ನಾಪೋಕ್ಲು: ಸಂಪಾಜೆಯಲ್ಲಿ ನಡೆಯುವ ಇತಿಹಾಸ ಪ್ರಸಿದ್ಧ ಕಲ್ಲುಗುಂಡಿ ಮಹಾವಿಷ್ಣುಮೂರ್ತಿ ದೈವದ ಒತ್ತೆಕೋಲ ಹಾಗೂ ಪಂಜುರ್ಲಿ ಕಲ್ಲುರ್ಟಿ ಹಾಗೂ ಗುಳಿಗ ದೈವಗಳಿಗೆ ಸಮ್ಮಾನ ಕಾರ್ಯಕ್ರಮವು ವಿಜೃಂಭಣೆಯಿಂದ ನಡೆಯಿತು.

ಕೊನೆ ಕಡಿಯುವುದು, ದೈವಸ್ಥಾನದಲ್ಲಿ ಗಣ ಹೋಮ, ಮಹಾವಿಷ್ಣುಮೂರ್ತಿ ದೈವಸ್ಥಾನದಿಂದ ಭಂಡಾರ ಹೊರಡುವುದು, ಮೇಲೇರಿಗೆ ಅಗ್ನಿಸ್ಪರ್ಶ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಕೋಲ ಆರಂಭಗೊಂಡಿತು.

ಅರಂತೋಡುಸ್ವರಲಯ ಸಿಂಗಾರಿ ಮೇಳ ತಂಡದಿಂದ ಚಂಡೆ ವಾದ್ಯ ನಡೆಯಿತು. ರಾತ್ರಿ ದೈವದ ಕುಲ್ಪಾಟ ನಡೆಯಿತು. ಭಾನುವಾರ ಸಹಸ್ತ್ರಾರು ಭಕ್ತರ ಸಮ್ಮುಖದಲ್ಲಿ ಮಹಾವಿಷ್ಣುಮೂರ್ತಿ ದೈವದ ಅಗ್ನಿ ಪ್ರವೇಶ ನಡೆಯಿತು. ಬಳಿಕ ಪ್ರಸಾದ ವಿತರಣೆ ನೆರವೇರಿತು.

ಪೂರ್ವಾಹ್ನ ಮಾರಿಕಳ ಪ್ರವೇಶ, ಮಾರಿಕಳದಿಂದ ಬಂದ ನಂತರ ಹರಕೆಯ ಸುರುಗಿ ಒಪ್ಪಿಸುವುದು, ಪ್ರಸಾದ ವಿತರಣೆ ನಡೆಯಿತು.

ದೈವಸ್ಥಾನದ ಗೌರವಾಧ್ಯಕ್ಷ ರಾಜರಾಮ ಕೀಲಾರು, ಅದೀಪ ಕೃಷ್ಣ, ಮಹಾವಿಷ್ಣು ದೈವಸ್ಥಾನದ ಅಧ್ಯಕ್ಷ ಕೆ.ಆರ್.ಜಗದೀಶ್ ರೈ, ಮುಕ್ತೇಸರ ಕರುಣಾಕರ ಕೆ.ಎಸ್, ಕಾರ್ಯದರ್ಶಿ ಕೆ.ವಿ.ಮಂಜುನಾಥ್, ಕೋಶಾಧಿಕಾರಿ ಬಿಆರ್ ಪದ್ಮಯ್ಯ, ಗೌರವ ಸಲಹೆಗಾರರಾದ ಶ್ರೀಧರ ಮಾದೆಪಾಲು, ಉದಯ ಶಂಕರ ಕುಕ್ಕೆಟಿ, ಜಯಾನಂದ ಸಂಪಾದಿ, ತೀಯ ಸಮಾಜದ ಅಧ್ಯಕ್ಷ ಶ್ರೀಧರ ಕಡೆ ಪಾಲ, ವಿ.ವಿ.ಬಾಲನ್, ದೈವಸ್ಥಾನದ ಪ್ರಧಾನ ಪೂಜಾರಿ ನಾರಾಯಣ ಮಣಿಯಾಣಿ, ಉಪ ಪೂಜಾರಿ ಕುಂಜಿ ರಾಮನ್ ಮಣಿಯಾಣಿ, ಕಚೇರಿ ನಿರ್ವಾಹಕ ಬಿ.ಶಿವರಾಮ ಪಾಲ್ಗೊಂಡಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260401-51-790106849

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.