ನೇಗೌಡ, ಎಸ್.ಪಿ.ಶ್ರೀನಿವಾಸ್, ದಿನೇಶ್ ಭಾಗವಹಿಸಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260601-40-901696183

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.