ಮೈಸೂರು: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಬಿಡಾರಂ ಕೃಷ್ಣಪ್ಪನವರ ಪ್ರಸನ್ನ ಸೀತಾ ರಾಮಮಂದಿ ರದ ಸಹಯೋಗದಲ್ಲಿ 28ರಂದು ‘ಸಂಗೀತ ಕಳಾನಿಧಿ ಮೈಸೂರು ವಾಸುದೇವಾಚಾರ್ಯರ ಜನ್ಮದಿನಾಚರಣೆ ಮಹೋತ್ಸವ’ವನ್ನು ಆಯೋಜಿಸಲಾಗಿದೆ ಎಂದು ಶಾಸಕ ಟಿ.ಎಸ್. ಶ್ರೀವತ್ಸ ತಿಳಿಸಿದರು.

ನಗರದ ನಾರಾಯಣಶಾಸ್ತ್ರಿ ರಸ್ತೆಯಲ್ಲಿರುವ ಬಿಡಾರಂ ಕೃಷ್ಣಪ್ಪನವರ ರಾಮಮಂದಿರದಲ್ಲಿ ಅಂದು ಬೆಳಿಗ್ಗೆ 10.30ಕ್ಕೆ ನಡೆಯಲಿರುವ ಕಾರ್ಯಕ್ರಮವನ್ನು ತಾವು ಉದ್ಘಾಟಿಸಲಿರುವುದಾಗಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

‘ಮೈಸೂರು ವಾಸುದೇವಾಚಾರ್ಯರು ನಾಡಿನ ಶ್ರೇಷ್ಠ ಸಂಗೀತಗಾರರಾಗಿದ್ದರು. ಈ ಹಿನ್ನೆಲೆಯಲ್ಲಿ ಸರ್ಕಾರದ ಸಹಯೋಗದೊಂದಿಗೆ ಅವರ ಸ್ಮರಣೆ ಈ ರೀತಿ ಆರಂಭವಾಗುತ್ತಿದೆ. ಕಾರ್ಯಕ್ರಮದಲ್ಲಿ ಅವರ ಕೃತಿಗಳ ವಿಶ್ಲೇಷಣೆ ನಡೆಯಲಿದೆ’ ಎಂದು ಶಾಸಕರು ವಿವರಿಸಿದರು.

ಬೆಳಿಗ್ಗೆ 11ಕ್ಕೆ ವಿದುಷಿ ಟಿ.ಎಸ್. ಸತ್ಯವತಿ ಮತ್ತು ವೃಂದದವರಿಂದ ‘ವಾಸುದೇವ ವಾಗ್ಗೇಯ ವೈಭವ’ ಕಾರ್ಯಕ್ರಮ ಜರುಗಲಿದೆ. ಅರ್ಚನಾ ಭೋಜ್, ಶಿಲ್ಪಾ ಶಶಿಧರ್, ಅಂಜನಾ ಪಿ. ರಾವ್ ಮತ್ತು ಲಾವಣ್ಯ ಕೃಷ್ಣಮೂರ್ತಿ ಗಾಯನ ನಡೆಸಿಕೊಡಲಿದ್ದಾರೆ. ಪಿಟೀಲಿನಲ್ಲಿ ಅದಿತಿ ಕೃಷ್ಣಪ್ರಕಾಶ್ ಹಾಗೂ ಮೃದಂಗದಲ್ಲಿ ಪ್ರೊ. ಜಿ.ಎಸ್. ರಾಮಾನುಜಂ ಸಹಕರಿಸಲಿದ್ದಾರೆ ಎಂದರು.

ಸಂಜೆ ನಾದಬ್ರಹ್ಮ ಸಂಗೀತ ಸಭಾದಲ್ಲಿ ಸುಕನ್ಯಾ ಪ್ರಭಾಕರ್ ಅವರಿಂದ ಮೈಸೂರು ವಾಸುದೇವಾಚಾರ್ಯರ ಕೃತಿಗಳ ಗಾಯನ ಕಾರ್ಯಕ್ರಮ ಇರಲಿದೆ ಎಂದರು.

ಶ್ರೀನಿವಾಸಮೂರ್ತಿ, ಯೋಗಾನಂದನ್ ಹಾಗೂ ರವಿಶಂಕರ್ ಉಪಸ್ಥಿತರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260527-37-2141503119

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.