ಕೊಣನೂರು: ರುದ್ರಪಟ್ಟಣದಲ್ಲಿ ಸಂಗೀತೋತ್ವವದ ಮೊದಲ ದಿನ ಬಾಲ ಮತ್ತು ಯುವ ಕಲಾ ಪ್ರತಿಭೆಗಳು ವಿಶೇಷ ಕಾರ್ಯಕ್ರಮ ನೀಡುವ ಮೂಲಕ ಪ್ರೇಕ್ಷಕರ ಮನಗೆದ್ದರು.

ರಾಮನಾಥಪುರ ಹೋಬಳಿಯ ರುದ್ರಪಟ್ಟಣದ ರಾಮಮಂದಿರಲ್ಲಿ ಜರುಗುತ್ತಿರುವ 23 ನೇ ವಾರ್ಷಿಕ ಸಂಗೀತೋತ್ಸವದ ಮೊದಲ ದಿನವಾದ ಬುಧವಾರ, ಯುವ ಮತ್ತು ಬಾಲ ಕಲಾವಿದರ ಮೀಸಲಿದ್ದು, ಅನೇಕ ಕಲಾವಿದರು ಕಾರ್ಯಕ್ರಮ ಪ್ರಸ್ತುತಪಡಿಸಿದರು. ಮೊದಲಿಗೆ ಚಿತ್ರನಟಿ ಮತು ಭರತನಾಟ್ಯ ಕಲಾವಿದೆ ರಶ್ಮಿ ಹರಿಪ್ರಸಾದ್, ಗಣಪತಿ ಸ್ತುತಿಯೊಂದಿಗೆ ತಮ್ಮ ಭರತನಾಟ್ಯದಿಂದ ರಂಜಿಸಿದರು. ವಿದ್ವಾನ್ ಆರ್.ಕೆ.ಪದ್ಮನಾಭ್ ಅವರ ಹಾಡುಗಾರಿಕೆಗೆ ನಾಟ್ಯ ಮಾಡಿ ಮೆಚ್ಚುಗೆಗೆ ಪಾತ್ರರಾದರು.

ಮಾಸ್ಟರ್ ಅತ್ರಿ ಕೌಶಿಕ್, ತ್ಯಾಗರಾಜ ವಿರಚಿತ ಪ್ರಹ್ಲಾದ ಭಕ್ತ ವಿಜಯ ಗೇಯ ನಾಟಕ ಕುರಿತು ಪ್ರವಚನ ನೀಡಿ ಹಿರಿಯರ ಮೆಚ್ಚುಗೆ ಗಳಿಸಿದರು. ಪುಟ್ಟ ಬಾಲಕ ಅದ್ವಿಕ್ ಕೌಶಿಕ್ ವಯಲಿನ ವಾದನದ ಮೂಲಕ ಪಿಳ್ಳಾರಿ ಗೀತೆಗಳನ್ನು ನುಡಿಸಿದರು. ಐಶಾನಿ ಆರ್. ನೆಲಮನೆ, ಮನಮೋಹಕ ಭರತನಾಟ್ಯ ಪ್ರದರ್ಶನದಿಂದ ಸಂಗೀತೋತ್ಸವಕ್ಕೆ ಮೆರುಗು ನೀಡಿದರು.

ಧನ್ಯತಾ ವಿ. ಗಾಯನದಲ್ಲಿ, ಅಮ್ಮ ಆನಂದ ದಾಯಿನಿ, ಅನುಪಮ ಗುಣಾಂಭುಧಿ, ಪಾಮರಜನ ಪಾಲಿನಿ, ಪುರಂದರ ವಿರಚಿತ ದೇವರ ನಾಮವನ್ನು ಸುಶ್ರ್ಯಾವ್ಯವಾಗಿ ಹಾಡಿದರು. ಆಕಾಶವಾಣಿಯ ಕಲಾವಿದ ಅರ್ಜುನ ವಯಲಿನ್, ಪವನ್ ಮಾಧವ್ ಮೃದಂಗ ನುಡಿಸಿದರು.

ಅರ್ಣವ್ ಹರೀಶ್ ಕೌಶಿಕ್ ನಡೆಸಿಕೊಟ್ಟ ಗಾಯನ ಕಾರ್ಯಕ್ರಮದಲ್ಲಿ ವಾಸುದೇವಾಚಾರ್ಯರ ನಳಿನಕಾಂತಿ, ಆರ್.ಕೆ.ಪದ್ಮನಾಭ್ ವಿರಚಿತ ಮನಸಾ ವಂದಿಪೆ, ಮುತ್ತುಸ್ವಾಮಿ ದೀಕ್ಷಿತರ ರಾಮಚಂದ್ರಸ್ಯ ಮತ್ತು ಪುರಂದರದಾಸರ ರಾಮ ರಾಮ ಕೃತಿಗಳನ್ನು ಪ್ರಸ್ತುತಿಪಡಿಸಿದರು. ಅನುಭವಿ ಪಕ್ಕವಾದ್ಯ ಕಲಾವಿದ ಧ್ರುವ ಸಿ. ಲಕ್ಕವಳ್ಳಿ ಮತ್ತು ಅನ್ಶುಮಾನ್ ಹರೀಶ್ ಕೌಶಿಕ್ ಪಕ್ಕವಾದ್ಯದಲ್ಲಿ ಹಾಡುಗಾರಿಕೆ ತಾಳ ಮೇಳೈಸಿದರು.

ಸಂಗೀತೋತ್ಸವಕ್ಕೆ ಚಾಲನೆ ನೀಡಿದ ಸಂಗೀತ ವಿದ್ವಾನ್ ಆರ್.ಕೆ.ಪದ್ಮನಾಭ್, ಸಂಗೀತ ಮತ್ತು ನೃತ್ಯ ವಿಶಿಷ್ಟ ಕಲೆಗಳಾಗಿವೆ. ಬಾಲ್ಯದಿಂದಲೇ ಸಂಗೀತದ ಅಭ್ಯಸಿಸಿದಲ್ಲಿ ಕರಗತವಾಗುತ್ತದೆ. ಅನೇಕ ಕಲಾವಿದರನ್ನು ಸಂಗೀತ ಕ್ಷೇತ್ರಕ್ಕೆ ಕಾಣಿಕೆಯಾಗಿ ನೀಡಿರುವ ರುದ್ರಪಟ್ಟಣದ ಸಂಗೀತದ ಪರಂಪರೆಯನ್ನು ಜನಮನಕ್ಕೆ ತಿಳಿಸಲು ಸಂಗೀತೋತ್ಸವವು ಒಂದು ಮಾಧ್ಯಮವಾಗಿದೆ. ಪ್ರಸಿದ್ಧಿ ಪಡೆದ ಕಲಾವಿದರ ಬದಲಿಗೆ ಯುವ ಕಲಾವಿದರಿಗೆ ವೇದಿಕೆ ನೀಡಿದಲ್ಲಿ ಅವರ ಪ್ರತಿಭೆಗೆ ಪ್ರೋತ್ಸಾಹ ನೀಡಿ ಮುಂದಿನ ತಲೆಮಾರಿಗೆ ಸಂಗೀತದ ಮಹತ್ವವನ್ನು ತಿಳಿಸಿದಂತಾಗುತ್ತದೆ ಎಂದರು.

ಸಂಗೀತ ಆಲಿಸಲು ವಿವಿದೆಢೆಗಳಿಂದ ಬಂದಿರುವ ಸಂಗೀತ ಪ್ರಿಯರು ರುದ್ರಪಟ್ಟಣದಲ್ಲಿ ವಾಸ್ತವ್ಯ ಹೂಡಿದ್ದಾರೆ. ಇನ್ನೂ ಕೆಲವರು ಬರುತ್ತಿದ್ದಾರೆ. ಸಂಗೀತೋತ್ಸವಕ್ಕೆ ಬರುವ ಎಲ್ಲ ಶ್ರೋತೃಗಳು ಮತ್ತು ಕಲಾವಿದರಿಗೆ 5 ದಿನಗಳು ಶುಚಿ ರುಚಿಯಾದ ಬಗೆ ಬಗೆಯ ಊಟೋಪಚಾರವನ್ನು ಸಂಗೀತೋತ್ಸವ ಸಮಿತಿಯು ಮಾಡಿರುವುದು ವಿಶೇಷವಾಗಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260521-36-2011661382

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.