ಸಂತೇಬಾಚಹಳ್ಳಿ:ಹಳ್ಳಿಗಳಲ್ಲಿ ಗ್ರಾಮೀಣ ಪ್ರತಿಭೆ ರಂಗ ಕುಣಿತ ಸ್ಪರ್ಧೆ ರಾಜ್ಯ ಮಟ್ಟಕ್ಕೆ ಬೆಳೆಯುತ್ತಿರುವುದು ಸಂತಸದ ವಿಚಾರವಾಗಿದೆ ಎಂದು ಕರ್ನಾಟಕ ಸಂಘದ ಅಧ್ಯಕ್ಷ ಜಯ ಪ್ರಕಾಶ್ ಗೌಡ ಹೇಳಿದರು.

ಸಮೀಪದ ಸಾರಂಗಿಯಲ್ಲಿ ಗ್ರಾಮದೇವತೆ ಕೋಡಿಯಮ್ಮ ಹಬ್ಬದ ಪ್ರಯುಕ್ತ ನಡೆದ ರಾಜ್ಯ ಮಟ್ಟದ ರಂಗದ ಸ್ಪರ್ಧೆಯಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.

‘ಹಳ್ಳಿಗಳಲ್ಲಿ ವೃದ್ಧರು ಹಾಗೂ ವಿಚಾರವಂತರು ಇರುವ ಹಳ್ಳಿಗಳಲ್ಲಿ ಇನ್ನೂ ರಂಗದ ಕಲೆ ಜೀವಂತವಾಗಿದೆ. ಪ್ರತಿ ಹಳ್ಳಿಗಳಲ್ಲಿ ಹಾಗೂ ಪಟ್ಟಣದಲ್ಲಿ ಸಾಂಸ್ಕೃತಿಕ ಕಲೆ ರಂಗ ಕುಣಿತ, ಕೋಲಾಟ, ಸೊಬಾನೆ ಪದಗಳನ್ನು ಕಲಿಯಬೇಕು.ಯುವಕರು ಇಂತಹ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಒಗ್ಗಟ್ಟು ಪ್ರದರ್ಶನ ಮಾಡಬೇಕು’ ಎಂದರು.

ರಂಗ ಕುಣಿತದ ತೀರ್ಪುಗಾರರಾಗಿ ತೆಂಕನಹಳ್ಳಿ ಉಮೇಶ್, ನಾಗಮಂಗಲ ಮಂಜೇಗೌಡ, ಕತ್ತರಘಟ್ಟ ವಾಸು, ಶಿಕ್ಷಕ ರಂಗಸ್ವಾಮಿ, ಕಾರ್ಯ ನಿರ್ವಹಿಸಿದರು. ಪ್ರಥಮ ಬಹುಮಾನವನ್ನು ಅಣ್ಣೇಚಾಕನಹಳ್ಳಿ, ದ್ವಿತೀಯ ಬಹುಮಾನ ದಬ್ಬೆಘಟ್ಟ , ತೃತೀಯ ಬಹುಮಾನ ಕೊರೆನಹಳ್ಳಿ ತಂಡಗಳು ಬಹುಮಾನ ಪಡೆದವು. ಗ್ರಾಮಸ್ಥರು, ಗಣ್ಯರು, ಮುಖಂಡರು ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260505-40-1382443446

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.