ಮೈಸೂರು: ‘ಕಲೆಯು ಜನಪರವಾಗಿದ್ದರೆ ಮಾತ್ರ ಜನಪ್ರಿಯತೆ ಪಡೆಯುತ್ತದೆ. ಜನಪ್ರಿಯತೆ ಪಡೆದ ಎಲ್ಲವನ್ನೂ ನಿರಾಕರಿಸುವ ಧೋರಣೆ ಬೇಡ’ ಎಂದು ಲೇಖಕ ಪ್ರೊ.ಬರಗೂರು ರಾಮಚಂದ್ರಪ್ಪ ಹೇಳಿದರು.

ಮಾನಸಗಂಗೋತ್ರಿಯ ಬಿಎಂಶ್ರೀ ಸಭಾಂಗಣದಲ್ಲಿ ದಂಡಿನ ರಾಜಪ್ಪ ಪ್ರತಿಷ್ಠಾನ ಮತ್ತು ಅಸ್ತಿತ್ವ ಸಾಂಸ್ಕೃತಿಕ ವೇದಿಕೆಯು ಮಂಗಳವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ ನಿರ್ದೇಶಕಿ ಪ್ರೊ.ಎನ್.ಕೆ.ಲೋಲಾಕ್ಷಿ ಅವರ ‘ದ್ಯಾವ್ರಗುಡ್ಡ’ ಕಾದಂಬರಿ ಬಿಡುಗಡೆ ಮಾಡಿ ಮಾತನಾಡಿದರು.

‘ಜನರ ಬದುಕಿನಿಂದಲೇ ವಸ್ತುವನ್ನು ಸ್ವೀಕರಿಸಿ, ಜನಪರ ನೆಲೆಯಿಂದ ನಿರೂಪಿಸಿ ಮತ್ತೆ ಜನರಿಗೆ ತಲುಪಿಸುವ ಕಲೆಯೇ ಜನಪ್ರಿಯ ಕಲೆಯೆಂದು ಜರ್ಮನಿಯ ನಾಟಕಕಾರ ಬರ್ಟೊಲ್ಟ್ ಬ್ರೆಕ್ಟ್ ಹೇಳುತ್ತಾನೆ. ದ್ಯಾವ್ರಗುಡ್ಡ ಕಾದಂಬರಿಯು ಜನಪ್ರಿಯ ಸ್ವರೂಪ ಹೊಂದಿದ್ದು, ಬ್ರೆಕ್ಟ್ನ ನಿರ್ವಚನವನ್ನು ಈ ಕೃತಿಗೆ ಅನ್ವಯಿಸಬಹುದು’ ಎಂದರು.

‘ಕೃತಿಯ ನಿರೂಪಣೆಯಲ್ಲಿ ನಾಟಕೀಯ ತಿರುವುಗಳು, ಸಂವಹನಶೀಲತೆ ಇದೆ. ಅಭಿರುಚಿ ಹೀನ ಕೃತಿ, ಸಿನಿಮಾಗಳ ಮಧ್ಯೆ ಈ ಕೃತಿಯು ಜನಪ್ರಿಯತೆ ಪಡೆಯುವ ಪ್ರಮಾಣಿಕೃತ ಗುಣ ಹೊಂದಿದೆ’ ಎಂದು ವಿಶ್ಲೇಷಿಸಿದರು.

‘ಶ್ರೇಷ್ಠತೆಯ ಸೊಕ್ಕು ಪ್ರತಿಭಾ ಭ್ರೂಣಹತ್ಯೆ ಮಾಡುತ್ತದೆ. ನಿರಂತರವಾಗಿ ಬರೆಯದಿದ್ದರೆ ಶ್ರೇಷ್ಠ ಸಾಹಿತ್ಯ ಹುಟ್ಟದು. ಶ್ರೇಷ್ಠತೆಯ ಶೋಧ ನಿರಂತರವಾಗಿ ಮುಂದುವರಿಯಬೇಕು. ಆದರೆ, ಎಲ್ಲ ಕೃತಿಗಳು ಶ್ರೇಷ್ಠ ಕೃತಿಯಾಗಬೇಕೆಂಬ ಹಠ ಬೇಡ. ಹೆಚ್ಚು ಕೃತಿ ಬರೆದವರು ಶ್ರೇಷ್ಠ ಕೃತಿ ಬರೆದಿಲ್ಲ. ಉತ್ತಮ ಕೃತಿ ಬರೆದವರು ಹೆಚ್ಚು ಕೃತಿ ಬರೆದಿಲ್ಲ’ ಎಂದರು.

‘ಜನಪ್ರಿಯತೆ ಪಡೆದ ಕೃತಿಗಳ ನಿರಾಕರಿಸುವ ಧೋರಣೆಯು ನಮ್ಮ ಸಾಹಿತ್ಯದ ನೆನಪಿನ ಕೊಂಡಿಗಳನ್ನು ಕಳಚಿತು. ಅ.ನ.ಕೃಷ್ಣರಾಯ, ತ.ರಾ.ಸು, ಬೀಚಿ, ಅನುಪಮಾ ನಿರಂಜನ, ತ್ರಿವೇಣಿ ಅವರ ಜನಪ್ರಿಯ ಕೃತಿಗಳು ಕನ್ನಡಿಗರಲ್ಲಿ ವಾಚನಾಭಿರುಚಿ ಬೆಳೆಸಿದವು. ಇವನ್ನು ಚರಿತ್ರೆಯಲ್ಲಿ ನಿರ್ಲಕ್ಷಿಸಬಾರದು’ ಎಂದರು.

ಸಂಪಾದನೆ ಮುಖ್ಯ: ‘ಉದ್ಯಮಕ್ಕೆ ಎಂದಿಗೂ ಸಂಪಾದನೆಯೇ ಮುಖ್ಯ; ಮಾಧ್ಯಮಕ್ಕೆ ಸಂವೇದನೆ ಮುಖ್ಯ. ಪತ್ರಿಕೆ, ಪುಸ್ತಕ, ಚಲನಚಿತ್ರ ಮಾಧ್ಯಮಗಳು ಉದ್ಯಮಗಳಾಗಿರುವ ಬಿಕ್ಕಟ್ಟಿನ ಸಂದರ್ಭದಲ್ಲಿದ್ದೇವೆ. ಈ ಅಭಿವ್ಯಕ್ತಿ ಬದಲಾಗಬೇಕಿದೆ’ ಎಂದು ಬರಗೂರು ಹೇಳಿದರು.

‘ಸಿನಿಮಾ, ಪತ್ರಿಕೆ, ಸುದ್ದಿ ಮಾಧ್ಯಮ, ಕೃತಿ ಜನಪ್ರಿಯವಾಗಿದ್ದರೆ ಅದರಲ್ಲಿ ಉದ್ಯಮದ ಲಾಭಕೋರತನವಿದೆ. ಸಂಪಾದನೆಯೇ ಮುಖ್ಯವಾಗಿ ಸಂವೇದನೆ ಯನ್ನು ನಾಶಗೊಳಿಸಬಾರದು. ಉದ್ಯಮ ಮತ್ತು ಮಾಧ್ಯಮ ಸಂವೇದನೆಯನ್ನು ಹೊಂದಿರಬೇಕು’ ಎಂದರು.

ಕೃತಿ ಕುರಿತು ಪ್ರೊ.ಎಂ.ಶೋಭಾ, ಪ್ರೊ.ಕವಿತಾ ರೈ ಮಾತನಾಡಿದರು. ಹೇಮ ಲತಾ, ಸಂಶೋಧಕರಾದ ಬಿ.ಮೂರ್ತಿ, ಉಮೇಶ್ ಪಾಲ್ಗೊಂಡಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260520-39-1041238885

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.