ಮೈಸೂರು: ‘ಪ್ರಭುತ್ವ, ಧರ್ಮ, ಸಮಾಜದ ಲೋಕ ಭಾಷೆಯೇ ದ್ವೇಷ, ಅಸಹಿಷ್ಣುತೆಯಿಂದ ಕೂಡಿರುವಾಗ, ತ್ರಿವೇಣಿ, ಕೆ.ಎಸ್.ನರಸಿಂಹಸ್ವಾಮಿ, ದೇವನೂರ ಮಹಾದೇವ ಅವರ ಪ್ರೀತಿಯ ಭಾಷೆಯನ್ನು ಕಲಿಸಬೇಕಿದೆ’ ಎಂದು ವಿಮರ್ಶಕಿ ಪ್ರೊ. ಎಂ.ಎಸ್.ಆಶಾದೇವಿ ಹೇಳಿದರು.

ಮಾನಸಗಂಗೋತ್ರಿಯ ಬಿಎಂಶ್ರೀ ಸಭಾಂಗಣದಲ್ಲಿ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯು ಬೆಂಗಳೂರಿನ ಅಜೀಂ ಪ್ರೇಮ್ಜಿ ವಿಶ್ವವಿದ್ಯಾಲಯದ ಸಹಯೋಗದಲ್ಲಿ ಮಂಗಳವಾರ ಆಯೋಜಿಸಿದ್ದ ‘ಸಾಹಿತ್ಯ ಸಹವಾಸ’ ಸರಣಿಯ ‘ತ್ರಿವೇಣಿ, ಕೆ.ಎಸ್.ನರಸಿಂಹಸ್ವಾಮಿ ಮತ್ತು ದೇವನೂರ ಮಹಾದೇವ– ಆಧುನಿಕ ಕನ್ನಡ ಸಾಹಿತ್ಯ ಸಂವೇದನೆ’ ವಿಚಾರ ಸಂಕಿರಣದಲ್ಲಿ ಆಶಯ ನುಡಿಗಳನ್ನಾಡಿದರು.

‘ಮೂವರ ಸಾಹಿತ್ಯವು ಬದುಕಿನ ಬೆಳ್ಳಿಗೆರೆಗಳನ್ನು ತೋರಿಸುತ್ತವೆ. ಅರಿವಿನ ಹಿಂಸೆಯು ದಲಿತರನ್ನು ಕಾಡಿದೆಯೆಂದ ದೇವನೂರ ಅವರ ಒಡಲಾಳ ಕೃತಿಯು ಸಮಾಜದ ನೈತಿಕತೆಯ ಸಂಕಥನವನ್ನೇ ಬದಲಾಯಿಸಿದೆ. ಅವರ ಆರ್ಎಸ್ಎಸ್ ಆಳಅಗಲ ಕೃತಿಯನ್ನು ಶಿಕ್ಷಣದ ಪಠ್ಯವಾಗಿಸಿ ಎಲ್ಲ ವಿದ್ಯಾರ್ಥಿಗಳಿಗೂ ಓದಿಸಬೇಕಿದೆ’ ಎಂದು ಅಭಿಪ್ರಾಯಪಟ್ಟರು.

‘ಮಧ್ಯಮ ವರ್ಗದ ಹೆಣ್ಣುಮಕ್ಕಳ ಲೋಕ, ಅವರ ಬಿಡುಗಡೆಯ ದಾರಿಗಳನ್ನು ತ್ರಿವೇಣಿ ಅವರು ಕಾದಂಬರಿಗಳಲ್ಲಿ ಶೋಧಕ್ಕೆ ಒಡ್ಡಿದರು. ಬಿಡುಗಡೆಯ ಹೆಸರಿನಲ್ಲಿ ಶಿಕ್ಷಣ, ಆಧುನಿಕತೆಯು ಹೆಣ್ಣನ್ನು ಮತ್ತೆ ಸಮಾಜದ ಚೌಕಟ್ಟಿನೊಳಗೆ ತೀವ್ರವಾಗಿ ಬಂಧಿಸುವ ಅಪಾಯವನ್ನು ತ್ರಿವೇಣಿ ಗುರುತಿಸಿದ್ದರು’ ಎಂದು ವಿಶ್ಲೇಷಿಸಿದರು.

‘ಕಾದಂಬರಿಗಳಲ್ಲಿ ನಾಯಕಿಯರಿಗೆ ಗಂಡಾಳಿಕೆಯ ಅಪಸ್ವರದ ಕಾರಣ ಸಂತೋಷವೇ ಸಿಗದು. ‘ಹಣ್ಣೆಲೆ ಚಿಗುರಿದಾಗ’, ‘ಸೋತು ಗೆದ್ದವಳು’, ‘ಶರಪಂಜರ’, ‘ಕೀಲುಗೊಂಬೆ’ ಕಾದಂಬರಿಗಳಲ್ಲಿ ಅದನ್ನು ಕಾಣಬಹುದು. ತ್ರಿವೇಣಿ ಅವರ ಒಟ್ಟೂ ಬರಹದ ಪ್ರಬಂಧ ಧ್ವನಿ ಹೆಣ್ಣುಮಕ್ಕಳ ಮೇಲಿನ ಗಂಡಾಳಿಕೆಯ ಬಂಧನ, ಕ್ರೌರ್ಯವನ್ನೇ ಹೇಳುತ್ತದೆ. ಸೋತು ಗೆದ್ದವಳು ಶೀರ್ಷಿಕೆಯಲ್ಲಿಯೇ ಘನವಾದ ವ್ಯಂಗ್ಯ ಕಾಣುತ್ತದೆ’ ಎಂದು ಹೇಳಿದರು.

‘ಕೆಎಸ್ನ ಅವರ ಉತ್ತರಾರ್ಧದ ಕಾವ್ಯ ಓದಬೇಕು. ಹೆಣ್ಣಿನ ಬಗೆಗಿನ ಅಂತಃಕರಣದ ವಿಸ್ತಾರವಾದ ನೋಟ ಅವರ ಕಾವ್ಯಗಳಲ್ಲಿ ದಕ್ಕುತ್ತದೆ. ನಡವಳಿಕೆ, ವ್ಯಕ್ತಿತ್ವ, ದಿಟ್ಟತನದ ಮೂಲಕವೇ ಅವರ ಕಾವ್ಯದಲ್ಲಿನ ಹೆಣ್ಣು ಪಾತ್ರಗಳು ಗಂಡಿಗೆ ಹೆಣ್ಣು ಏನು ಎಂಬುದನ್ನು ತಿಳಿಸುತ್ತವೆ. ಕಾಲವನ್ನು ವ್ಯಗ್ರತೆಯಿಂದ ನೋಡದೇ ಪ್ರೀತಿಯಿಂದ ಶೋಧಿಸಿದವರು ಕೆಎಸ್ನ. ಅದರೊಂದಿಗೆ ಜೀವ ಸಂವಾದವನ್ನು ಕಾಣಬಹುದು. ಅವರು ಜನಮಾನಸದ ಅಂತರಂಗದ ಕವಿ’ ಎಂದು ವಿಶ್ಲೇಷಿಸಿದರು.

ನಂತರ ನಡೆದ ಗೋಷ್ಠಿಗಳಲ್ಲಿ ಪ್ರೊ.ಎಚ್.ಗೀತಾ, ಮೀರಾ ಶಂಕರ್, ಪ್ರೊ.ಎಂ.ಸಿ.ಪ್ರಕಾಶ್, ಮೇಖಲಾ ವೆಂಕಟೇಶ್, ಪ್ರೊ.ಬಿ.ಎಂ.ಪುಟ್ಟಯ್ಯ, ಬಸವರಾಜ ದೇವನೂರು ವಿಷಯ ಮಂಡಿಸಿದರು. ಜನಮನ ಸಾಂಸ್ಕೃತಿಕ ಸಂಘಟನೆಯ ಕಲಾವಿದರು ರಂಗಕರ್ಮಿ ಎಚ್.ಜನಾರ್ಧನ್ ನಿರ್ದೇಶನದ ದೇವನೂರು ಮಹಾದೇವ ಕಥೆಗಳ ಆಧರಿತ ‘ಸಂಬಂಜ ಅನ್ನೋದು ದೊಡ್ಡದು ಕನ’ ನಾಟಕವನ್ನು ಪ್ರದರ್ಶಿಸಿದರು.

ಸಂಸ್ಥೆಯ ನಿರ್ದೇಶಕಿ ಪ್ರೊ.ಎನ್.ಕೆ.ಲೋಲಾಕ್ಷಿ, ಅಜೀಂ ಪ್ರೇಮ್ಜಿ ಪ್ರತಿಷ್ಠಾನದ ಮುಖ್ಯ ಸಂವಹನಾಧಿಕಾರಿ ಸುಧೀಶ್ ವೆಂಕಟೇಶ್, ಸಿ.ಎಸ್.ಮಹೇಶ್ ಕುಮಾರ್ ಪಾಲ್ಗೊಂಡಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260429-39-461669946

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.