ಆಹಹಾ! ತುಳಸಿ ಚಹಾ

7

ಆಹಹಾ! ತುಳಸಿ ಚಹಾ

Published:
Updated:

ತುಳಸಿ ‘ಆಯುರ್ವೇದ ಸಸ್ಯಗಳ ರಾಣಿ’ ಎನಿಸಿಕೊಂಡಿದೆ. ತುಳಸಿಯನ್ನು ಔಷಧಿಯಾಗಿಯೂ ಬಳಸುತ್ತಾರೆ. ಇದರ ಎಲೆಯನ್ನು ತಾಜಾವಾಗಿ, ಒಣಗಿಸಿ ಹಾಗೂ ಪುಡಿ ಮಾಡಿಟ್ಟುಕೊಂಡು ಬಳಸಿದರೂ ಅದು ಔಷಧೀಯ ಗುಣ ಹೊಂದಿದೆ. ಗಾಯಕ್ಕೆ, ಕೆಲ ಕಾಯಿಲೆಗಳಿಗೆ ಇದು ಪರಿಣಾಮಕಾರಿ ಔಷಧಿ. ದಿನದಲ್ಲಿ ಕೆಲ ತುಳಸಿ ಎಲೆಗಳನ್ನು ಜಗಿಯುವುದರಿಂದ ಆರೋಗ್ಯಕ್ಕೆ ಅನೇಕ ಉಪಯೋಗಗಳಿವೆ. ಹಾಗೇ ತುಳಸಿ ಎಲೆಯನ್ನು ಹಾಕಿ ಮಾಡಿದ ಟೀಯನ್ನು ದಿನಾ ಕುಡಿಯುವುದರಿಂದ ಆಗುವ ಪ್ರಯೋಜನಗಳ ಬಗ್ಗೆ ಗೊತ್ತೇ?

ಉಸಿರಾಟದ ತೊಂದರೆಗಳನ್ನು ದೂರ ಮಾಡುತ್ತದೆ: ತುಳಸಿ ಟೀ ಶೀತ ಹಾಗೂ ಕೆಮ್ಮುವಿನಂತಹ ಸಾಧಾರಣ ಕಾಯಿಲೆಗಳಿಗೆ ಸಿದ್ಧೌಷಧಿಯಾಗಿದೆಯಲ್ಲದೇ, ಶ್ವಾಸಕೋಶದ ತೊಂದರೆಯಿಂದ ಕಾಣಿಸಿಕೊಳ್ಳುವ ಉಸಿರಾಟ ಕಾಯಿಲೆಗೂ ರಾಮಬಾಣ. ಇದು ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚುಗೊಳಿಸಿ, ಕಫ, ಕೆಮ್ಮನ್ನು ಕಮ್ಮಿ ಮಾಡುತ್ತದೆ. ಹಾಗೇ ಅಸ್ತಮಾದಂತಹ ಕಾಯಿಲೆಯುಳ್ಳವರೂ ತುಳಸೀ ಟೀ ಕುಡಿದರೆ ಆರಾಮವೆನಿಸುತ್ತದೆ. ಸಾಧಾರಣ ಜ್ವರವನ್ನೂ ಕಡಿಮೆ ಮಾಡುವ ಶಕ್ತಿ ತುಳಸಿ ಟೀಗಿದೆ. 

ಒತ್ತಡ ನಿವಾರಕ: ಈ ಟೀ ದೇಹದ ಕಾರ್ಟಿಸೋಲ್‌ ಎಂಬ ಹಾರ್ಮೋನ್‌ ಅನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಇದನ್ನು ದೇಹದ ಒತ್ತಡನಿವಾರಕ ಹಾರ್ಮೋನ್‌ ಎಂದು ಪರಿಗಣಿಸಲಾಗುತ್ತದೆ. ಖಿನ್ನತೆ, ಆತಂಕದಂತಹ ರೋಗಗಳು ಕಡಿಮೆಯಾಗುತ್ತದೆ

ದೇಹದ ಸಕ್ಕರೆ ಅಂಶದ ಮಟ್ಟವನ್ನು ನಿಯಂತ್ರಿಸುತ್ತದೆ: ತುಳಸಿ ಟೀಯನ್ನು ಪ್ರತಿದಿನ ಒಂದು ಬಾರಿ ಸೇವಿಸುವುದರಿಂದ ದೇಹದ ಸಕ್ಕರೆ ಅಂಶ ಮಟ್ಟ ಪರಿಣಾಮಕಾರಿಯಾಗಿ ಇಳಿಕೆಯಾಗುತ್ತದೆ. ಇದು ಪಚನ ಕ್ರಿಯೆಯನ್ನು ಸುಧಾರಿಸುವುದರ ಜೊತೆಗೆ ದೇಹದ ಅನಗತ್ಯ ಕೊಬ್ಬನ್ನು ಕಡಿಮೆ ಮಾಡುತ್ತದೆ.

ಹಲ್ಲು ಮತ್ತು ಬಾಯಿಯ ಆರೋಗ್ಯಕ್ಕೆ ಉತ್ತಮ: ಈ ಟೀಯಲ್ಲಿನ ಆ್ಯಂಟಿ ಮೈಕ್ರೊಬಯಲ್‌ ಅಂಶಗಳು ಬಾಯಿಯಲ್ಲಿನ ಹಾನಿಕಾರಕ ಬ್ಯಾಕ್ಟೀರಿಯಾ ಹಾಗೂ ಹುಳಗಳ ವಿರುದ್ಧ ಹೋರಾಡುವ ಗುಣ ಹೊಂದಿದೆ. ಬಾಯಿಯ ಫ್ರೆಶ್ನರ್‌ನಂತೆ ಕೆಲಸ ಮಾಡುವ ಈ ಟೀ, ಬಾಯಿಯ ದುರ್ವಾಸನೆಯನ್ನು ದೂರ ಮಾಡುತ್ತದೆ

ಮಂಡಿನೋವನ್ನು ಕಡಿಮೆ ಮಾಡುತ್ತದೆ: ತುಳಸಿ ಎಲೆ, ಬೀಜಗಳಿಂದ ತಯಾರಿಸಿದ ಎಣ್ಣೆಯನ್ನು ಹಚ್ಚಿದರೆ ಮಂಡಿನೋವು ಕಡಿಮೆಯಾಗುತ್ತದೆ. ಈ ಎಣ್ಣೆ ಕೀಳು, ಸೊಂಟ ನೋವಿಗೂ ಉತ್ತಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !