ಶಹಾಪುರ: ‘ಸಾಹಿತ್ಯ ಕ್ಷೇತ್ರಕ್ಕೆ ತನ್ನದೆ ಆದ ವಿಶಿಷ್ಟ ಕೊಡುಗೆಯನ್ನು ನಮ್ಮ ನೆಲದ ಸಾಹಿತಿಗಳು, ಬುದ್ಧಿ ಜೀವಿಗಳು, ಪತ್ರಕರ್ತರು, ಹೋರಾಟಗಾರರು ನೀಡುತ್ತಾ ಬಂದಿದ್ದಾರೆ. ಅಂತಹ ಸಾಧಕರನ್ನು ಕರೆತರುವ ಜತೆಯಲ್ಲಿ ಸೇವೆ ಸಲ್ಲಿಸಿದ ನಾಯಕರನ್ನು ಸ್ಮರಿಸುವ ಸಕಾಲವನ್ನು ಒದಗಿಸಿದ ಕಲಾನಿಕೇತನ ಟ್ರಸ್ಟ್ ಇನ್ನಷ್ಟು ಶಹಾಪುರ ಸಾಹಿತ್ಯ ಸಂಭ್ರಮ ಹೆಚ್ಚಿಸಲು ಶ್ರಮಿಸಲಿ’ ಎಂದು ನಿವೃತ್ತ ಡಿಡಿಪಿಐ ಶಾಂತಗೌಡ ಪಾಟೀಲ ತಿಳಿಸಿದರು.

ನಗರದ ಮಾತೋಶ್ರೀ ಸಭಾಂಗಣದಲ್ಲಿ ಭಾನುವಾರ ಕಲಾನಿಕೇತನ ಟ್ರಸ್ಟ್ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಶಹಾಪುರ ಸಾಹಿತ್ಯ ಸಂಭ್ರಮ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಕಲಬುರಗಿ ವಿಶ್ವವಿದ್ಯಾಲಯದ ವಿಶ್ರಾಂತ ಪ್ರಾಧ್ಯಾಪಕ ವಾಸುದೇವ ಸೇಡಂ ಮಾತನಾಡಿ, ‘ಶಹಾಪುರ ಎಂದ ತಕ್ಷಣ ಮೊದಲು ನೆನಪಾಗುವುದು ಸಗರ ಕೃಷ್ಣಾಚಾರ್ಯ ಅವರ ಸಾಹಿತ್ಯ ಸೇವೆ. ರಜಾಕಾರರ ಹಾವಳಿ ನಡುವೆ ಕನ್ನಡ ಪತ್ರಿಕೆಯ ಮೂಲಕ ಕನ್ನಡವನ್ನು ಉಳಿಸಿ ಬೆಳೆಸವುದರಲ್ಲಿ ಅಗ್ರಸ್ಥಾನ ಪಡೆದುಕೊಂಡಿದ್ದಾರೆ. ಅಲ್ಲದೆ ರಸ್ತಾಪುರ ಭೀಮಕವಿ ಇಂದಿಗೂ ಐಕಾನ್ ಆಗಿದ್ದಾರೆ. ಅಲ್ಲದೆ ಸಾಹಿತಿ ದಿ. ಚಂದ್ರಕಾಂತ ಕರದಳ್ಳಿ ಅವರು ಮಕ್ಕಳ ಸಾಹಿತ್ಯಕ್ಕೆ ನೀಡಿದ ಕೊಡುಗೆ ಅಪಾರವಾಗಿದೆ. ಅಲ್ಲದೆ ಶರಣ ಸಾಹಿತಿ ಲಿಂಗಣ್ಣ ಸತ್ಯಂಪೇಟೆ ಹಾಗೂ ತತ್ವಪದಕಾರ ಜಲಾಲಸಾಬ್ ಅವರನ್ನು ಮರೆಯುವಂತೆ ಇಲ್ಲ. ಹೀಗೆ ಹಲವಾರು ಸಾಹಿತಿಗಳು, ಲೇಖಕರು, ಪತ್ರಕರ್ತರು, ಇತಿಹಾಸಕಾರರು ಎಲೆಮರೆ ಕಾಯಿಯಂತೆ ಕೊಡುಗೆ ನೀಡಿದ್ದಾರೆ. ಕಲಾನಿಕೇತನ ಟ್ರಸ್ಟ್ ಮುಂದೆ ಇಂತಹ ಸಾಧಕರನ್ನು ಗುರುತಿಸಬೇಕು’ ಎಂದು ಸಲಹೆ ನೀಡಿದರು.

ಟ್ರಸ್ಟ್ನ ಅಧ್ಯಕ್ಷ ಬಸವರಾಜ ಸಿಣ್ಣೂರ, ಕಸಾಪ ನಿಕಟಪೂರ್ವ ಅಧ್ಯಕ್ಷ ಸಿದ್ದಲಿಂಗಣ್ಣ ಆನೇಗುಂದಿ, ಸಾಹಿತಿ ಸಿದ್ರಾಮ ಹೊನ್ಕಲ್, ದೇವಿಂದ್ರಪ್ಪ ಹಡಪದ, ಸಾಮಾಜಿಕ ಕಾರ್ಯಕರ್ತ ಮಾನಪ್ಪ ಹಡಪದ, ರೈತ ಮುಖಂಡ ಲಕ್ಷ್ಮಿಕಾಂತ ಪಾಟೀಲ ಮದ್ರಿಕಿ, ಜಾಫರ ಶರೀಫ್, ಬಸನಗೌಡ ಕಂಚಲಕವಿ, ಸೂಗಯ್ಯ, ವೀರಭದ್ರಯ್ಯ ಭಾಗವಹಿಸಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260525-30-26695985

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.