ಸಿದ್ದಾಪುರ: ‘ಚಂಚಲವಾದ ಮನಸ್ಸಿಗೆ ನೆಮ್ಮದಿ ಸಿಗಲು ಕಲೆ ಹಾಗೂ ಸಾಹಿತ್ಯದ ಮೊರೆ ಹೋಗಬೇಕು. ಮನಸ್ಸಿಗೆ ಆನಂದವನ್ನು ನೀಡುವ ಕಲೆಯು ನಮ್ಮ ಬಹು ಅಮೂಲ್ಯ ಆಸ್ತಿ. ಅದನ್ನು ಉಳಿಸಿ ಬೆಳೆಸಿಕೊಳ್ಳಬೇಕಾದ ಹೊಣೆಗಾರಿಕೆ ಎಲ್ಲರದ್ದು’ ಎಂದು ಪತ್ರಕರ್ತ ನಾಗರಾಜ ಭಟ್ಟ ಕೆಕ್ಕಾರು ಹೇಳಿದರು.

ತಾಲ್ಲೂಕಿನ ಬಿದ್ರಕಾನ್ ಸೇವಾ ಸಹಕಾರಿ ಸಂಘದ ಸಭಾಭವನದಲ್ಲಿ ಸ್ಥಳೀಯ ಕಲಾಭಾಸ್ಕರ ಸಂಸ್ಥೆ ಸಂಸ್ಕೃತಿ ಸಚಿವಾಲಯದ ಯೋಜನೆಯಡಿಯಲ್ಲಿ ಹಮ್ಮಿಕೊಂಡ ನವರಸ ಯಕ್ಷೋತ್ಸವದ ಎರಡನೇ ದಿನ ಶುಕ್ರವಾರ ನಡೆದ ಸಭಾ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಅವರು ಮಾತನಾಡಿದರು.

ಯಕ್ಷಗಾನ ಒಂದು ಪರಿಪೂರ್ಣವಾದ ಕಲಾ ಪ್ರಕಾರವಾಗಿದೆ. ಕಲೆ ಹಾಗೂ ಸಾಹಿತ್ಯಗಳ ಸಮ್ಮಿಳಿತವಾಗಿದೆ. ಹಲವು ಕಲೆಗಳ ಸಂಗಮವಾಗಿದೆ. ಯಕ್ಷಗಾನಕ್ಕೆ ಸಿದ್ದಾಪುರ ತಾಲ್ಲೂಕಿನ ಕೊಡುಗೆ ಅನನ್ಯವಾಗಿದೆ ಎಂದರು.

ಬಿದ್ರಕಾನ್ ಸೇವಾ ಸಹಕಾರಿ ಸಂಘದ ಉಪಾಧ್ಯಕ್ಷ ಪ್ರಕಾಶ ಹೆಗಡೆ ಮುತ್ತಿಗೆ ಅಧ್ಯಕ್ಷತೆ ವಹಿಸಿದ್ದರು.

ಸಾಮಾಜಿಕ ಕಾರ್ಯಕರ್ತ ಸುಧೀರ ಗೌಡರ್ ಹೆಗ್ಗೋಡ್ಮನೆ, ಜಿ.ಟಿ.ಹೆಗಡೆ ಹಳದೋಟ ಅತಿಥಿಗಳಾಗಿ ಉಪಸ್ಥಿತರಿದ್ದರು. ಕಲಾಭಾಸ್ಕರದ ಅಧ್ಯಕ್ಷ ಇಟಗಿ ಮಹಾಬಲೇಶ್ವರ ಭಟ್ಟ ಸ್ವಾಗತಿಸಿದರು. ಕಾರ್ಯದರ್ಶಿ ವಿನಾಯಕ ಹೆಗಡೆ ಕವಲಕೊಪ್ಪ ವಂದಿಸಿದರು.

ನಂತರ ಕವಿ ಕನ್ಯಾನ ವೆಂಕಟರಮಣ ಭಟ್ಟ ವಿರಚಿತ ‘ಭಸ್ಮಾಸುರ ಮೋಹಿನಿ’ ಎಂಬ ಯಕ್ಷಗಾನ ಪ್ರದರ್ಶನ ನಡೆಯಿತು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260531-20-728971961

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.