ಸವದತ್ತಿ: ಮೌಲ್ಯ ಸಂಪದ 21ನೇ ವಾರ್ಷಿಕೋತ್ಸವದ ನಿಮಿತ್ತ ಮೇ 23 ಮತ್ತು 24 ರಂದು ತಾಲ್ಲೂಕಿನ ಶಿರಸಂಗಿ ಹೊರವಲಯದ ವೇದಮಾತಾ ಗಾಯಿತ್ರಿ ಸಂಸ್ಕೃತ ಗುರುಕುಲದಲ್ಲಿ ರಾಜ್ಯ ಮಟ್ಟದ ಪ್ರಶಸ್ತಿ ಪ್ರದಾನ ಹಾಗೂ ವಿವಿಧ ಸಾಂಸ್ಕೃತಿಕ, ಸಾಹಿತ್ಯ, ಭಕ್ತಿ ಸಂಗೀತ ಸೇವಾ ಕಾರ್ಯಕ್ರಮ ಜರುಗಲಿವೆ ಎಂದು ಮೌಲ್ಯ ಸಂಪದ ಅಧ್ಯಕ್ಷ ಸೋಮಶೇಖರ ಸೊಗಲದ ಹೇಳಿದರು.

ಇಲ್ಲಿನ ಪ್ರವಾಸಿ ಮಂದಿರಲ್ಲಿ ಮಂಗಳವಾರ ಜರುಗಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅಧಿಕ ಮಾಸದ ವಿಶೇಷತೆಯಲ್ಲಿ ಲೋಕಕಲ್ಯಾಣಕ್ಕಾಗಿ ಗಣ, ಸರಸ್ವತಿ, ಧನ್ವಂತರಿ, ವರ ಕನ್ಯಾ ಪ್ರಾಪ್ತಿ, ಫಲಪ್ರಾಪ್ತಿ ಹಾಗೂ ಚಂಡಿಕಾ ಹೋಮದೊಂದಿಗೆ ಮೊದಲದಿನ ಆರಂಭವಾಗಲಿದೆ.

ಕಾಳಿಕಾ ದೇವಸ್ಥಾನದ ಧರ್ಮಾಧಿಕಾರಿ ಬ್ರಹ್ಮಶ್ರೀ ಇಂದ್ರಾಚಾರ್ಯ ಮಾತನಾಡಿ, ಲೋಕ ಕಲ್ಯಾಣಾರ್ಥವಾಗಿ ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ಹೇಳಿದರು.

ಶಿರಸಂಗಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಕಲ್ಲನಗೌಡ ಪಾಟೀಲ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260520-21-1999541460

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.