ವಿಶೇಷ ಅಡುಗೆಗೆ ‘ಪಾಕಚಂದ್ರಿಕೆ’

7

ವಿಶೇಷ ಅಡುಗೆಗೆ ‘ಪಾಕಚಂದ್ರಿಕೆ’

Published:
Updated:
Deccan Herald

‘ಪಾಕಚಂದ್ರಿಕೆ’ (pakachandrike) ಫುಡ್‌ ಬ್ಲಾಗ್‌ನಲ್ಲಿ ಹೊಸ ರುಚಿ, ಅಡುಗೆ ಮಾಡುವ ವಿಧಾನಗಳ ಮಾಹಿತಿಯಿದೆ. ಈ ಬ್ಲಾಗ್‌ ತೆರೆದೊಡನೇ ‘ಇದು ನನ್ನ ಅಡುಗೆ ಮನೆ. ಪ್ರಯೋಗಶಾಲೆ. ಆಗಾಗ್ಗೆ ಹೊಸ ಪ್ರಯೋಗದ ಪರಿಮಳ ಹೊಮ್ಮುತ್ತಲೇ ಇರುತ್ತದೆ. ಬನ್ನಿ, ಒಳ ಹೊಕ್ಕಿ, ಆಘ್ರಾಣಿಸಿ’ ಎಂಬ ವಾಕ್ಯಗಳು ಬ್ಲಾಗ್‌ ಬಗ್ಗೆ ಮತ್ತಷ್ಟು ಕುತೂಹಲ ಮೂಡಿಸುತ್ತದೆ. 

ಈ ಬ್ಲಾಗ್‌ನಲ್ಲಿ ಯಾರು ಆರಂಭಿಸಿದ್ದು ಎಂಬ ಮಾಹಿತಿ ಲಭ್ಯವಿಲ್ಲ. ಆದರೆ ಈ ಬ್ಲಾಗ್‌ ಆರಂಭಿಸಿದ್ದು ಅಡುಗೆ ಆಸಕ್ತಿಯಿಂದ ಎಂದು ಆಡ್ಮಿನ್‌ ಬರೆದುಕೊಂಡಿದ್ದಾರೆ. ‘ಅಡುಗೆ ಮನೆ ನನ್ನ ಪ್ರಯೋಗಶಾಲೆ ಅಲ್ಲ. ಆಗಾಗ್ಗೆ ಶಾಲೆಯೊಳಗೆ ಹೊಕ್ಕು ಪ್ರಯೋಗ ಮಾಡುವುದಿದೆ. ಹಾಗೆ ಮಾಡಿದಾಗ ಯಶಸ್ವಿ ಆದದ್ದೆಲ್ಲಾ ಹೀಗೇ ಬರೆಯುತ್ತೇನೆ’ ಎಂದು ಹೇಳಿಕೊಂಡಿದ್ದಾರೆ. 

ಈ ಬ್ಲಾಗ್‌ನಲ್ಲಿ ಸಸ್ಯಾಹಾರಿ ಅಡುಗೆಗಳ ಮಾಹಿತಿ ಇದೆ. ಕ್ಯಾಪ್ಸಿಕಂ ಮಸಾಲ, ಈರುಳ್ಳಿ ತಂಬುಳಿ, ಮೆಂತ್ಯೆ ಸೊಪ್ಪಿನ ಪಲಾವ್‌, ಟೊಮೆಟೊ ರೈಸ್‌ ಬಾತ್‌ನಂತಹ ಮಾಮೂಲಿ ಅಡುಗೆಗಳ ಜೊತೆ ಕಲ್ಲಂಗಡಿ ಸಿಪ್ಪೆ ಪಲ್ಯ, ಹೀರೇಕಾಯಿ ಸಿಪ್ಪೆ ಪಲ್ಯ,  ಕಾಯಿರಸ ಅವಲಕ್ಕಿ ಬಿಸಿ ಬೇಳೆ ಬಾತ್‌ನಂತಹ ಹೊಸ ಅಡುಗೆ ಪ್ರಯೋಗಗಳ ಮಾಹಿತಿಯೂ ಇಲ್ಲಿದೆ. ಆದರೆ ಇದರಲ್ಲಿ ಹೆಚ್ಚೆಂದರೆ 100 ಅಡುಗೆ ಮಾಹಿತಿ ಇರಬಹುದಷ್ಟೇ. ಎಲ್ಲಾ ಅಡುಗೆ ವಿವರದ ಜೊತೆಗೆ ಎಷ್ಟು ಜನರಿಗೆ ಎಷ್ಟು ಪದಾರ್ಥ ಬಳಸಬೇಕು ಎಂಬ ಮಾಹಿತಿಯೂ ಇದೆ.

ಈ ಬ್ಲಾಗ್‌ ನೋಡಿ ಅಡುಗೆ ಪ್ರಯೋಗ ಮಾಡಿ, ಅಭಿಪ್ರಾಯವನ್ನು ಹಂಚಿಕೊಳ್ಳಬಹುದು. 

 ಕೊಂಡಿ: pakachandrike.wordpress.com

ಬರಹ ಇಷ್ಟವಾಯಿತೆ?

 • 0

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !