ಲಕ್ಷ್ಮೇಶ್ವರ: ‘6ನೇ ಶತಮಾನದಲ್ಲಿಯೇ ಪ್ರಸಿದ್ಧವಾಗಿದ್ದ ಪುಲಿಗೆರೆ ಅಂದರೆ ಇಂದಿನ ಲಕ್ಷ್ಮೇಶ್ವರ ಕನ್ನಡ ಸಾಹಿತ್ಯದ ತವರೂರಾಗಿತ್ತು. ಇದು ತಿರುಳಗನ್ನಡದ ಹೃದಯ ಭಾಗವಾಗಿದ್ದು ಇಲ್ಲಿನದು ಪರಿಶುದ್ಧವಾದ ಕನ್ನಡವಾಗಿತ್ತು’ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಡಾ.ಮನು ಬಳಿಗಾರ ಹೇಳಿದರು.

ಇಲ್ಲಿನ ರಂಭಾಪುರಿ ಜಗದ್ಗುರು ವೀರ ಗಂಗಾಧರ ಸಮುದಾಯ ಭವನದಲ್ಲಿ ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರ, ಭಾರತೀಯ ಭಾಷಾ ಸಂಸ್ಥೆ, ಉನ್ನತ ಶಿಕ್ಷಣ ಇಲಾಖೆ ಶಿಕ್ಷಣ ಸಚಿವಾಲಯ ಭಾರತ ಸರ್ಕಾರ, ಗದಗ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಲಕ್ಷ್ಮೇಶ್ವರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಆಶ್ರಯದಲ್ಲಿ ಆರಂಭವಾದ ಪುಲಿಗೆರೆ ಪರಿಸರದ ಪ್ರಾಚೀನ ಕನ್ನಡ ಸಾಹಿತ್ಯ ಕುರಿತ ರಾಜ್ಯಮಟ್ಟದ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದರು.

‘ಪಟ್ಟಣದ ಪುರಾತನ ಶಂಖ ಬಸದಿಯಲ್ಲಿ 600, ಸೋಮೇಶ್ವರ ದೇವಸ್ಥಾನದಲ್ಲಿ 50 ಶಾಸನಗಳು ದೊರೆತಿವೆ. ಇಷ್ಟೊಂದು ಶಾಸನಗಳು ಸಿಗಬೇಕಾದರೆ ಶಂಖ ಬಸದಿ ಒಂದು ಘಟಿಕಾ ಸ್ಥಾನವಾಗಿತ್ತಲ್ಲದೆ ಇಡೀ ಪುಲಿಗೆರೆಗೆ ವಿಶ್ವವಿದ್ಯಾಲಯದ ಸ್ಥಾನಮಾನ ಇತ್ತು. ಕನ್ನಡ ಸಾಹಿತ್ಯ ರಚನೆ ಪುಲಿಗೆರೆಯಿಂದಲೇ ಆರಂಭವಾಗಿರಬೇಕು. ಹಳಗನ್ನಡದ ಎಲ್ಲ ಕವಿಗಳ ಕಾವ್ಯಗಳಲ್ಲಿ ಪುಲಿಗೆರೆ ಸಾಹಿತ್ಯದ ಕುರಿತು ಉಲ್ಲೇಖ ಬರುತ್ತದೆ’ ಎಂದು ತಿಳಿಸಿದ ಅವರು ‘ಜಗತ್ತಿಗೆ ಮಹಾಕವಿ ಪಂಪನನ್ನು ಪರಿಚಯಿಸಿದವರು ಇಂಗ್ಲಿಷ್ನ ಬಿ.ಎಲ್.ರೈಸ್ ಅವರು. ಪಂಪನ ಕಾವ್ಯಗಳನ್ನು ಆಳವಾಗಿ ಅಭ್ಯಾಸ ಮಾಡಿದ ಅವರು ಅವನಲ್ಲಿನ ಪಾಂಡಿತ್ಯಕ್ಕೆ ಮರುಳಾಗಿದ್ದರಲ್ಲದೆ ಪಂಪ ಎಂಥ ಮಹಾನ್ ಕವಿ ಎಂಬುದನ್ನು ಕನ್ನಡಿಗರಿಗೆ ತಿಳಿಸಿಕೊಟ್ಟರು’ ಎಂದರು.

‘ಕನ್ನಡಕ್ಕೆ ಈಗ ಆತಂಕದ ದಿನಗಳು ಶುರುವಾಗಿವೆ. ಕನ್ನಡ ಭಾಷೆಯ ಮಹತ್ವ ಹೋದರೆ ಕನ್ನಡಕ್ಕೆ ಯಾವುದೇ ಬೆಲೆಯಿಲ್ಲ. ಆದ್ದರಿಂದ ಕನ್ನಡವನ್ನು ಉಳಿಸುವ ನಿಟ್ಟಿನಲ್ಲಿ ಕನಿಷ್ಠ 8ನೇ ತರಗತಿವರೆಗಾದರೂ ಕನ್ನಡದಲ್ಲಿ ಬೋಧನೆ ಅಗತ್ಯ’ ಎಂದು ಹೇಳಿದರು.

ಶಾಸಕ ಡಾ.ಚಂದ್ರು ಲಮಾಣಿ, ಮಾಜಿ ಶಾಸಕರಾದ ಜಿ.ಎಂ.ಮಹಾಂತಶೆಟ್ಟರ, ರಾಮಣ್ಣ ಲಮಾಣಿ ಮಾತನಾಡಿದರು. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ವಿವೇಕಾನಂದಗೌಡ ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಅನ್ನಪೂರ್ಣ ನಿರೂಪಿಸಿದರು. ಮೈಸೂರಿನ ಶಾಸ್ತ್ರೀಯ ಕನ್ನಡ ಅಧ್ಯಯನ ಕೇಂದ್ರದ ಯೋಜನಾ ನಿರ್ದೇಶಕ ಡಾ.ನೀಲಗಿರಿ ತಳವಾರ ಪ್ರಾಸ್ತಾವಿಕವಾಗಿ ಮಾತನಾಡಿದರು. ತಾಲ್ಲೂಕು ಕಸಾಪ ಅಧ್ಯಕ್ಷ ಈಶ್ವರ ಮೆಡ್ಲೇರಿ ಸ್ವಾಗತಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260521-23-1851389952

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.