ಸಾಗರ: ‘ಜಾನಪದ ಮಟ್ಟುಗಳನ್ನು (ಮಜಲು) ಬಳಸಿದ ಬಹುತೇಕ ಚಲನಚಿತ್ರ ಗೀತೆಗಳು ಯಶಸ್ಸು ಕಂಡಿವೆ’ ಎಂದು ಕಾಂತಾರ ಚಲನಚಿತ್ರದ ಹಿನ್ನೆಲೆ ಗಾಯಕ ವೆಂಕಟೇಶ್ ಡಿ.ಸಿ. ಹೇಳಿದರು.

ಇಲ್ಲಿನ ವಿನೋಬ ನಗರದಲ್ಲಿ ಕರ್ನಾಟಕ ಜಾನಪದ ಪರಿಷತ್ ಭಾನುವಾರ ಏರ್ಪಡಿಸಿದ್ದ ಸಂಗೀತ ಸಂಭ್ರಮ–ಸಂವಾದ ಕಾರ್ಯಕ್ರಮದಲ್ಲಿ ಅಭಿನಂದನೆ ಸ್ವೀಕರಿಸಿ ಮಾತನಾಡಿದರು.

‘ಜಾನಪದ ಗೀತೆಗಳಿಗೆ ವಿಶಿಷ್ಟ ಲಯವಿದೆ. ಶಾಸ್ತ್ರೀಯ ಸಂಗೀತ, ಭಕ್ತಿ ಸಂಗೀತ, ಸುಗಮ ಸಂಗೀತ ಹೀಗೆ ಹಲವು ಪ್ರಕಾರಗಳಿಂದ ಚಲನಚಿತ್ರ ಗೀತೆಗಳು ಪ್ರಭಾವಿತಗೊಂಡಿವೆ. ಸದಭಿರುಚಿಯ ಸಾಹಿತ್ಯವನ್ನು ಒಳಗೊಂಡ ಗೀತೆಗಳನ್ನು ಹದವಾದ ಸಂಗೀತದೊಂದಿಗೆ ಕೇಳುಗರ ಎದುರು ಪ್ರಸ್ತುತಪಡಿಸಿದಾಗ ಅದು ಜನರಿಗೆ ಹತ್ತಿರವಾಗುತ್ತದೆ’ ಎಂದು ಹೇಳಿದರು.

‘ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು, ಕಾಂತಾರದಂತಹ ಯಶಸ್ವಿ ಚಲನಚಿತ್ರಗಳಲ್ಲಿ ಹಿನ್ನೆಲೆ ಗಾಯಕನಾಗಲು ಅವಕಾಶ ಸಿಕ್ಕಿದ್ದು ಅದೃಷ್ಟವೇ ಸರಿ. ಚಿತ್ರರಂಗದಲ್ಲಿ ಪ್ರತಿಭೆಯ ಜೊತೆಗೆ ಅದೃಷ್ಟವೂ ಇರಬೇಕು’ ಎಂದು ತಿಳಿಸಿದರು.

ಕರ್ನಾಟಕ ಜಾನಪದ ಪರಿಷತ್ನ ತಾಲ್ಲೂಕು ಘಟಕದ ಅಧ್ಯಕ್ಷ ಸತ್ಯನಾರಾಯಣ ಸಿರಿವಂತೆ ಅಧ್ಯಕ್ಷತೆ ವಹಿಸಿದ್ದರು. ಪ್ರಮುಖರಾದ ರತ್ನಾಕರ ಕುನಗೋಡು, ನಾರಾಯಣಪ್ಪ ಕುಗ್ವೆ, ರಾಜು ಜನ್ನೆಹಕ್ಲು, ದಿನೇಶ್ ಬರದವಳ್ಳಿ, ದೀಪಕ್ ಸಾಗರ್, ಸತ್ಯನಾರಾಯಣ ಕೆ.ಬಿ., ಮಹಾಬಲೇಶ್ವರ ಶೇಟ್, ಮೀನಾಕ್ಷಿ, ಪ್ರಭಾ ವೆಂಕಟೇಶ್ ಇದ್ದರು.

ಎಸ್. ಬಸವರಾಜ್ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ನಾರಾಯಣ ಕೆ. ವಂದಿಸಿದರು. ಜ್ಯೋತಿ ಸತೀಶ್ ನಿರೂಪಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260331-42-626258508

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.