ಶಿವಮೊಗ್ಗ: ‘ಸಾಹಿತಿ ಕುಂ ವೀರಭದ್ರಪ್ಪ ಅವರ ‘ದೇವರ ಹೆಣ’ ಕಥೆ ಕನ್ನಡ ಕಥಾ ಪ್ರಕಾರಕ್ಕೆ ಕೊಟ್ಟ ಅಮೂಲ್ಯ ಕೊಡುಗೆ’ ಎಂದು ಲೇಖಕಿ ಸಬಿತಾ ಬನ್ನಾಡಿ ಹೇಳಿದರು.

ಬಹುಮುಖಿ ಶಿವಮೊಗ್ಗ ಮತ್ತು ಸುವ್ವಿ ಪಬ್ಲಿಕೇಷನ್ ವತಿಯಿಂದ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಕುಂವೀ ಅನುವಾದಿಸಿದ ಮಾರುತಿ ಪೌರೋಹಿತಂ ಅವರ ಅರೆ ಐತಿಹಾಸಿಕ ತೆಲುಗು ಕಾದಂಬರಿ ‘ಪ್ರಣಯ ಹಂಪಿ’ ಬಿಡುಗಡೆ ಮಾಡಿ ಮಾತನಾಡಿದರು.

‘ಈ ಕಾದಂಬರಿ ಯುದ್ಧಕಾಲದ ಪ್ರೇಮ ಕಥಾನಕವಾಗಿದ್ದು, ಕುಂ.ವೀ ಇದರಲ್ಲಿ ಅನಾಮಧೇಯ ವ್ಯಕ್ತಿಗಳ ಪರಿಚಯ ಮಾಡಿಕೊಡುತ್ತಾರೆ. ಜನಸಾಮಾನ್ಯರ ಬದುಕಿನ ಬಗ್ಗೆ, ಹಿಂದೂ–ಮುಸ್ಲಿಂ ಹೋರಾಟ ಮತ್ತು ಮಾನವೀಯ ವಿಷಯದ ಬಗ್ಗೆ ವಿವರವಾಗಿ ತಿಳಿಸುತ್ತಾರೆ’ ಎಂದರು.

‘ಕುಂ.ವೀ ಅವರ ಭಾಷೆ ಬಳಸುವ ಕಲೆ ಅದ್ಭುತವಾದದ್ದು. ಇದರಲ್ಲಿ ಲೇಖಕರು ಭಾಷೆಯಲ್ಲೂ ಪರಕಾಯ ಪ್ರವೇಶ ಮಾಡಿದ್ದಾರೆ’ ಎಂದು ಎಚ್.ಎಸ್. ನಾಗಭೂಷಣ ತಿಳಿಸಿದರು.

‘ಕನ್ನಡ ಭಾಷೆಯ ಜನ ಹೃದಯವಂತರು. ಈಗ ಯುವಕರು ಮೆಡಿಕಲ್ ಮತ್ತು ಎಂಜಿನಿಯರಿಂಗ್ ಮಾತ್ರ ಓದುತ್ತಾರೆ. ಯಾರೂ ಸಾಹಿತ್ಯ ಓದುತ್ತಿಲ್ಲ. ಅಂತಹವರು ಕಾದಂಬರಿ ಮೂಲಕವಾದರೂ ಸಾಹಿತ್ಯ ಓದುವಂತಾಗಲಿ’ ಎಂದು ಮಾರುತಿ ಪೌರೋಹಿತಂ ಹೇಳಿದರು.

‘ವಿಜಯನಗರ ಸಾಮ್ರಾಜ್ಯವನ್ನು ಮುಸ್ಲಿಮರು ಹಾಳು ಮಾಡಿದ್ದಾಗಿ ಹೇಳುತ್ತಾರೆ. ಅಲ್ಲಿ ವೈಷ್ಣವ ದೇವಾಲಯ ಮಾತ್ರ ಹಾಳಾಗಿ ಶೈವ ದೇವಾಲಯ ಹೇಗೆ ಉಳಿದುಕೊಂಡಿತು? ಲೇಖಕನಿಗೆ ಸ್ವಲ್ಪವಾದರೂ ಮಾನವೀಯತೆ, ಕನಿಷ್ಠ ಸೌಜನ್ಯ ಇರಬೇಕು’ ಎಂದು ಸಾಹಿತಿ ಕುಂ.ವೀರಭದ್ರಪ್ಪ ತಿಳಿಸಿದರು.

ಪುಸ್ತಕ ಪ್ರಕಾಶಕ ಸುನಿಲ್ ಕುಮಾರ್, ಕೆ.ಎಸ್. ಹುಚ್ರಾಯಪ್ಪ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260326-42-1829317028

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.