ಅಂಗಡಿಗೆ ಹೋಗುವ ಗ್ರಾಹಕರು ಸಾಮಾನ್ಯವಾಗಿ ನಾಟಿ ಮೊಟ್ಟೆ ಖರೀದಿ ಮಾಡಬೇಕಾ ಅಥವಾ ಫಾರಂ ಮೊಟ್ಟೆ ತೆಗೆದುಕೊಳ್ಳಬೇಕಾ ಎಂದು ಗೊಂದಲದಲ್ಲಿ ಇರುತ್ತಾರೆ. ಕೆಲವರು ಮೊಟ್ಟೆ ಎಂದರೆ ಆರೋಗ್ಯಕರ ಅಥವಾ ರುಚಿಕರವಾದದ್ದು ಎಂದು ಭಾವಿಸುತ್ತಾರೆ. ಈ ಲೇಖನವು ನಿಮ್ಮ ಗೊಂದಲವನ್ನು ನಿವಾರಿಸಲು ಸಹಾಯ ಮಾಡುತ್ತದೆ. ಮೊಟ್ಟೆಯು ತಿಳಿ ಕಂದು ಬಣ್ಣದಲ್ಲಿ ಏಕೆ ಇರುತ್ತದೆ? ನಾಟಿ ಮತ್ತು ಫಾರಂ ಮೊಟ್ಟೆಗಳ ಪೋಷಕಾಂಶಗಳ ಹೋಲಿಕೆ ಮತ್ತು ಅವುಗಳ ರುಚಿ, ಅಡುಗೆಯಲ್ಲಿ ಅವು ಹೇಗೆ ವ್ಯತ್ಯಾಸವನ್ನು ಉಂಟು ಮಾಡುತ್ತವೆ ಎಂಬುದನ್ನು ಇಲ್ಲಿ ತಿಳಿಯಬಹುದು.

ಮೊಟ್ಟೆಯ ಬಣ್ಣವು ಅದರ ಪೋಷಕಾಂಶ ಅಥವಾ ಆರೋಗ್ಯ ಲಾಭಗಳನ್ನು ನಿರ್ಧರಿಸುತ್ತದೆ ಎಂದು ಹಲವರು ನಂಬುತ್ತಾರೆ. ಆದರೆ ಇದು ತಪ್ಪು. ಮೊಟ್ಟೆಯ ಬಣ್ಣವು ಕೋಳಿಯ ಜಾತಿ ಮತ್ತು ಜನ್ಯಗುಣಗಳನ್ನು ಆಧರಿಸಿರುತ್ತದೆ. ಕೋಳಿಯು ತಿನ್ನುವ ಆಹಾರ ಅಥವಾ ಪರಿಸರವು ಬಣ್ಣದ ಛಾಯೆಯನ್ನು ಬದಲಾಯಿಸಬಹುದು. ಆದರೆ ಮೂಲ ಬಣ್ಣವನ್ನು ಬದಲಾಯಿಸಲು ಸಾಧ್ಯವಿಲ್ಲ. ಮುಕ್ತವಾಗಿ ಓಡಾಡಿಕೊಂಡಿರುವ ಕೋಳಿಗಳ ಮೊಟ್ಟೆಗಳಲ್ಲಿ ವಿಟಮಿನ್ ಡಿ ಅಂಶ ಸ್ವಲ್ಪ ಹೆಚ್ಚು ಇರಬಹುದು. ಒಮೆಗಾ– 3 ಅಂಶಗಳಿರುವ ಆಹಾರ ತಿನ್ನುವ ಕೋಳಿಗಳು ಹೆಚ್ಚಾಗಿ ಪೋಷಕಾಂಶಯುಕ್ತ ಮೊಟ್ಟೆಗಳನ್ನು ಇಡುತ್ತವೆ.

ಕೋಳಿ ಮೊಟ್ಟೆ ನೋಡಲು ಸಣ್ಣದಾಗಿದ್ದರೂ ಅದರಲ್ಲಿ ಪೌಷ್ಟಿಕಾಂಶಗಳಿಗೆ ಮಾತ್ರ ಯಾವುದೇ ಕೊರತೆ ಇರುವುದಿಲ್ಲ. ನಾಟಿ ಮತ್ತು ಫಾರಂ ಮೊಟ್ಟೆ ಎರಡೂ ಸಮಾನವಾಗಿ ಪೋಷಕಾಂಶಗಳಿಂದ ತುಂಬಿರುತ್ತವೆ. ಮೊಟ್ಟೆಯಲ್ಲಿ ಉತ್ತಮ ಗುಣಮಟ್ಟದ ಪ್ರೋಟೀನ್, ಒಮೇಗಾ-3 ಕೊಬ್ಬು ಆಮ್ಲಗಳು (ಕೋಳಿಯ ಆಹಾರಕ್ಕೆ ಅನುಗುಣವಾಗಿ ಬದಲಾಗುತ್ತವೆ), ವಿಟಮಿನ್ಗಳು: ಬಿ2, ಬಿ12, ಎ, ಡಿ, ಇ, ಕಬ್ಬಿಣ, ಫಾಸ್ಫರಸ್, ಸೆಲೆನಿಯಂ ಇವುಗಳ ಜೊತೆಗೆ ಕೋಲಿನ್, ಜೀಕ್ಸಾಂಥಿನ್ ಇರುತ್ತವೆ. ಮೊಟ್ಟೆಯ ಹಳದಿ ಭಾಗ (ಯೋಕ್) ಮೆದುಳು ಮತ್ತು ಕಣ್ಣುಗಳ ಆರೋಗ್ಯಕ್ಕೆ ಉತ್ತಮವಾದರೆ, ಫಾರಂ ಭಾಗ ಶುದ್ಧ ಪ್ರೋಟೀನ್ ಆಗಿದ್ದು, ಸ್ನಾಯುಗಳ ಬೆಳವಣಿಗೆಗೆ ಸಹಾಯ ಮಾಡುತ್ತದೆ. ಮೊಟ್ಟೆಯ ಸೇವನೆಯೂ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಮೆದುಳಿನ ಬೆಳವಣಿಗೆ ಮತ್ತು ಸ್ಮರಣಶಕ್ತಿಗೆ ಸಹಕಾರಿಯಾಗುತ್ತದೆ. ಕಣ್ಣುಗಳ ಆರೋಗ್ಯವನ್ನು ಉತ್ತಮಗೊಳಿಸುತ್ತದೆ. ಹೆಚ್ಚು ಹೊತ್ತು ಹೊಟ್ಟೆ ತುಂಬಿದಂತೆ ಅನುಭವವಾಗುತ್ತದೆ. ಹಾಗಾಗಿ, ನಾಟಿ ಮೊಟ್ಟೆ ಮತ್ತು ಫಾರಂ ಮೊಟ್ಟೆ ಎರಡೂ ಸಮಾನ ಆರೋಗ್ಯ ಲಾಭಗಳನ್ನು ನೀಡುತ್ತವೆ.

ಬಣ್ಣವು ರುಚಿ ಮೇಲೆ ಪರಿಣಾಮ ಬೀರುವುದೇ?: ಕೆಲವರು ನಾಟಿ ಮೊಟ್ಟೆಗಳು ಹೆಚ್ಚು ರುಚಿಯಾಗಿವೆ ಎಂದು ಭಾವಿಸುತ್ತಾರೆ. ಆದರೆ ಸಾಮಾನ್ಯವಾಗಿ ಎರಡೂ ಒಂದೇ ರೀತಿ ರುಚಿ ಇರುತ್ತವೆ. ಮೊಟ್ಟೆಯ ಗುಣಮಟ್ಟ ಅಡುಗೆಯ ವಿಧಾನದಿಂದ ಬದಲಾಗುತ್ತದೆ. ಮೊಟ್ಟೆಗಳು ಆರೋಗ್ಯಕರವಾದರೂ, ಕೆಲವು ವಿಷಯಗಳನ್ನು ಗಮನಿಸಬೇಕು.

• ಮೊಟ್ಟೆ ಅಲರ್ಜಿ ಇರುವವರು ತಿನ್ನಬಾರದು • ಹೆಚ್ಚು ಹಳದಿ ಭಾಗ ತಿನ್ನುವುದು ಕೆಲವರಿಗೆ ಕೊಲೆಸ್ಟ್ರಾಲ್ ಹೆಚ್ಚಿಸಬಹುದು • ಕಚ್ಚಾ ಮೊಟ್ಟೆಗಳಲ್ಲಿ ಸ್ಯಾಲ್ಮೊನೆಲ್ಲಾ ಸೋಂಕಿನ ಅಪಾಯ ಇರುತ್ತದೆ. • ಹೆಚ್ಚು ಸ್ಯಾಚುರೇಟೆಡ್ ಕೊಬ್ಬು ಇರುವ ಆಹಾರ ತೆಗೆದುಕೊಳ್ಳುವವರು ಮೊಟ್ಟೆ ಸೇವನೆಯ ಪ್ರಮಾಣವನ್ನು ನಿಯಂತ್ರಿಸಬೇಕು (ಸಾಮಾನ್ಯವಾಗಿ ದಿನಕ್ಕೆ 1–2 ಮೊಟ್ಟೆಗಳು ಆರೋಗ್ಯಕರ ವಯಸ್ಕರಿಗೆ ಸೂಕ್ತ). ಆರೋಗ್ಯಕರ ಜೀವನಶೈಲಿಗೆ ಮೊಟ್ಟೆ ಸೇವನೆ ಉತ್ತಮ. ನಾಟಿ ಮೊಟ್ಟೆ ಲಭ್ಯವಿದ್ದರೆ ಅದನ್ನು ಆಯ್ಕೆ ಮಾಡಬಹುದು, ಇಲ್ಲದಿದ್ದರೆ ಫಾರಂ ಮೊಟ್ಟೆಯನ್ನೇ ಆಯ್ದುಕೊಳ್ಳಬಹುದು.

ಮೊಟ್ಟೆಗಳನ್ನು ಖರೀದಿಸುವಾಗ ಮುಖ್ಯವಾಗಿ ಗಮನಿಸಬೇಕಾದದ್ದು, ಗುಣಮಟ್ಟದ ತಾಜಾತನ. ಯಾವ ಮೊಟ್ಟೆಯಾದರೂ ತಾಜಾ ಮತ್ತು ಸ್ವಚ್ಛವಾಗಿದ್ದರೆ ಅದು ಆರೋಗ್ಯಕ್ಕೆ ಒಳ್ಳೆಯದು. ಒಟ್ಟಿನಲ್ಲಿ, ಆರೋಗ್ಯಕರ ಜೀವನಕ್ಕಾಗಿ ಎರಡೂ ಬಗೆಯ ಮೊಟ್ಟೆಗಳು ಉಪಯುಕ್ತವಾಗಿವೆ.

ಲೇಖಕಿ: ಸಹಾಯಕ ಪ್ರಾಧ್ಯಾಪಕಿ. ಕಾಯಚಿಕಿತ್ಸಾ ವಿಭಾಗ, ಎಸ್ಡಿಎಂ ಆಯುರ್ವೇದ ಕಾಲೇಜು ಮತ್ತು ಆಸ್ಪತ್ರೆ, ಉಡುಪಿ

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260425-4-957096251

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.