ಮೈಸೂರು: ‘ಪೌರಾಣಿಕವು ರಂಗಭೂಮಿಯ ಬೇರಾಗಿದ್ದು, ಅದನ್ನು ಉಳಿಸಿಕೊಳ್ಳಬೇಕು. ರಂಗೋತ್ಸವಗಳಲ್ಲಿ ಒಂದಾದರೂ ನಾಟಕ ಪ್ರದರ್ಶನ ಆಗಬೇಕು’ ಎಂದು ರಂಗ ಸಂಗೀತ ನಿರ್ದೇಶಕ ವಿದ್ವಾನ್ ವೈ.ಎಂ.ಪುಟ್ಟಣ್ಣಯ್ಯ ಒತ್ತಾಯಿಸಿದರು.

ನಗರದ ಕಿರು ರಂಗಮಂದಿರದಲ್ಲಿ ಮಂಗಳವಾರ ಮುಕ್ತಾಯಗೊಂಡ ‘ಶ್ರೀ ರಾಜೇಶ್ವರಿ ವಸ್ತ್ರಾಲಂಕಾರ ರಂಗತಂಡ’ವು ಆಯೋಜಿಸಿದ್ದ ಮೂರು ದಿನಗಳ ಪೌರಾಣಿಕ ರಂಗ ಸಂಭ್ರಮ’ದ ಸಮಾರೋಪದಲ್ಲಿ‘ರಂಗ ಗೌರವ’ ಸ್ವೀಕರಿಸಿ ಮಾತನಾಡಿದರು.

‘ರಂಗಾಯಣದಲ್ಲಿ ಮೂರು ದಶಕ ಕೆಲಸ ಮಾಡಿರುವೆ. ಮೊದಲು ಪೌರಾಣಿಕ ಮಾದರಿ ರಂಗ ಪ್ರಯೋಗಗಳು ನಡೆಯುತ್ತಿದ್ದವು. ಈಗ ಅಲ್ಲಿ ಇಲ್ಲವೇ ಇಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

‘ವೃತ್ತಿ ರಂಗಭೂಮಿಯ ವಿಕಾಸವು ಆಗಿದ್ದೇ ಪೌರಾಣಿಕದಿಂದ. ಈ ಪ್ರಕಾರವನ್ನು ದಯಮಾಡಿ ಉಳಿಸಿದರೆ ರಂಗಭೂಮಿಯ ಕಲಾ ಇತಿಹಾಸ, ಸಂಸ್ಕೃತಿ ಹಾಗೂ ಸಂಗೀತವನ್ನು ಮುಂದಿನ ಪೀಳಿಗೆಗೆ ನೀಡಿದಂತಾಗುತ್ತದೆ. ಈ ಬಗ್ಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಹೆಚ್ಚು ಆಸಕ್ತಿವಹಿಸಬೇಕು’ ಎಂದರು.

‘ಮೊದಲೆಲ್ಲ 7 ಗಂಟೆ ನಾಟಕ ಪ್ರಯೋಗಗಳು ಆಗುತ್ತಿದ್ದವು. ಕಾಳಿದಾಸನ ‘ವಿಕ್ರಮೋರ್ವಶೀಯಂ’ ನಾಟಕವನ್ನು 2 ಗಂಟೆಗೆ ಸೀಮಿತಗೊಳಿಸಿ ಪ್ರಯೋಗ ಮಾಡಿದ್ದರು. ಸಮಯಾಭಾವ ಇರುವುದರಿಂದ ಇಂಥ ಪ್ರಯೋಗಗಳು ಪೌರಾಣಿಕ ಪರಂಪರೆಯನ್ನು ಉಳಿಸಲಿವೆ’ ಎಂದು ಅಭಿಪ್ರಾಯಪಟ್ಟರು.

ಸಮಾರೋಪ ಭಾಷಣ ಮಾಡಿದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಂಟಿ ನಿರ್ದೇಶಕ ವಿ.ಎನ್.ಮಲ್ಲಿಕಾರ್ಜುನ ಸ್ವಾಮಿ, ‘ರಂಗಾಯಣದಲ್ಲಿ ಪೌರಾಣಿಕ ರಂಗಪ್ರಯೋಗಗಳನ್ನು ನಡೆಸಲು ಶೀಘ್ರ ಕ್ರಮವಹಿಸಲಾಗುವುದು’ ಎಂದು ಭರವಸೆ ನೀಡಿದರು.

₹ 20 ಸಾವಿರ ನೆರವು: ‘ರಂಗ ಸಂಗೀತ ನಿರ್ದೇಶಕ ದಿವಂಗತ ಶ್ರೀನಿವಾಸ್ ಭಟ್ (ಚೀನಿ) ಅವರ ಪತ್ನಿ ಚಿಕಿತ್ಸೆಗೆ ರಂಗ ತಂಡದಿಂದ ₹ 20 ಸಾವಿರ ನೀಡಲಾಗುವುದು. ರಂಗ ಸಂಗೀತದ ಮೇರು ಪ್ರತಿಭೆಯ ಕುಟುಂಬಕ್ಕೆ ಸಹಾಯಹಸ್ತವನ್ನು ಚಾಚಬೇಕು. ನೆರವನ್ನು ನೀಡಬೇಕು’ ಎಂದು ‘ಶ್ರೀ ರಾಜೇಶ್ವರಿ ವಸ್ತ್ರಾಲಂಕಾರ ರಂಗತಂಡ’ದ ಬಿ.ಎಂ.ರಾಮಚಂದ್ರ ಕೋರಿದರು.

ರಂಗಕರ್ಮಿ ಮೈಮ್ ರಮೇಶ್ ಅವರಿಗೂ ‘ರಂಗ ಗೌರವ’ ನೀಡಲಾಯಿತು. ಎಚ್.ಬಿ.ಯಶೋಧಾ, ದಿನೇಶ್ ಚಮ್ಮಾಳಿಗೆ, ವಿಕಾಸ್ ಚಂದ್ರ ಪಾಲ್ಗೊಂಡಿದ್ದರು. ನಂತರ ಟಿ.ನಾಗರಾಜ ಹಿರೇಕುಂಬಳಗುಂಟೆ ನಿರ್ದೇಶನದ ‘ರಕ್ತರಾತ್ರಿ’ ನಾಟಕ ಪ್ರದರ್ಶನಗೊಂಡಿತು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260401-39-1083824009

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.