ಸಿಂಧನೂರು: ‘ಬಹುಪಾಲು ಜಾನಪದ ಸಾಹಿತ್ಯ ಮಹಿಳೆಯರಿಂದಲೇ ರಚಿತವಾಗಿದೆ. ‘ಹೆಣ್ಣಿನ ಒಡಲು, ಹಾಡಿನ ಕಡಲು’ ಎಂದು ಕರೆಯಲಾಗುತ್ತದೆ. ಜಾನಪದ ಸಾಹಿತ್ಯಕ್ಕೆ ಮಹಿಳೆಯರ ಕೊಡುಗೆ ಅಪಾರ’ ಎಂದು ಸರ್ಕಾರಿ ಪದವಿ ಕಾಲೇಜಿನ ಉಪನ್ಯಾಸಕ ಬಸವರಾಜ ಬಿ.ನಾಯಕ ಹೇಳಿದರು.

ನಗರದ ಬಸವ ಚಾರಿಟಬಲ್ ಟ್ರಸ್ಟ್ ಸಭಾಂಗಣದಲ್ಲಿ ಬುಧವಾರ ಹಸ್ಮಕಲ್ ಜಾನಪದ ಸಾಂಸ್ಕೃತಿಕ ಟ್ರಸ್ಟ್ ಕನ್ನಡ ಮತ್ತು ಸಂಸ್ಕೃತಿಕ ಇಲಾಖೆಯ ವಿಶೇಷ ಘಟಕ ಯೋಜನೆಯಡಿ ಹಮ್ಮಿಕೊಂಡಿದ್ದ ಜಾನಪದ ವಚನ ಸಂಭ್ರಮ-2026 ಕಾರ್ಯಕ್ರಮದಲ್ಲಿ ಮಾತನಾಡಿದರು.

‘ಮಹಿಳೆಯರು ತಮ್ಮ ಶ್ರಮ ಮರೆಯಲು ಸಾಂಪ್ರಾದಾಯಿಕ ಹಾಡುಗಳನ್ನು ರಚಿಸಿದ್ದಾರೆ’ ಎಂದರು.

ಮಕ್ಕಳ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷೆ ರಮಾದೇವಿ ಶಂಭೋಜಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಿಲ್ಲಾ ಸಹಾಯಕ ನಿರ್ದೇಶಕಿ ಉತ್ತರಾದೇವಿ ಎಸ್.ಮಠಪತಿ ಮಾತನಾಡಿದರು.

ಜಾನಪದ ಅಕಾಡೆಮಿ ಸದಸ್ಯ ರಂಗಪ್ಪ ಮಾಸ್ತಾರ್, ಮಾಜಿ ಸದಸ್ಯ ನಾರಾಯಣಪ್ಪ ಮಾಡಸಿರವಾರ, ಕನ್ನಡ ಸಾಹಿತ್ಯ ಪರಿಷತ್ತಿನ ತಾಲ್ಲೂಕು ಘಟಕದ ಅಧ್ಯಕ್ಷ ಎಚ್.ಎಫ್.ಮಸ್ಕಿ, ಬಸವ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಶರಣಪ್ಪ ಟೆಂಗಿನಕಾಯಿ, ಪತ್ರಕರ್ತ ಅಶೋಕ ಬೆನ್ನೂರು, ಬಸವ ಕೇಂದ್ರದ ಬಸವಲಿಂಗಪ್ಪ ಬಾದರ್ಲಿ ಉಪಸ್ಥಿತರಿದ್ದರು. ಕುಷ್ಟಗಿ ಮುಖ್ಯರಸ್ತೆಯಿಂದ ಬಸವಕೇಂದ್ರದವರೆಗೆ ವಿವಿಧ ಕಲಾ ಮೇಳಗಳಿಂದ ಮೆರವಣಿಗೆ ನಡೆಯಿತು. ವಿವಿಧ ಪ್ರಕಾರದ ಜನಪದ ಕಲಾತಂಡಗಳು ಭಾಗವಹಿಸಿದ್ದವು. ನಾಸಿಕ ಡೋಲು ತಂಡದ ಹನುಮಂತ ಭಜಂತ್ರಿ ಮತ್ತು ಚಿಲಿಪಿಲಿ ಗೊಂಬೆ ಕುಣಿತದ ಅಂಜನಪ್ಪ ಹಸ್ಮಕಲ್ ನೇತೃತ್ವದ ತಂಡಗಳು ಮೆರವಣಿಗೆಗೆ ಕಳೆ ತಂದವು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260521-32-1217000617

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.