ವೈವಿಧ್ಯಮಯ ಆಹಾರ ಸವಿಯ ಬಯಸಿದ್ದೀರಾ?

7

ವೈವಿಧ್ಯಮಯ ಆಹಾರ ಸವಿಯ ಬಯಸಿದ್ದೀರಾ?

Published:
Updated:
Deccan Herald

ಇಂದಿರಾನಗರ ಮತ್ತು ಮಾರತ್‌ಹಳ್ಳಿಯ ಕೆಲವು ರೆಸ್ಟೊರೆಂಟ್‌ಗಳಲ್ಲಿ ಸ್ವಾತಂತ್ರ್ಯೋತ್ಸವ ನಿಮಿತ್ತ ಆಹಾರೋತ್ಸವಗಳನ್ನು ನಡೆಸಲಾಗುತ್ತಿದೆ. ದೇಶಿ ಶೈಲಿಯ ‍ಪಾಕ ವಿಧಾನಕ್ಕೆ ವಿದೇಶಿ ಮಸಾಲೆಗಳ ಸ್ಪರ್ಶ ನೀಡಿ ಉಣಬಡಿಸಲಾಗುತ್ತಿದೆ. ಇಲ್ಲಿ ನೀಡಲಾಗಿರುವ ಮೂರೂ ಆಹಾರೋತ್ಸವಗಳು ಆಗಸ್ಟ್‌ 19ರಂದು ಕೊನೆಗೊಳ್ಳುತ್ತದೆ.

ಸ್ಲೈ ಗ್ರ್ಯಾನಿ, ಇಂದಿರಾನಗರ

ಭಾರತೀಯ ಅಡುಗೆಗಳನ್ನು ವಿದೇಶಿ ಪಾಕಶೈಲಿಯೊಂದಿಗೆ ಸಂಯೋಜಿಸಿ ಉಣಬಡಿಸಲಿದೆಯಂತೆ, ಇಂದಿರಾನಗರದ 12ನೇ ಮುಖ್ಯರಸ್ತೆಯಲ್ಲಿರುವ ‘ಸ್ಲೈ ಗ್ರ್ಯಾನಿ’ ರೆಸ್ಟೋರೆಂಟ್‌.

ವೆಜ್‌ ಕಟ್ಲೆಟ್‌, ಖಟ್ಟಾ ಸಬ್ಜಿ, ಅಜ್ವಾನ್‌ ರೋಟಿ, ಪೊಟ್ಯಾಟೊ ಸಲ್ಲಿ, ಪನೀರ್‌ ಟಿಕ್ಕ, ಸೇವ್‌, ಹಸಿ ಮಾವಿನ ಚಟ್ನಿ ಸೇರಿದಂತೆ ಹತ್ತಾರು ಬಗೆಯ ತಿನಿಸುಗಳು ಸಸ್ಯಾಹಾರಿಗಳಿಗೆ ಲಭ್ಯವಿರುತ್ತದೆ. ಮಾಂಸಾಹಾರಿಗಳಿಗೆ ಕೋಳಿ, ಹಂದಿ ಮತ್ತು ಬೀಫ್‌ನ ವಿವಿಧ ಖಾದ್ಯಗಳು ಇರುತ್ತವೆ. ವಾರಾಂತ್ಯದಲ್ಲಿ ಬೆಳಿಗ್ಗೆ 9ರಿಂದಲೇ ಇವುಗಳೆಲ್ಲ ಲಭ್ಯವಿರುತ್ತವೆ.

ಸಂಪರ್ಕಕ್ಕೆ: 080 4853 6711.

ಢಾಬಾ 1986, ಮಾರತ್‌ಹಳ್ಳಿ

ಮಾರತ್‌ಹಳ್ಳಿಯ ಹೊರವರ್ತುಲ ರಸ್ತೆಯಲ್ಲಿರುವ ‘ಢಾಬಾ ಎಸ್ಟಿಮೇಟೆಡ್‌ 1986 ಡೆಲ್ಲಿ’ಯಲ್ಲಿ ಖಾರ ಮತ್ತು ಸಿಹಿ ಖಾದ್ಯಗಳ ಆಹಾರೋತ್ಸವ ‘ಆಜಾದ್‌ ಹೋ ಕೆ ಢಾಬಾ’ ನಡೆದಿದೆ. ಪ್ರಾದೇಶಿಕ ಸ್ವಾದಗಳನ್ನು ಇಲ್ಲಿ ಸವಿಯಬಹುದು.

ಪಂಜಾಬಿ ತಂಗ್ಡಿಗಳಿಂದ ರಾಜಸ್ಥಾನದ ಶುದ್ಧ ಸಸ್ಯಾಹಾರಿ ಮಸಾಲೆಯ ರುಚಿ ನೋಡುವವರಿಗೆ ಇದು ಒಳ್ಳೆಯ ಅವಕಾಶ. ರಾಜಸ್ಥಾನದ ಲಾಲ್‌ಮಾಸ್‌ ಅವುಗಳಲ್ಲೊಂದು. ಗುಜರಾತಿ ದಾಲ್‌, ಕಾಶ್ಮೀರದ ದಮ್‌ ಆಲೂ ಮತ್ತು ಮಟನ್‌ ರೊಗಾನ್‌ ಜೋಶ್‌, ಪಂಜಾಬಿ ರೆಸಿಪಿಗಳು, ಪಂಜಾಬಿ ಶೈಲಿಯಲ್ಲಿ ತಯಾರಿಸಿರುವ ತಂದೂರಿ ಚಿಕನ್‌ ಮೊಮೊ, ಮಂಚೂರಿಯನ್‌ ಇಲ್ಲಿ ಲಭ್ಯ

ಮಾಹಿತಿಗೆ: 96064 63631.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !